ಮಂಗಳೂರು: “ನನ್ನ ಮನೆಯವರೇ ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ, ಬೇರೆಯವರಿಂದ ನಿರೀಕ್ಷಿಸುವುದೇ ಸಾಧ್ಯವೇ?” ಎಂದು ಸಾಮಾಜಿಕ ಮಾಧ್ಯಮದಲ್ಲಿ ಸ್ಟೇಟಸ್ ಹಾಕಿ, ಯುವತಿಯೋರ್ವಳು ಗೋಲ್ಡನ್ ಚೇಂಬರ್ ಸಮೀಪದ ಕಟ್ಟಡದಿಂದ ಜಿಗಿದು ಪ್ರಾಣ ತ್ಯಾಗ ಮಾಡಿರುವ ಘಟನೆ ನಿನ್ನೆ ಮಧ್ಯಾಹ್ನ ನಡೆದಿದ್ದು, ಸ್ಥಳೀಯರ ಆಘಾತಕ್ಕೆ ಕಾರಣವಾಗಿದೆ.
ಮಂಗಳೂರಿನ ಮುಖ್ಯಪ್ರಾಣ ದೇವಸ್ಥಾನ ಸಮೀಪ ಗೋಲ್ಡನ್ ಚೇಂಬರ್ ನಲ್ಲಿ ಘಟನೆ ನಡೆದಿದ್ದು, ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಖಷಿ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಬಂದರ್ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಯುವತಿಯು ಮಾನಸಿಕ ಒತ್ತಡದಲ್ಲಿದ್ದು, ಕುಟುಂಬದಿಂದ ಬೇಕಾದ ಪ್ರೀತಿ, ಬೆಂಬಲ ಮತ್ತು ಆತ್ಮೀಯ ಸಂವಹನದ ಕೊರತೆಯಿಂದ ಈ ನಿರ್ಧಾರಕ್ಕೆ ಬಂದಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ.
ಯುವತಿ ಆತ್ಮಹತ್ಯೆ ದೃಶ್ಯ ನೋಡಿ ಸ್ಥಳೀಯರು ಶೋಕಕ್ಕೆ ಒಳಪಟ್ಟಿದ್ದಾರೆ. ಯುವತಿ ಕಟ್ಟಡದಿಂದ ಜಿಗಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಯುವತಿ ಕಟ್ಟಡದಿಂದ ದೊಪ್ಪನೆ ಬಿದ್ದಿದ್ದು, ಇದನ್ನು ಕಂಡು ಸ್ಥಳೀಯರು ಬೆಚ್ಚಿ ಬೀಳುವುದು ವಿಡಿಯೋದಲ್ಲಿ ದಾಖಲಾಗಿದೆ.
ಹೆತ್ತವರು ಮಕ್ಕಳ ಕಡೆಗೆ ಗಮನ ನೀಡಬೇಕು. ಅವರು ಒತ್ತಡದಲ್ಲಿದ್ದರೆ, ಸಾಂತ್ವಾನದ ನುಡಿಗಳನ್ನಾಡಬೇಕು. ಅಗತ್ಯವಿದ್ದರೆ ಕೌನ್ಸಿಲಿಂಗ್ ಒದಗಿಸಬೇಕು.