ಮಂಗಳೂರು: ವೀಣಾ ಡೆಕೋರ್ & ಇವೆಂಟ್ಸ್ ಮಾಲಕರಾದ ನವೀನ್ ಚಂದ್ರ ಸಾಲ್ಯಾನ್ ನೇತೃತ್ವದಲ್ಲಿ V.D Trophy 2025 ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಕರಂಬಾರು ಕೊಪ್ಪಲ ಕ್ರಿಡಾಂಗಣದಲ್ಲಿ ನಡೆಯಿತು.
ಕ್ರಿಕೆಟ್ ಪಂದ್ಯಾಟ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಫ್ಲವರ್ ಡೆಕೋರೇಷನ್ ಮಾಲಕರ ಸಂಘದ ಅಧ್ಯಕ್ಷರಾದ ತುಷಾರ್ ಸುರೇಶ್ ಉದ್ಘಾಟಿಸಿ ಕ್ರೀಡಾ ಕೂಟಕ್ಕೆ ಶುಭ ಹ್ಯಾರೆಸಿದರು. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಕ್ರೀಡಾ ಸ್ಫೂರ್ತಿ ಮುಖ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಫ್ಲವರ್ ಡೆಕೋರೇಷನ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಜಯೇಶ್ ಬರೆಟ್ಟೋ, ಸುರೇಶ್ ಪೂಜಾರಿ ಉಪಾಧ್ಯಕ್ಷರು ದ.ಕ ಜಿಲ್ಲಾ ಪ್ಲವರ್ ಡೇಕೋರೇಶನ್ ಮಾಲಕರ ಸಂಘ ಮಂಗಳೂರು. ನಿಕಟ ಪೂರ್ವ ಅಧ್ಯಕ್ಷರಾದ ಅಶ್ವಿತ್ ಕೊಟ್ಟಾರಿ, ನಿಕಟ ಪೂರ್ವ ಕಾರ್ಯದರ್ಶಿ ಸುಲಕ್ಷಣ್ ರೈ, ಸ್ಟಾನಿ ವಾಮಂಜೂರ್ A to Z ಮಾಲಕರು, ನಿಶ್ಮಿತ್ ಶ್ರೀಯಾನ್, ರಿಚರ್ಡ್ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾ ಫ್ಲವರ್ ಡೆಕೋರೇಷನ್ ಮಾಲಕರ ಸಂಘ, ಅನಿಲ್ ಕೊಟ್ಟಾರಿ ಖುಷಿ ಇವೆಂಟ್ಸ್, ಗಣೇಶ್ ಅರ್ಬಿ ಮಾಜಿ ಅಧ್ಯಕ್ಷರು ಮಳವೂರು ಗ್ರಾಮ ಪಂಚಾಯತ್, ಶ್ರೀನಿವಾಸ ಕಾವೂರು ಮಾಲಕರು ಕಚ್ಚೂರ್ ಮಾಲ್ದಿ ಕ್ಯಾಂಟಿನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ, ಸುರೇಶ್ ಪೂಜಾರಿ ಕೊಪ್ಪಳ, ಸುರೇಂದ್ರ ಕಾಮತ್ ಕೆಂಜಾರು, ಲೋಕಯ್ಯ ಮೂಲ್ಯ, ಶೀನ ಸಾಲ್ಯಾನ್, ರಾಧಿಕಾ ನವೀನ್ ಚಂದ್ರ ಸಾಲ್ಯಾನ್, K. F. C ಕರಂಬಾರು ತಂಡದ ಕಪ್ತಾನ ಮದೂಸೂಧನ್, ಫ್ಲವರ್ ಡೆಕೋರೇಷನ್ ಸಂಘದ ಸದಸ್ಯರು ಉಪಸ್ಥಿತಿರಿದ್ದರು.
ಕ್ರಿಕೆಟ್ ಪಂದ್ಯಾಟದ ಪ್ರಥಮ ಸ್ಥಾನವನ್ನು KFC ಕರಂಬಾರು, ದ್ವಿತೀಯ ಸ್ಥಾನವನ್ನು ಕರಂಬಾರು ಟೈಗರ್ಸ್ ಪಡೆದುಕೊಂಡಿದ್ದಾರೆ. ಕಾರ್ಯಕ್ರಮ ವನ್ನು ರಾಕೇಶ್ ಕುಂದರ್ ನಿರೂಪಿಸಿದರು ವಿನಯ್ ಸಾಲ್ಯಾನ್ ವಂದಿಸಿದರು.
ಮಂಗಳೂರು: ಮುಸ್ಲಿಂ ಕುಟುಂಬವೊಂದಕ್ಕೆ ಮನೆಯಲ್ಲಿ ಅಡುಗೆ ಮಾಡಿಕೊಡಲು ಮುಸ್ಲಿಂ ಮಹಿಳೆ ಬೇಕಾಗಿದ್ದಾರೆ. Salary 25000/- ಸಂಪರ್ಕ ಸಂಖ್ಯೆ: 8660040298