ಇಂದಿನಿಂದ ಚಿನ್ನಯ್ಯನ 2ನೇ ಹಂತದ ವಿಚಾರಣೆ !

ಬೆಳ್ತಂಗಡಿ: ಬುರುಡೆ ಪ್ರಕರಣ ಆರೋಪಿಯಾಗಿ ಬಂಧನದಲ್ಲಿರುವ ಚಿನ್ನಯ್ಯನನ್ನು ಬೆಂಗಳೂರಿನಲ್ಲಿ ಸ್ಥಳ ಮಹಜರು ನಡೆಸಿದ ಬಳಿಕ ಮತ್ತೆ ಬೆಳ್ತಂಗಡಿಗೆ ಕರೆತರಲಾಗಿದೆ. ಇಂದಿನಿಂದ ಎರಡನೇ ಹಂತದ ವಿಚಾರಣೆ ಆರಂಭವಾಗಲಿದೆ.

ಚಿನ್ನಯ್ಯನನ್ನು ಆ.30ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿಗೆ ಕರೆದೊಯ್ದಿದ್ದ ಎಸ್‌ಐಟಿ ತಂಡ ಈತನಿಗೆ ಆಶ್ರಯ ನೀಡಿದ್ದ ಜಯಂತ್‌ ಟಿ. ಮತ್ತು ಮಟ್ಟಣ್ಣನವರ್‌ ಮನೆಯಲ್ಲಿ ಶೋಧ ನಡೆಸಿತ್ತು.

ಆ. 23ರಂದು ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸೆ. 3ರ ವರೆಗೆ ಅಂದರೆ 12 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ಪಡೆದಿತ್ತು. ಹಾಗಾಗಿ ಸೆ. 3ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.

ಮಂಗಳೂರು: ಮುಸ್ಲಿಂ ಕುಟುಂಬವೊಂದಕ್ಕೆ ಮನೆಯಲ್ಲಿ ಅಡುಗೆ ಮಾಡಿಕೊಡಲು ಮುಸ್ಲಿಂ ಮಹಿಳೆ ಬೇಕಾಗಿದ್ದಾರೆ. Salary 25000/- ಸಂಪರ್ಕ ಸಂಖ್ಯೆ: 8660040298

ಎಸ್‌ಐಟಿ ತಂಡವು ಚಿನ್ನಯ್ಯನನ್ನು ಕರೆದೊಯ್ದು ಮಹಜರು ನಡೆಸಿದ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಜಯಂತ್‌, ಎಸ್‌ಐಟಿ ಶೋಧ ನಡೆಸುತ್ತಿರುವುದನ್ನು ಒಪ್ಪುತ್ತೇನೆ. ನಮ್ಮ ಮನೆಯವರು ಇರುವ ಎಲ್ಲ ವಿಚಾರಗಳನ್ನು ಎಸ್‌ಐಟಿಗೆ ತಿಳಿಸಿದ್ದಾರೆ ಎಂದಿದ್ದಾರೆ.

error: Content is protected !!