ರೋಣ: ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ರೈತನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ(ಆ.28) ನಡೆದಿದೆ.
ಸಿದ್ದಲಿಂಗಯ್ಯ ಶಿವಯ್ಯ ವಸ್ತ್ರದ (50) ಮೃತ ರೈತ.
ಸಿದ್ದಲಿಂಗಯ್ಯ ಅವರು ಹುನಗುಂಡಿ ಗ್ರಾಮದಲ್ಲಿ 4 ಎಕರೆ 19 ಗುಂಟೆ ಜಮೀನು ಹೊಂದಿದ್ದು, ಕೃಷಿ ಉದ್ದೇಶಕ್ಕಾಗಿ ಹೊಳೆ ಆಲೂರ ಕೆವಿಜಿ ಬ್ಯಾಂಕ್ ನಲ್ಲಿ 4 ಲಕ್ಷ ಬೆಳೆ ಸಾಲ, ಹುನಗುಂಡಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ 80 ಸಾವಿರ ಬೆಳೆ ಸಾಲ, ಟ್ರ್ಯಾಕ್ಟರ್ ಖರೀದಿಗಾಗಿ 2 ಲಕ್ಷ ಸಾಲ ಪಡೆದುಕೊಂಡಿದ್ದರು.
ಪ್ರಸಕ್ತ ಉತ್ತಮ ಬೆಳೆ ಬಾರದೆ ಮಾಡಿದ ಸಾಲ ಹೇಗೆ ತೀರಿಸಬೇಕು ಎಂಬ ಚಿಂತೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಶಾಂತಾ ಸಿದ್ದಲಿಂಗಯ್ಯ ವಸ್ತ್ರದ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.