ಮಂಗಳೂರು: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಮಂಗಳೂರು ಘಟಕದ ವತಿಯಿಂದ ಇಂದು ರಾಷ್ಟ್ರಧ್ವಜವನ್ನು ಭಾವಭರಿತ ವಾತಾವರಣದಲ್ಲಿ ಬಾನೆತ್ತರಕ್ಕೆ ಹಾರಿಸುವ ಮೂಲಕ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಜಿ ಸೈನಿಕರಾಗಿರುವ ಕ್ಯಾಪ್ಟನ್ ದೀಪಕ್ ಆಡ್ಯoತಾಯ ಧ್ವಜಾರೋಹಣ ನೆರವೇರಿಸಿದರು. ತಮ್ಮ ಭಾಷಣದಲ್ಲಿ ಅವರು, “ಸ್ವಾತಂತ್ರ್ಯವು ನಮಗೆ ದೊರಕಿರುವ ಅತ್ಯಂತ ಅಮೂಲ್ಯವಾದ ವರ. ಇದನ್ನು ಕಾಪಾಡಲು ಪ್ರತಿ ನಾಗರಿಕನು ಜವಾಬ್ದಾರಿತನದಿಂದ ನಡೆದುಕೊಳ್ಳಬೇಕು” ಎಂದು ಹೇಳಿದರು.
ವಿಶೇಷ ಅತಿಥಿಗಳಾಗಿ ಪ್ರವೀಣ್ ಆಳ್ವ (ಮೈಟ್ರಿಕ್ಸ್ ಹಾರ್ಡ್‌ವೇರ್ ಮಾಲಕರು) ಮತ್ತು ಮಂಜುನಾಥ ಪ್ರಸಾದ್ (ಪ್ರಸಿದ್ಧ ಜ್ಯೋತಿಷಿ, ಗುರುಪುರ) ಭಾಗವಹಿಸಿ, ದೇಶದ ಅಭ್ಯುದಯಕ್ಕಾಗಿ ಮೌಲ್ಯಾಧಾರಿತ ಜೀವನದ ಮಹತ್ವವನ್ನು ವಿವರಿಸಿದರು.
ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದ ಸಹೋದರಿ ಅಂಬಿಕಾ ಮತ್ತು ಸಹೋದರಿ ಜಯಾ ಇವರು ದೇಶಪ್ರೇಮ, ಶಾಂತಿ ಮತ್ತು ಏಕತೆಯ ಸಂದೇಶವನ್ನು ನೀಡಿದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
ವಿದ್ಯಾರ್ಥಿಗಳು ಮತ್ತು ಸದಸ್ಯರಿಂದ ರಾಷ್ಟ್ರಗೀತೆ, ದೇಶಭಕ್ತಿ ಗೀತೆಗಳು, ಪ್ರಬಂಧ ಹಾಗೂ ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳು ಜರುಗಿ, ಸ್ಥಳದಲ್ಲಿ ದೇಶಭಕ್ತಿಯ ಸ್ಫೂರ್ತಿ ತುಂಬಿದ ವಾತಾವರಣ ನಿರ್ಮಾಣವಾಯಿತು.
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಲಿಂಕ್ ಬಳಸಿಕೊಳ್ಳಿ👇
ಕಾರ್ಯಕ್ರಮದಲ್ಲಿ ಸಂಸ್ಥೆಯ ಸೇವಾ ಸದಸ್ಯರು, ವಿದ್ಯಾರ್ಥಿಗಳು, ಅತಿಥಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.