ಮಲಗಿದ್ದ ದನಗಳನ್ನು ಕಳವು ಮಾಡಿದ ಖದೀಮರು: ಸಿಸಿಟಿವಿಯಲ್ಲಿ ಕೃತ್ಯ ಸೆರೆ !

ಮೂಡಿಗೆರೆ: ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಆಸ್ಪತ್ರೆ ಮುಂಭಾಗದಲ್ಲಿ ಮಲಗಿದ್ದ ಗೋವುಗಳನ್ನು ಕಳ್ಳರು ಅಮಲು ಪದಾರ್ಥ ನೀಡಿ ಕಳವುಗೈದಿರುವ ಘಟನೆ ಬುಧವಾರ(ಆ.14) ತಡರಾತ್ರಿ ನಡೆದಿದೆ.

ಗೋ ಕಳ್ಳರ ಕೃತ್ಯ ಅಲ್ಲಿನ ಆಸ್ಪತ್ರೆ ಕಟ್ಟಡದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ತಿಳಿದು ಬಂದಿದೆ.

ರಿಟ್ಸ್ ಕಾರಿನಲ್ಲಿ ಬಂದ ಗೋ ಕಳ್ಳಲು ಇಲ್ಲಿನ ಆಸ್ಪತ್ರೆ ಹೊರಭಾಗದಲ್ಲಿ ಸುಮಾರು ಹತ್ತಕ್ಕೂ ಅಧಿಕ ದನಗಳು ಮಲಗಿದ್ದನ್ನು ಗಮನಿಸಿ ಆಸ್ಪತ್ರೆ ಎದುರೇ ಕಾರು ನಿಲ್ಲಿಸಿ ಕಾರಿನಿಂದ ಇಳಿದ ಓರ್ವ ವ್ಯಕ್ತಿ ದನಗಳ ಬಳಿ ಬಂದು ಬ್ರೆಡ್ ತುಂಡುಗಳನ್ನು ಹಾಕಿದ್ದಾನೆ. ಇದನ್ನು ತಿನ್ನಲು ಬಂದ ದನವನ್ನು ಇಬ್ಬರು ಕಳ್ಳರು ಹಿಡಿದು ಕಾರಿಗೆ ತುಂಬಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಘಟನೆಯಿಂದ ಭಯಗೊಂಡ ಇತರ ದನಗಳು ಸ್ಥಳದಿಂದ ಓಡಿ ಹೋಗಿವೆ ಎಂದು ತಿಳಿದು ಬಂದಿದೆ.

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!