ಉಡುಪಿ: ಕಾಂತಾರ ಚಿತ್ರದ ಕಂಬಳದ ದೃಶ್ಯದಲ್ಲಿ ರಿಷಬ್ ಶೆಟ್ಟಿ ಜೊತೆ ಕಾಣಿಸಿಕೊಂಡಿದ್ದ ಅಪ್ಪು ಕೋಣ ಇತ್ತೀಚೆಗೆ ಸಾವನ್ನಪ್ಪಿದೆ.
ಅಪ್ಪು ಕೋಣವು ಕಾಂತಾರ ಚಿತ್ರದಲ್ಲಿ ನಾಯಕ ನಟ ರಿಷಬ್ ಶೆಟ್ಟಿ ಜೊತೆ ತೆರೆಯಲ್ಲಿ ಮಿಂಚಿತ್ತು. ಬೈಂದೂರು ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಅಪ್ಪು ಕೋಣವನ್ನು ಸಾಕಿದ್ದರು. ಚಿತ್ರೀಕರಣಕ್ಕೆ ಅಪ್ಪು ಮತ್ತು ಕಾಳ ಎನ್ನುವ ಕೋಣಗಳ ಮೂಲಕ ತರಬೇತಿ ನೀಡಲಾಗಿತ್ತು.
ಪರಮೇಶ್ವರ ಭಟ್‌ರ ಮಗಳಾದ ಚೈತ್ರಾ ಪರಮೇಶ್ವರ ಭಟ್ ಅವರ ಆರೈಕೆಯಲ್ಲಿ ಅಪ್ಪು ಮತ್ತು ಕಾಳ ಎನ್ನುವ ಕೋಣಗಳು ಬೆಳೆದಿದ್ದವು. ಕರಾವಳಿಯ ಬಹುತೇಕ ಕಂಬಳಗಳಲ್ಲಿ ಭಾಗಿಯಾಗಿ, ಬಹುಮಾನ ಸಂಪಾದಿಸಿದ್ದ ಕೋಣ ಅಪ್ಪು ಇನ್ನಿಲ್ಲ. ಅಪ್ಪುವಿಗೆ ವಿಧಿವತ್ತಾಗಿ ಅಂತಿಮ ಸಂಸ್ಕಾರ ನಡೆಸಲಾಗಿದ್ದು, ಇವನ ದಿವ್ಯಾತ್ಮಕ್ಕೆ ಹಲವಾರು ಮಂದಿ ಚಿರಶಾಂತಿ ಕೋರಿದ್ದಾರೆ.