ಉಳ್ಳಾಲ: ಸ್ಕೂಟರ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ದಾರುಣವಾಗಿ ಮೃತಪಟ್ಟ ಘಟನೆ ತೊಕ್ಕೊಟ್ಟು-ಉಳ್ಳಾಲ ರಸ್ತೆಯ ಸುಂದರಿಬಾಗ್ ಎಂಬಲ್ಲಿ ನಿನ್ನೆ ಸಂಜೆ ವೇಳೆ ಸಂಭವಿಸಿದೆ.
ಉಳ್ಳಾಲ ಕೋಟೆಪುರ ನಿವಾಸಿ, ಪ್ರಸ್ತುತ ಮುಕ್ಕಚ್ಚೇರಿಯಲ್ಲಿ ನೆಲೆಸಿರುವ ಉದ್ಯಮಿ ಇಬ್ರಾಹಿಂ (47)ಯಾನೆ ಕಮಾಲ್ ಮೃತ ದುರ್ದೈವಿ. ಮಂಗಳೂರು ಧಕ್ಕೆಯಲ್ಲಿ ಮೀನು ವ್ಯವಹಾರ ನಡೆಸುತ್ತಿದ್ದ ಅವರು ಸಂಜೆ ವೇಳೆ ತೊಕ್ಕೊಟ್ಟು ಕಡೆಯಿಂದ ಮನೆ ಕಡೆಗೆ ಪುತ್ರನನ್ನು ಕುಳ್ಳಿರಿಸಿ ಸ್ಕೂಟರಿನಲ್ಲಿ ತೆರಳುವ ಸಂದರ್ಭ, ಆಯತಪ್ಪಿ ಸ್ಕೂಟರ್ ವಿದ್ಯುತ್ ಕಂಭಕ್ಕೆ ಢಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡ ಇಬ್ರಾಹಿಂ ಅವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.