ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಅಮೂಲ್ಯ(Amulya) ಪೀಕ್‌ನಲ್ಲಿದ್ದಾಗಲೇ ಅಂದರೆ 2017ರಲ್ಲಿ ಉದ್ಯಮಿ ಹಾಗೂ ರಾಜಕಾರಣಿ ಜಗದೀಶ್ ಆರ್ ಚಂದ್ರರನ್ನ ಮದುವೆಯಾಗಿದ್ದರು. ಈ ದಂಪತಿಗೆ ಅಥರ್ವ್ ಹಾಗೂ ಆಧವ್ ಎಂಬ ಹೆಸರಿನ ಅವಳಿ ಗಂಡು ಮಕ್ಕಳಿದ್ದಾರೆ. ಮದುವೆಯ ನಂತರ ಕಂಪ್ಲೀಟ್ ಆಗಿ ಚಿತ್ರರಂಗದಿಂದ ದೂರವಿದ್ದ ನಟಿ ಅಮೂಲ್ಯ ತನ್ನ ನೆಚ್ಚಿನ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ʻಜೀ ಕನ್ನಡʼ ವಾಹಿನಿಯು ʻನಾವು ನಮ್ಮವರುʼ ಎಂಬ ಹೊಸ ರಿಯಾಲಿಟಿ ಶೋನ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಸಜ್ಜಾಗಿದೆ. ವಿಶೇಷ ಅಂತಂದ್ರೆ ಈ ಶೋನ ಜಡ್ಜ್ ಆಗಿ ನಟಿ ಅಮೂಲ್ಯ ಕಾಣಿಸಿಕೊಳ್ಳುತ್ತಿದ್ದಾರೆ. ʻನಾವು ನಮ್ಮವರುʼ ರಿಯಾಲಿಟಿ ಶೋನ ಪ್ರೋಮೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ʻನಾವು ನಮ್ಮವರುʼ ರಿಯಾಲಿಟಿ ಶೋ ಆಗಸ್ಟ್ 2ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ʻಸಂಬಂಧಗಳು ನಿಜವಾಗಿರೋ ಕಥೆಗಳನ್ನು ಮರೆಯಲಾಗದು. ಪ್ರೀತಿ, ನಗು, ಒಗ್ಗಟ್ಟು ಹಾಗೂ ಬಾಂಧವ್ಯದ ಕ್ಷಣಗಳನ್ನು ಹೊತ್ತು ಬರ್ತಿದೆʼ ಎಂಬ ಘೋಷಣೆಯೊಂದಿಗೆ ಈ ಶೋನ ಪ್ರೋಮೋ ಎಲ್ಲರ ಗಮನ ಸೆಳೆಯುತ್ತಿದೆ.
ʻನಾವು ನಮ್ಮವರುʼ ರಿಯಾಲಿಟಿ ಶೋ ಸಂಬಂಧಗಳ ಸೌಂದರ್ಯವನ್ನು ಆಚರಿಸುವ, ಭಾವನಾತ್ಮಕವಾದ ಕಥೆಗಳಿಗೆ ಒತ್ತು ನೀಡುವ ಕಾರ್ಯಕ್ರಮವಾಗಿದೆ.
ಈ ಶೋ ಕುಟುಂಬದ ಒಗ್ಗಟ್ಟು, ಪ್ರೀತಿ, ನಗು ಮತ್ತು ಬಾಂಧವ್ಯದ ಕ್ಷಣಗಳನ್ನು ಒಳಗೊಂಡಿದೆ. ಈ ಶೋನ ಕಾನ್ಸೆಪ್ಟ್ ಕನ್ನಡ ಕಿರುತೆರೆಯಲ್ಲಿ ವಿಭಿನ್ನವಾದ, ಭಾವನಾತ್ಮಕವಾದ ಅನುಭವವನ್ನು ನೀಡುವ ಭರವಸೆಯನ್ನು ಹೊಂದಿದೆ. ನಟಿ ಅಮೂಲ್ಯ, ʻಚೆಲುವಿನ ಚಿತ್ತಾರʼ, ʻಶ್ರಾವಣಿ ಸುಬ್ರಹ್ಮಣ್ಯʼ, ʻನಾನು ನನ್ನ ಕನಸುʼ, ʻಗಜಕೇಸರಿʼ, ʻಕೃಷ್ಣ ರುಕ್ಕುʼ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಿಟಿಸಿದ್ದಾರೆ.