
ಮಂಗಳೂರು: “ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಗಂಭೀರ ಪ್ರಕರಣದ ತನಿಖೆಗೆ ನೇಮಕವಾದ SIT ತಂಡದ ಮುಂದಾಳತ್ವ ವಹಿಸಿರುವ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿಯವರ ಬದಲು ಇದರ ಮುಂದಾಳತ್ವವನ್ನು ಡಾ.ಕೆ. ರಾಮಚಂದ್ರ ರಾವ್ ಅಥವಾ ದಯಾನಂದರಂತಹ ಐಪಿಎಸ್ ಅಧಿಕಾರಿಗಳಿಗೆ ನೀಡಬೇಕೆಂದು ಆಗ್ರಹಿಸಿ ಮಾಜಿ ಡಿವೈ ಎಸ್ಪಿ ಅನುಪಮ ಶೆಣೈ ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸರಕಾರಕ್ಕೆ ಆಗ್ರಹಿಸಿದ್ದಾರೆ.
”ಪ್ರಣಬ್ ಮೊಹಾಂತಿಯವರನ್ನು SITಯ ಮುಖ್ಯಸ್ಥರಾಗಿ ನೇಮಿಸುವ ಕುರಿತು ಮಾನ್ಯ ಘನ ಉಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 8403/2025ನ್ನು ಉಲ್ಲೇಖಿಸಲಾಗುತ್ತಿದೆ. ಈ ರಿಟ್ ಅರ್ಜಿಯು ಸೈಬರ್ ಕ್ರೈಮ್ ಕುರಿತಾದುದಾಗಿದೆ ಮತ್ತು ಆ ಅವಧಿಯಲ್ಲಿ ಪುಣಬ್ ಮೊಹಾಂತಿಯವರು CIDಯ Cyber Economics ಮತ್ತು Narcotics ನ (CEN) ADGPO ಅವರ ನೇತೃತ್ವದಲ್ಲಿ SIT ರಚಿಸಲು ಆದೇಶ ಮಾಡಲಾಗಿದೆ. ಪ್ರಣಬ್ 2 B.E., M.S in Computer Science, PhD ಹಾಗು ಇವರು certified Forensic Computer Examiner ಆಗಿರುತ್ತಾರೆ. ಇವೆಲ್ಲವನ್ನು ಗಮನಿಸಿದಾಗ, ಇವರ ನೈಪುಣ್ಯತೆಯು Cyber Crime ಆಗಿದೆಯೇ ವಿನ: ಅತ್ಯಾಚಾರ ಮತ್ತು ನರಹತ್ಯೆ ಕುರಿತಾದ ತನಿಖೆಗೆ ಇವರು ಸೂಕ್ತ ವ್ಯಕ್ತಿಯಲ್ಲ ಎಂದು ಪೊಲೀಸರೇ ಹೇಳುತ್ತಿದ್ದಾರೆ” ಎಂದವರು ಹೇಳಿದರು.
”ಈ ಹಿಂದೆ ಮಂಗಳೂರಿನ ಚರ್ಚ್ ಗಲಭೆಯ ರಾಜಕೀಯದಿಂದಾಗಿ ಕನ್ನಡಿಗ ಡಿವೈಎಸ್ಪಿ ಎಂ.ಕೆ.ಗಣಪತಿಯವರು ಸಚಿವ ಕೆ.ಜೆ.ಜಾರ್ಜ್ ರಿಂದಾಗಿ ಬಹಳಷ್ಟು ಕಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವಾಗ ಡಿವೈಎಸ್ಪಿ ಗಣಪತಿಯವರು ಕೆ.ಜೆ.ಜಾರ್ಜ್ ಜತೆ ಐಪಿಎಸ್ ಅಧಿಕಾರಿ ಎ.ಎಂ.ಪ್ರಸಾದ್ ಮತ್ತು ಪ್ರಣಬ್ ಮೊಹಾಂತಿಯವರ ಹೆಸರನ್ನೂ ಸಹ ಉಲ್ಲೇಖಿಸಿದ್ದರು.
ಹೀಗಾಗಿ ಈ SIT ಮುಖಂಡರಾಗಿ ಪ್ರಣಬ್ ಮೊಹಾಂತಿಯವರ ನೇಮಕದಲ್ಲಿ ಕೆ.ಜೆ.ಜಾರ್ಜ್ ರವರ ಕೈವಾಡ ಇದೆ ಎಂದೇ ಪೊಲೀಸರು ಹೇಳುತ್ತಿದ್ದಾರೆ. ಸರಕಾರ ಈ ಕೂಡಲೆ ಪೊಲೀಸರ ಭಾವನೆಗೆ ಗೌರವ ಕೊಟ್ಟು ಪ್ರಣಬ್ ಮೊಹಾಂತಿಯವರ ನೇಮಕವನ್ನು ರದ್ದುಗೊಳಿಸಿ ಬೇರೆ ಅಧಿಕಾರಿಯನ್ನು ನೇಮಿಸುವಂತೆ ಆಗ್ರಹಿಸಿದರು.