ಮಂಗಳೂರು: ರಾಜ್ಯ ರೈಲ್ವೆ ಸಚಿವ ಶ್ರೀ ವಿ. ಸೊಮ್ಮಣ್ಣ ಅವರು ಮಂಗಳೂರು ಸೆಂಟ್ರಲ್ ನಿಂದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ಗೆ ಸಾಗುವ ನವಯುಗ ಎಕ್ಸ್‌ಪ್ರೆಸ್ ರೈಲನ್ನು ಹೊಸ ಮಾರ್ಗದಲ್ಲಿ ಪ್ರಾರಂಭಿಸುವ ಪ್ರಯತ್ನಕ್ಕೆ ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಂ.ಎಲ್.ಸಿ. ಕಿಶೋರ್ ಕುಮಾರ್ ಪುತ್ತೂರು ಧನ್ಯವಾದ ಸಲ್ಲಿಸಿದ್ದಾರೆ.
ನವಯುಗ ಎಕ್ಸ್‌ಪ್ರೆಸ್ (ಟ್ರೆನ್ ಸಂಖ್ಯೆ 16687 / 16688) ಅನ್ನು ಈಗ ಈ ಹೊಸ ಮಾರ್ಗದಲ್ಲಿ ಪ್ರಸ್ತಾವಿಸಲಾಗಿದೆ:
ಮಂಗಳೂರು ಸೆಂಟ್ರಲ್ – ಹಾಸನ – ಅರಸಿಕೇರಿ – ಹುಬ್ಬಳ್ಳಿ – ಬೆಳಗಾವಿ – ಮಿರಜ್ – ಪುಣೆ – ನವದೆಹಲಿ – ಪಠಾನ್ಕೋಟ್ – ಜಮ್ಮು – ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ.
“ಮಂಗಳೂರು ಮತ್ತು ಕರಾವಳಿ ಪ್ರದೇಶದ ಜನರಿಗೆ ಉತ್ತರ ಭಾರತದ ಪ್ರಮುಖ ತೀರ್ಥಕ್ಷೇತ್ರವಾದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ಸಂಪರ್ಕ ಕಲ್ಪಿಸುವ ನವಯುಗ ಎಕ್ಸ್‌ಪ್ರೆಸ್ ಮರುಪ್ರಾರಂಭದಿಂದ ಭಕ್ತಿಗೆ, ಪ್ರವಾಸೋದ್ಯಮಕ್ಕೆ, ಸೇನೆಯಲ್ಲಿ ಸೇವೆ ಸಲ್ಲಿಸುವ ಯೋಧರಿಗೆ, ವ್ಯಾಪಾರಿಗೂ ಕೂಡ ಸಹಾಯವಾಗುತ್ತದೆ. ಈ ರೈಲನ್ನು ನಿಗದಿತ ಹೊಸ ಮಾರ್ಗದಲ್ಲಿ ಪುನರಾರಂಭಿಸಲು ರಾಜ್ಯದ ಎಲ್ಲಾ ಸಂಸದರು ಶ್ರಮಿಸಿ, ರೈಲ್ವೆ ಸಚಿವಾಲಯದ ಗಮನ ಸೆಳೆಯಬೇಕು.” ಎಂದು ಶ್ರೀ ಕಿಶೋರ್ ಕುಮಾರ್ ಪುತ್ತೂರು ಹೇಳಿದ್ದಾರೆ.
ಶ್ರೀ ವಿ. ಸೊಮ್ಮಣ್ಣ ಅವರು ಈ ರೈಲು ಸಾಗುವ ಕೇಂದ್ರಗಳ ಪ್ರಮುಖ ಸಂಸದರಾಗಿರುವಂತಹ ಶ್ರೀ ಪ್ರಹ್ಲಾದ್ ಜೋಶಿ, ಕ್ಯಾಪ್ಟನ್ ಬೃಜೇಶ್ ಚೌಟ ಅವರು ಈ ಕುರಿತು ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಇದಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19