ಚೀನಾ ನಿರ್ಮಿತ ವಾಯುಪಡೆಯ ತರಬೇತಿ ಜೆಟ್ ಪತನ : ಸಾವಿನ ಸಂಖ್ಯೆ 27ಕ್ಕೆ ಏರಿಕೆ

ಢಾಕಾ: ಮೈಲ್ಸ್ಟೋನ್ ಸ್ಕೂಲ್ ಅಂಡ್ ಕಾಲೇಜ್ ಕ್ಯಾಂಪಸ್ ನಲ್ಲಿ ಚೀನಾ ನಿರ್ಮಿತ F-7 BGI ವಿಮಾನ ಜೆಟ್ ಪತನಗೊಂಡಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ(ಜು.21) ಮಧ್ಯಾಹ್ನ 1:06ಕ್ಕೆ ವಿಮಾನ ಟೇಕ್ ಆಫ್ ಆಗಿದ್ದ ಸ್ವಲ್ಪ ಸಮಯದ ನಂತರ ಉತ್ತರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ವಿಮಾನವು ಮೈಲ್‌ಸ್ಟೋನ್ ಕಾಲೇಜಿನ ಕಟ್ಟಡಕ್ಕೆ ಡಿಕ್ಕಿ ಹೊಡೆದಿದ್ದು, ಇದರಿಂದಾಗಿ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಭಯಭೀತರಾಗಿದ್ದರು ಹಾಗೂ ಈ ಕಟ್ಟಡವನ್ನು ಪ್ಲೇಗ್ರೂಪ್ ತರಗತಿಗಳಿಗೆ ಬಳಸಲಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಮಾನ ಪತನದಲ್ಲಿ ಆರಂಭದಲ್ಲಿ ಸಾವಿನ ಸಂಖ್ಯೆ 20 ಎಂದು ಪ್ರಕಟಿಸಲಾಗಿತ್ತು ಆದರೆ ವೈದ್ಯರ ಹೇಳಿಕೆಯ ಪ್ರಕಾರ, ಸಾವಿನ ಸಂಖ್ಯೆ 27ಕ್ಕೆ ಏರಿಕೆಯಾಗಿದ್ದು, ಒಟ್ಟು 171 ಮಂದಿ ಗಾಯಗೊಂಡಿದ್ದಾರೆ. ಹಲವರ ಪರಿಸ್ಥಿತಿ ತೀವ್ರ  ಗಂಭೀರವಾಗಿದ್ದು ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಚೀನಾ ನಿರ್ಮಿತ ಎಫ್-7 ಬಿಜೆಐ ವಿಮಾನದ ಪೈಲಟ್ ಕೂಡಾ ದುರಂತದಲ್ಲಿ ಮೃತಪಟ್ಟಿದ್ದಾಗಿ ಬಾಂಗ್ಲಾದೇಶದ ಸೇನೆ ಪ್ರಕಟಿಸಿದೆ. ಯಾಂತ್ರಿಕ ವೈಫಲ್ಯದಿಂದ ಈ ದುರಂತ ಸಂಭವಿಸಿದೆ. ನಿಖರವಾದ ಕಾರಣ ತಿಳಿಯುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದೆ.

ಅಗ್ನಿಶಾಮಕ ದಳದ ಮೂರು ಘಟಕಗಳು ಇನ್ನೂ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಗಾಯಾಳುಗಳನ್ನು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆ, ಕುರ್ಮಿಟೋಲಾ ಜನರಲ್ ಆಸ್ಪತ್ರೆ, ಕುವೈತ್ ಬಾಂಗ್ಲಾದೇಶ ಸ್ನೇಹ ಸರ್ಕಾರಿ ಆಸ್ಪತ್ರೆ, ಉತ್ತರ ಮಹಿಳಾ ವೈದ್ಯಕೀಯ ಕಾಲೇಜು ಮತ್ತು ಶಹೀದ್ ಮನ್ಸೂರ್ ಅಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಗ್ನಿಶಾಮಕ ದಳದ ಕರ್ತವ್ಯ ಅಧಿಕಾರಿ ಲಿಮಾ ಖಾನ್ ಪ್ರೋಥೊಮಾಲೊಗೆ ತಿಳಿಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಮಂಗಳವಾರ ರಾಷ್ಟ್ರೀಯ ಶೋಕಾಚರಣೆಗೆ ಬಾಂಗ್ಲಾದೇಶದ ಹಂಗಾಮಿ ನಾಯಕ ಮುಹಮದ್ ಯೂನುಸ್ ಕರೆ ನೀಡಿದ್ದಾರೆ.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

 

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

error: Content is protected !!