ತಿರುವನಂತಪುರಂ: ಕೇರಳದ ಮಾಜಿ ಸಿಎಂ, ಹಿರಿಯ ಸಿಪಿಐ(ಎಂ) ನಾಯಕ ವಿ.ಎಸ್.ಅಚ್ಯುತಾನಂದನ್ ಅವರು ಇಂದು (ಜು.21) ಮಧ್ಯಾನದ ವೇಳೆಗೆ ನಿಧನ ಹೊಂದಿದ್ದಾರೆ. ಅವರಿಗೆ 101 ವರ್ಷ ವಯಸ್ಸಾಗಿತ್ತು.
ಅವರು ಹಲವು ಸಮಯದಿಂದ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 101 ವರ್ಷ ವಯಸ್ಸಾಗಿತ್ತು.
ವಿ.ಎಸ್.ಅಚ್ಯುತಾನಂದನ್ ಅವರು ಕೇರಳದ ಅತ್ಯಂತ ವರ್ಚಸ್ವಿ ಮತ್ತು ರಾಜಿಯಾಗದ ರಾಜಕಾರಣಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. ಅವರ ಸರಳತೆ, ಸಮಗ್ರತೆ ಮತ್ತು ಸಾಮಾನ್ಯ ಜನರಿಗಾಗಿ ಉಗ್ರವಾದ ವಕಾಲತ್ತುಗಾಗಿ ಪಕ್ಷಾತೀತವಾಗಿ ಮೆಚ್ಚುಗೆ ಪಡೆದವರು. ಎಂಟು ದಶಕಗಳಿಗೂ ಹೆಚ್ಚು ಕಾಲದ ಅವರ ರಾಜಕೀಯ ಜೀವನವು ಅವರನ್ನು ಆಕರ್ಷಣೀಯ ವ್ಯಕ್ತಿಯಾಗಿ ಮಾತ್ರವಲ್ಲದೆ ಭಾರತದ ಎಡಪಂಥೀಯರ ಅತ್ಯಂತ ಪ್ರಬಲ ಧ್ವನಿಗಳಲ್ಲಿ ಒಬ್ಬರನ್ನಾಗಿ ಮಾಡಿತು. ಹಾಗೆಯೇ ಇವರು ಹಿರಿಯ ಕಮ್ಯುನಿಸ್ಟ್ ನಾಯಕ, ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ಭಾರತದ ಎಡ ಚಳವಳಿಯ ಕೊನೆಯ ಅತ್ಯುನ್ನತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.
1964 ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ದಿಂದ ಬೇರ್ಪಟ್ಟು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ವನ್ನು ರಚಿಸಿದ 32 ನಾಯಕರಲ್ಲಿ ಅಚ್ಯುತಾನಂದನ್ ಅವರು ಕೂಡ ಒಬ್ಬರು.
1923ರ ಅಕ್ಟೋಬರ್ 20ರಂದು ಅಲಪ್ಪುವಿನ ಬಡ ಕುಟುಂಬದಲ್ಲಿ ಜನಿಸಿದ್ದ ಅಚ್ಯುತಾನಂದನ್ ಅವರು ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಸಣ್ಣ ವಯಸ್ಸಿನಲ್ಲಿಯೇ ಅವರು ಟೈಲರ್ ಅಂಗಡಿಯೊಂದರಲ್ಲಿ ಅವರು ಕೆಲಸ ಮಾಡಲು ಆರಂಭಿಸಿದ್ದರು. ಬಳಿಕ ನಾರಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ್ದ ಅವರು ಬಳಿಕ ಕಮ್ಯೂನಿಸ್ಟ್ ಚಳುವಳಿಯಲ್ಲಿ ಸೇರಿದ್ದರು.
ಜೂನ್ 23 ರಂದು ಹೃದಯಾಘಾತಕ್ಕೊಳಗಾದ ನಂತರ ಅವರನ್ನು ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮಧ್ಯಾಹ್ನ ಸಿಎಂ ಪಿಣರಾಯಿ ವಿಜಯನ್ ಮತ್ತು ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಹಾಗೂ ಹಿರಿಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿದ್ದರು.
ಮಂಗಳವಾರ ಪಾರ್ಥಿವ ಶರೀರವನ್ನು ಆಲಪ್ಪುಗೆ ತೆಗೆದುಕೊಂಡು ಹೋಗಲಾಗುವುದು ಮತ್ತು ಬುಧವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19