ಮಂಗಳೂರು: ಅಮೃತ ಪ್ರಕಾಶ ಪತ್ರಿಕೆ ಹಾಗೂ ಸರಕಾರಿ ಪ್ರೌಢ ಶಾಲೆ ಅತ್ತಾವರ ಮಂಗಳೂರು ಜಂಟಿ ಆಶ್ರಯದಲ್ಲಿ 109ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ನಾಳೆ (18-07-2025) 2 ಗಂಟೆಗೆ ಅತ್ತಾವರ ಶಾಲೆ ಸಭಾಂಗಣದಲ್ಲಿ ಮುಖ್ಯೋಪಾಧ್ಯಾಯ ಬಿ.ರಾಘವೇಂದ್ರ ರಾವ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಹಿರಿಯ ಬರಹಗಾರರು ಹಾಗೂ ಲೇಖಕರಾದ ಎನ್ ಸುಬ್ರಾಯ. ಭಟ್ ಹಾಗೂ ಶಿಕ್ಷಕಿ ಕವಯಿತ್ರಿ ನಿರ್ಮಲ ಉದಯಕುಮಾರ್ ಭಾಗವಹಿಸುವರು. ಗೌರವ ಉಪಸ್ಥಿತಿ ಅತಿಥಿಗಳಾಗಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇದರ ಅಧ್ಯಕ್ಷರಾದ ಭಾಸ್ಕರ್ ರೈ ಕಟ್ಟ ಹಾಗೂ ಹಿರಿಯ ಯೋಗ ಶಿಕ್ಷಕಿ ದೇವಿಕಾ ಪುರುಷೋತ್ತಮ್ ಉಪಸ್ಥಿತರಿರುವರು ಎಂದು ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.