ಬೈಂದೂರು: ಯಡ್ತರೆ ಗ್ರಾಮದ ಬೈಂದೂರು ಜಾಮಿಯಾ ಮಸೀದಿಯ ಕೆರೆಯಲ್ಲಿ ಕಾಲು ತೊಳೆಯಲು ಹೋದ ಬಾಲಕ ಅಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಿನ್ನೆ ಸಾಯಂಕಾಲ ಸಂಜೆ 6.45ರ ಸುಮಾರಿಗೆ ಸಂಭವಿಸಿದೆ.

ಬೈಂದೂರಿನ ಅಬ್ದುಲ್ ರಹೀಮ್ ಎಂಬವರ ಮಗ ಅಯಾನ್ ರಝಾ(12) ಮೃತ ಬಾಲಕ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.