ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ʼಭಾರತದಲ್ಲಿ ಪೋಷಕಾಂಶಗಳ ಸೇವನೆ’ ಎನ್ನುವ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕಳೆದ ಆರೇಳು ವರ್ಷಗಳ ಹಿಂದಿನ ಆಹಾರ ಪದ್ಧತಿಗೆ ಹೋಲಿಸಿದಾಗ ಭಾರತೀಯರು ಇಂದು ಹೆಚ್ಚು ಪ್ರೊಟೀನ್ ಬಳಸುತ್ತಿದ್ದಾರೆ. ಆದರೆ, ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಕೊಬ್ಬಿನ ಅಂಶವುಳ್ಳ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಭಾರತದಲ್ಲಿ ಪೋಷಕಾಂಶಗಳ ಸೇವನೆʼ ಎನ್ನುವ ವರದಿಯು ದೇಶದ ವಿವಿಧ ರಾಜ್ಯ, ವಲಯ ಮತ್ತು ವರ್ಗಗಳ ಜನರ ಪ್ರತಿದಿನದ ತಲಾವಾರು ಮತ್ತು ಘಟಕವಾರು ಆಹಾರ ಪದಾರ್ಥಗಳ ಬಳಕೆಯನ್ನು ಆಧರಿಸಿ ಅವರು ತಿನ್ನುವಕ್ಕಾಲೊರಿ, ಕೊಬ್ಬಿನ ಅಂಶ ಮತ್ತು ಪ್ರೊಟೀನ್ ಪ್ರಮಾಣವನ್ನು ಲೆಕ್ಕ ಹಾಕಲಾಗಿದೆ. ಈ ವರದಿಯಲ್ಲಿ 2022ರ ಆಗಸ್ಟ್‌ನಿಂದ 2023ರ ಜುಲೈವರೆಗೆ ಮತ್ತು 2023ರ ಆಗಸ್ಟ್‌ನಿಂದ 2024ರ ಜುಲೈವರೆಗೆ ನಡೆಸಿದ ಕುಟುಂಬ ಬಳಕೆ ವೆಚ್ಚ ಸಮೀಕ್ಷೆಗಳ ದತ್ತಾಂಶವನ್ನು (ಎಚ್‌ಸಿಇಎಸ್) ಬಳಸಿಕೊಳ್ಳಲಾಗಿದೆ. ಈ ಎರಡು ಅವಧಿಗಳ ನಡುವೆ ಕ್ಯಾಲೊರಿ, ಕೊಬ್ಬಿನ ಅಂಶ, ಪ್ರೊಟೀನ್ ಸೇವನೆಯಲ್ಲಿ ಹೆಚ್ಚಿನ ಬದಲಾವಣೆಗಳೇನೂ ಇಲ್ಲ. ಅದರೆ, ದಶಕಕ್ಕೂ ಹಿಂದಿನ ಅವಧಿಗೆ (2009-10 ಮತ್ತು 2011-12) ಹೋಲಿಸಿದರೆ, ಪ್ರೊಟೀನ್‌ಗಳ ಸೇವನೆಯಲ್ಲಿ ಅಲ್ಪ ಹೆಚ್ಚಳ ಆಗಿದ್ದರೆ, ಕೊಬ್ಬಿನ ಅಂಶವುಳ್ಳ ಪದಾರ್ಥಗಳ ಸೇವನೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ.
ಹೌದು, ಸಮೀಕ್ಷೆಯ ಪ್ರಕಾರ ದಶಕದ ಹಿಂದಿನ ಅವಧಿಗೆ ಹೋಲಿಸಿದರೆ ನಮ್ಮ ಈಗಿನ ಆಹಾರ ಬಳಕೆಯಲ್ಲಿ ಅದೆಷ್ಟೋ ವ್ಯತ್ಯಾಸಗಳು ಕಾಣಸಿಗುತ್ತದೆ. ಇದಕ್ಕೆ ಸಾಕ್ಷಿ ಬೇಕರಿ ಉತ್ಪನ್ನಗಳನ್ನು ಮತ್ತು ಕರಿದ ತಿಂಡಿಗಳನ್ನು ಮಾರುವ ಅಂಗಡಿಗಳ ಸಂಖ್ಯೆತೀವ್ರವಾಗಿ ಏರಿರುವುದು.ನಮ್ಮ ತಾಲೂಕು ಕೇಂದ್ರಗಳಿಗಿಂತಲೂ ಸಣ್ಣದಾದ ಒಂದೆರಡು ಪೇಟೆಗಳಲ್ಲಿ ಗಮನಿಸುತ್ತ ಬಂದಿರುವೆ. ಎಲ್ಲ ಕಡೆಗಳಲ್ಲೂ ಇಂತಹ ಅಂಗಡಿಗಳ ಸಂಖ್ಯೆ ಆರೇಳು ವರ್ಷಗಳಲ್ಲಿ ಮೂರು ನಾಲ್ಕು ಪಟ್ಟು ಏರಿಕೆ ಕಂಡಿದೆ.
ಹಾಗೆಯೇ ನಮ್ಮ ತಾಲೂಕು ಕೇಂದ್ರದ ಮುಖ್ಯರಸ್ತೆಯಲ್ಲಿ ಸುಮಾರು ಇನ್ನೂರು ಮೀಟರಿನಷ್ಟು ಉದ್ದದ ಮಿತಿಯಲ್ಲಿ ಆರೇಳು ವರ್ಷಗಳ ಹಿಂದೆ ಎರಡು ಅಥವಾ ಮೂರು ಅಂತಹ ಅಂಗಡಿಗಳಿದ್ದಲ್ಲಿ ಈಗ ಅಂತಹ ಎಂಟು ಹತ್ತು ಅಂಗಡಿಗಳಿವೆ. ಇನ್ನು ಇಂತಹ ಪೇಟೆಗಳಲ್ಲಿ ಬೇಕರಿಗಳೆಂಬ ಹೆಸರುಗಳ ಅಂಗಡಿಗಳಲ್ಲದೆ ಬಹಳಷ್ಟು ಜನರಲ್ ಸ್ಟೋರ್ ಗಳಲ್ಲೂ ಕಂಪೆನಿಗಳ ಸಿದ್ಧ ಕೇಕುಗಳು, ಬ್ರೆಡ್ ಇತ್ಯಾದಿ ಬೇಕರಿ ಉತ್ಪನ್ನಗಳಲ್ಲದೆ ಕರಿದ ತಿಂಡಿಗಳನ್ನು ಮಾರುವುದೂ ತುಂಬಾ ಸಾಮಾನ್ಯ.
ಇನ್ನಿತರ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳ ಸಂಖ್ಯೆಯಲ್ಲಿ ಬೇಕರಿ ಉತ್ಮನ್ನ ಮಾರುವ ಅಂಗಡಿಗಳಂತೆ ಅಸಹಜವೆಂಬ ಏರಿಕೆ ಕಾಣುವುದಿಲ್ಲ. ಬಟ್ಟೆ ಅಂಗಡಿ, ದಿನಸಿ, ಹಾರ್ಡ್ ವೇರ್ , ಫ್ಯಾನ್ಸಿ, ಹೋಟೆಲು, ಮುಂತಾದವುಗಳ ಅಂಗಡಿಗಳಲ್ಲಿ ದರ ಏರಿಕೆ ಇದೆಯಾದರೂ ಈ ಬೇಕರಿ ಉತ್ಪನ್ನಗಳ ಅಂಗಡಿಗಳಲ್ಲಿ ಅಚ್ಚರಿ ಎನಿಸುವಷ್ಟು ಏರಿಕೆ ಕಂಡಿಲ್ಲ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t