ಜುಲೈ 2- ವಿಶ್ವ ಯುಎಫ್‌ಓ ದಿನ: ನಮ್ಮ ಜೊತೆಯಲ್ಲಿಯೇ ಇವೆ ʻಎಲಿಯನ್ಸ್!ʼ

ಪ್ರತಿ ಜುಲೈ 2 ಅನ್ನು ವಿಶ್ವ UFO ದಿನವೆಂದು(World UFO Day) ಆಚರಿಸಲಾಗುತ್ತಿದೆ. ಅನ್ಯ ಲೋಕದ ಜೀವಿಗಳು ಸಂಚರಿಸುವ ವ್ಯೋಮ ನೌಕೆಗಳನ್ನು ಜನರು ಆಕಸ್ಮತ್‌ ಆಗಿ ಕಂಡು ಗಾಬರಿ ಬೀಳುತ್ತಾರೆ. ಇವುಗಳ ಹಲವಾರು ವಿಡಿಯೋ, ಫೋಟೋಗಳು ಇಂಟರ್‌ನೆಟ್‌ ಅಲ್ಲಿ ಲಭ್ಯವಿದೆ. ಇವುಗಳ ಮಧ್ಯೆ ನಕಲಿಗಳೂ ಇವೆ. ಜನರಿಗೆ ಖಗೋಳದಲ್ಲಿ ಆಸಕ್ತಿ ಹುಟ್ಟಿ, ಅನ್ಯಲೋಕದ ಜೀವಿಗಳ ಬಗ್ಗೆ ಕುತೂಹಲ, ಸಂಶೋಧನೆ, ಅವರನ್ನು ಭೇಟಿಯಾಗುವ ತವಕ, ಪ್ರಯತ್ನ ಹೆಚ್ಚಲಿ ಎಂದೇ ಈ ದಿನವನ್ನು ವಿಶ್ವ ಹಾರುವ ತಟ್ಟೆಗಳ ದಿನ ಎಂದು ಕರೆಯಲಾಗಿದೆ.

World UFO Day: 7 UFO sightings that surprised (and shocked) the world

ಅನ್ಯಲೋಕದ ಜೀವಿಗಳು ನಮ್ಮ ನಡುವಲ್ಲೇ ಇದ್ದಾರಂತೆ. ಅವರು ಮನಷ್ಯ ರೂಪದಲ್ಲಿ, ಪ್ರಾಣಿಗಳ ರೂಪದಲ್ಲಿ ನಮ್ಮ ಜೊತೆಗೇ ಇವೆಯಂತೆ. ಯಾಕೆಂದರೆ ಅವುಗಳಿ ಯಾವ ರೂಪವನ್ನೂ ತಾಳುವ ಶಕ್ತಿ ಇದೆಯಂತೆ. ಎಲಿಯನ್‌ಗಳ ತಳಿಗಳು ಈ ಜಗತ್ತಲ್ಲಿದ್ದು ಅವರೇ ಇಡೀ ಜಗತ್ತನ್ನು ನಿಯಂತ್ರಿಸುವ ರೆಪ್ಟಲಿಯನ್‌ “Reptilian” ಎಂಬ ಹೈಬ್ರಿಡ್‌ ತಳಿಗಳೆಂದು ನಂಬಲಾಗಿದೆ. ಮುಖ್ಯವಾಗಿ ದೇಶ ದೇಶಗಳನ್ನು ಆಳುವ ನಾಯಕರು, ಸಂಗೀತಕಾರರು, ಚಿತ್ರನಟರು, ಉದ್ಯಮಿಗಳು ಇವೆಲ್ಲಾ Reptilian ತಳಿಗಳೆಂದು ಸಂಶೋಧನೆಗಳ ಮೂಲಕ ಕೆಲವು ನಿಗೂಢ ವಿಜ್ಞಾನಿಗಳು ಬಯಲು ಮಾಡುತ್ತಾ ಇದ್ದಾರೆ.

ರೆಪ್ಟಲಿಯನ್‌ ಎನ್ನುವುದು ಮೂಲತಹ ಅನ್ಯ ಲೋಕದ ಜೀವಿಗಳಾಗಿದ್ದು, ಅವರ ಡಿಎನ್‌ಎಗಳನ್ನು ಮನುಷ್ಯನ ಡಿಎನ್‌ಎಯೊಂದಿಗೆ ಮಿಕ್ಸ್‌ ಮಾಡಿ ಹೊಸ ಮನುಷ್ಯರಿಗಿಂತಲೂ ಉನ್ನತ ಸ್ಥರದ ಜೀವಿಗಳನ್ನು ಸೃಷ್ಟಿಸಲಾಗಿದ್ದು, ಆ ರೀತಿ ಹುಟ್ಟಿದ ಜೀವಿಗಳೇ ಈ ಜಗತ್ತನ್ನು ನಿಯಂತ್ರಿಸುತ್ತಿದೆ ಎಂದು ಖ್ಯಾತ ವಿಜ್ಞಾನಿ ಡೇವಿಡ್‌ ಐಕ್‌ ಸಂಶೋಧನೆಗಳನ್ನು ಮಾಡಿದ್ದಾರೆ. ಇಂದಿನ ಎಲ್ಲಾ ಸಂಶೋಧನೆಗಳೂ ಕೂಡಾ ಎಲಿಯನ್‌ ಟೆಕ್ನಾಲಜಿಗಳಾಗಿದ್ದು, ಅದರಲ್ಲಿ AI ಕೂಡಾ ಒಂದು. ಇಂತಹಾ ಹಲವು ದಂತ ಕಥೆಗಳಿದ್ದು, ಇದೆಲ್ಲಾ ಮನುಷ್ಯನಿಗೆ ಹುಚ್ಚು ಹಿಡಿಸಬಹುದು. ಆದರೆ ಕೆಲಸವೊಂದು ಸತ್ಯಗಳನ್ನು ಜಗತ್ತಿನ ಉನ್ನತ ನಾಯಕರು, ವಿಜ್ಞಾನಿಗಳು ಜಗತ್ತಿನ ಮುಂದೆ ಇಡುವುದಿಲ್ಲ. ಹಾಗಾಗಿ ಇವುಗಳ ಬಗ್ಗೆ ತಿಳಿಯಲು dark webಗಳ ಮೊರೆ ಹೋಗಬೇಕಾಗುತ್ತದೆ.

ಕೆನ್ನೆತ್ ಆರ್ನಾಲ್ಡ್ ಕಂಡ “ಹಾರುವ ತಟ್ಟೆಗಳು” – ವಾಷಿಂಗ್ಟನ್, USA (ಜೂನ್ 1947)

UFO (1)
ಪೈಲಟ್ ಕೆನ್ನೆತ್ ಆರ್ನಾಲ್ಡ್ ಹಾರುವ ತಟ್ಟೆಗಳನ್ನು ತಾವೇ  ಕುದ್ದಾಗಿ ಕಂಡು ಅದರ ಬಗ್ಗೆ ಜನತೆಗೆ ಹೇಳದೇ ಇರುತ್ತಿದ್ದರೆ   ಅಮೆರಿಕಾದಲ್ಲಿ ತಾವೂ ಸಹ ಅಂತದ್ದೇ ವಸ್ತುವನ್ನು ಕಂಡಿದ್ದಾಗಿ ಧೈರ್ಯವಾಗಿ ಹೇಳಲು ಯಾರೂ  ಮುಂದೆ ಬರುತ್ತಿರಲಿಲ್ಲವೇನೋ?  ಅಂದು ಯಾರಾದರೂ ಇಂಥದೊಂದು ವಿಷ್ಯ ಇದೆ ಎಂದಾಗಲೇ ಅನ್ಯರು ಮುಸಿ ಮುಸಿ ನಗುತ್ತಿದ್ದರು.

ಪೈಲಟ್ ಕೆನ್ನೆತ್ ಆರ್ನಾಲ್ಡ್ ವಾಷಿಂಗ್ಟನ್‌ನ ಮೌಂಟ್ ರೈನಿಯರ್ ಬಳಿ ಒಂಬತ್ತು ಹೈ-ಸ್ಪೀಡ್, ಡಿಸ್ಕ್-ಆಕಾರದ ವಸ್ತುಗಳನ್ನು ಗುರುತಿಸಿದರು. ಆರ್ನಾಲ್ಡ್ ಅವುಗಳ ವೇಗ ಸುಮಾರು 1,200 mph ಎಂದು ಅಂದಾಜಿಸಿದರು ಮತ್ತು ಅವುಗಳ ಚಲನೆಯನ್ನು “ನೀರಿನ ಮೇಲೆ ಹಾರುವ ತಟ್ಟೆಗಳಂತೆ”   ಇತ್ತು ಎಂದು ವಿವರಿಸಿದರು. ಅವರ ಮಾತಿನಿಂದ ಇಡೀ ಜಗತ್ತಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಆದ್ರೆ ಮಿಲಿಟರಿ ಈ ದೃಶ್ಯವನ್ನು ಭ್ರಮೆ ಎಂದು ತಿರಸ್ಕರಿಸಿತು. ಆ ಬಳಿಕ ಇಡೀ ಜಗತ್ತಲ್ಲಿ ನಾವೂ ಸಹ ಇಂಥ ನಿಗೂಢ ವಸ್ತುಗಳನ್ನು ಕಂಡಿದ್ದಾಗಿ ಮುಂದೆ ಬಂದು, ಅನೇಕ ಫೋಟೋ, ವಿಡಿಯೋಗಳು ಬಹಿರಂಗಗೊಂಡವು.

ರೋಸ್‌ವೆಲ್ ಘಟನೆ – ನ್ಯೂ ಮೆಕ್ಸಿಕೊ, USA (ಜುಲೈ 1947)

UFO (2)
ಒಬ್ಬ ಜಾನುವಾರು ಸಾಕಣೆದಾರ ವಿಚಿತ್ರ ಅವಶೇಷಗಳನ್ನು ಕಂಡುಕೊಂಡರು.  ಅದರ ಫೋಟೋ ಸಹ ತೆಗೆದರು. ಮಿಲಿಟರಿ ಆರಂಭದಲ್ಲಿ “ಹಾರುವ ತಟ್ಟೆ” ಎಂದು ಘೋಷಿಸಿತು. ಇದರಿಂದ ಜನರಲ್ಲಿ ಭಯ, ಆತಂಕ ಉಂಟಾಗಿರುವುದನ್ನು ಕಂಡು ಬೆಚ್ಚಿ ಬಿದ್ದ ಮಿಲಿಟರಿ ಅದು ಅಪಘಾತಕ್ಕೀಡಾದ ಹವಾಮಾನ ಬಲೂನ್ ಎಂದು ಹೇಳಿಕೊಂಡಿತು.

ರೆಂಡಲ್‌ಶ್ಯಾಮ್ ಕಾಡಿನಲ್ಲಿ ಘಟನೆ – ಸಫೊಲ್ಕ್, ಇಂಗ್ಲೆಂಡ್ (ಡಿಸೆಂಬರ್ 1980)

UFO (3)
ಈ ವಿಚಿತ್ರ ಘಟನೆಯನ್ನು “ಬ್ರಿಟನ್‌ನ ರೋಸ್‌ವೆಲ್” ಎಂದು ಕರೆಯಲಾಗುತ್ತದೆ. ಆರ್‌ಎಎಫ್ ವುಡ್‌ಬ್ರಿಡ್ಜ್‌ನಲ್ಲಿ ಯುಎಸ್ ಮಿಲಿಟರಿ ಸಿಬ್ಬಂದಿ ಇದ್ದರು. ಅವರಿಗೆ ಪ್ರತೀ ರಾತ್ರಿ ಪ್ರಜ್ವಲಿಸುವ ದೀಪಗಳು, ಲೋಗಳ ಕರಕುಶಲ ವಸ್ತುಗಳು ಕಂಡವು. ಕೆಲವರ ಪ್ರಕಾರ ಅದರ ಒಳಗಡೆ ಸಣ್ಣ ಮನುಷ್ಯ ರೂಪಿ ವ್ಯಕ್ತಿಗಳನ್ನು ಸಹ ಇದ್ದರು. ಉಪ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ಚಾರ್ಲ್ಸ್ ಹಾಲ್ಟ್ ಈ ಘಟನೆಗಳನ್ನು ಒಂದು ಜ್ಞಾಪಕ ಪತ್ರದಲ್ಲಿ ದಾಖಲಿಸಿದ್ದಾರೆ, ಇದು ಕೆಲವೇ ಆಂತರಿಕ ಮಿಲಿಟರಿ ದಾಖಲೆಗಳಲ್ಲಿ ಒಂದಾಗಿದೆ. ಈ ಘಟನೆಯಿಂದ ಇಂಗ್ಲೆಂಡ್‌ನಲ್ಲಿ ಆತಂಕ ಉಂಟಾಗುವುದನ್ನು ಗಮನಿಸಿದ ರಕ್ಷಣಾ ಸಚಿವಾಲಯವು ಈ ಘಟನೆಯನ್ನು ಅಲ್ಲಗಳೆಯಲೆಂದು ಪ್ಲಾಸ್ಮಾ ಮತ್ತು ಸಾಮೂಹಿಕ ಭ್ರಮೆಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ತೇಪೆ ಹಾಕಿದ್ದರು. ಆದರೆ ಅಲ್ಲಿ ಇಂತಹಾ ದೃಶ್ಯ ಕಂಡವರಲ್ಲಿ ಸಾಮಾನ್ಯ ಜನರಿರಲಿಲ್ಲ, ಬದಲಿಗೆ ಮಿಲ್ಟ್ರಿಮ್ಯಾನ್‌ಗಳಾಗಿದ್ದರು. ಇಲ್ಲಿರುವುದು ಲೆಫ್ಟಿನೆಂಟ್ ಕರ್ನಲ್ ಚಾರ್ಲ್ಸ್ ಹಾಲ್ಟ್  ಟೀಮಿನವರು ತೆಗೆದ ಫೋಟೋ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಫೀನಿಕ್ಸ್ ಲೈಟ್ಸ್ – ಅರಿಜೋನಾ, ಯುಎಸ್ಎ (ಮಾರ್ಚ್ 1997)

UFO (4)
ಅರಿಜೋನಾ ಮತ್ತು ನೆವಾಡಾದಾದ್ಯಂತ ಸಾವಿರಾರು ಜನರು ರಾತ್ರಿ ಆಕಾಶದಲ್ಲಿ ತೂಗಾಡುತ್ತಿರುವ ಅಥವಾ ತೇಲುತ್ತಿರುವ ದೀಪಗಳನ್ನು ಕಂಡು ಬೆಚ್ಚಿಬಿದ್ದರು. ಅಲ್ಲದೆ ವಿ-ಆಕಾರದ ರಚನೆಯನ್ನು ವೀಕ್ಷಿಸಿದರು. ಹವ್ಯಾಸಿ ಪೈಲಟ್ ಕಂ ನಟ ಕರ್ಟ್ ರಸೆಲ್ ಈ ವಿದ್ಯಮಾನವನ್ನು ವಾಯು ಸಂಚಾರ ನಿಯಂತ್ರಣ ಘಟಕದ ಮುಂದೆ ತಿಳಿಸಿದರು. ಯುಎಸ್ ವಾಯುಪಡೆ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಲಿಲ್ಲ. ಅರಿಜೋನಾದ ಗವರ್ನರ್ ಕೂಡ ಹಾಗೆ, ಅವರು ಈ ಘಟನೆಯನ್ನು ಅಸಂಬದ್ಧ ಎಂದರು.

ʻಒ’ ಹೇರ್ ವಿಮಾನ ನಿಲ್ದಾಣದ ಘಟನೆ – ಚಿಕಾಗೋ, ಯುಎಸ್ಎ (ನವೆಂಬರ್ 2006)

UFO (5)
ʻಓ’ಹೇರ್ ಇಂಟರ್ನ್ಯಾಷನಲ್‌ ಏರ್‌ಪೋರ್ಟಲ್ಲಿ, ಯುನೈಟೆಡ್ ಏರ್‌ಲೈನ್ಸ್ ಸಿಬ್ಬಂದಿ ಮತ್ತು ವಿಮಾನಯಾನ ಸಿಬ್ಬಂದಿ ಗೇಟ್ ಸಿ-17 ರ ಮೇಲೆ ಹಲವು ನಿಮಿಷಗಳ ಕಾಲ ಸುಳಿದಾಡುತ್ತಿರುವ ಕಪ್ಪು, ಲೋಹದ ತಟ್ಟೆಯನ್ನು ಗಮನಿಸಿದರು, ಅದು ಮೇಲಕ್ಕೆ ಹಾರಿತು, ಮೋಡದ ಪದರವನ್ನು ಸೀಳಿ “ಜೆಟ್ ತರಹದ ವೇಗ” ದಲ್ಲಿ ಸಾಗುತ್ತಿತ್ತು. ಕೊನೆಗೆ ಮೋಡಗಳಲ್ಲಿ ವೃತ್ತಾಕಾರದ ರಂಧ್ರವನ್ನು ಮೂಡಿತು. ಈ ಲೋಹದ ವಸ್ತು ರಂಧ್ರದ ಒಳಗಡೆ ಪ್ರವೇಶಿಸಿ ಮಾಯವಾಯಿತು. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಹೊರತಾಗಿಯೂ, FAA ಅದು ಹವಾಮಾನ ವೈರಿತ್ಯದಿಂದ ನಡೆದ ಘಟನೆ ಎಂದು ಮುಚ್ಚಿಹಾಕಿತು. ಆದರೆ ಅದನ್ನು ಕಂಡವರ ಬಳಿ ಅವುಗಳ ಚಿತ್ರ ಸಹ ಇದ್ದು, ಅದು ಖಂಡಿತಾ UFO ಅನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಏರಿಯಲ್ ಸ್ಕೂಲ್ ಘಟನೆ – ರುವಾ, ಜಿಂಬಾಬ್ವೆ (ಸೆಪ್ಟೆಂಬರ್ 1994)

UFO (6)
ಇ 6–12 ವರ್ಷ ವಯಸ್ಸಿನ 62 ಶಾಲಾ ಮಕ್ಕಳು ಹೇಳಿಕೆ ಪ್ರಕಾರ ಒಂದು ಬೆಳ್ಳಿ ರೀತಿಯ ಕ್ರಾಫ್ಟ್ ಹತ್ತಿರ ಇಳಿದ ನಿಗೂಢ ಜೀವಿಗಳು ಟೆಲಿಪಥಿ ಮೂಲಕ ಸಂವಹನ ನಡೆಸಿದ್ದರು ಎಂದು ವರದಿ ಮಾಡಿದ್ದಾರೆ. ಕೆಲವು ಮಕ್ಕಳು ಇದನ್ನು ಕಂಡು ಬೆಚ್ಚಿಬಿದ್ದರೆ ಕೆಲವರು ಕಣ್ಣೀರು ಹಾಕಿದ್ದಾರೆ ಎಂದು ಹೇಳಿಕೊಂಡರು. “1990 ರ ದಶಕದ ಮೂರನೇ‌ ಕ್ಲೋಸ್ ಎನ್ಕೌಂಟರ್” ಎಂದು ಕರೆಯಲ್ಪಡುವ ಈ ಘಟನೆಯು ಜಾಗತಿಕ ಗಮನ ಸೆಳೆಯಿತು. ಮಕ್ಕಳು ಇದರ ಚಿತ್ರವನ್ನೂ ಸಹ ಬಿಡಿಸಿದ್ದರು. ಇದು ಸಮೂಹ ಸನ್ನಿ ಎಂದು ಅಲ್ಲಗಳೆದರೂ ಇದು ನಡೆದಿರುವುದು ಮಾತ್ರ ಸತ್ಯ.

ಬೆಲ್ಜಿಯನ್ UFO ವೇವ್ – ಬೆಲ್ಜಿಯಂ (1989 – 1990)

UFO (7)
1989 ರ ಅಂತ್ಯ ಮತ್ತು 1990 ರ ಆರಂಭದ ನಡುವೆ, ಬೆಲ್ಜಿಯಂ UFO ದೃಶ್ಯಗಳ ಪ್ರವಾಹನ್ನೇ ನೋಡಿದ್ದಾರೆ. ಪ್ರಕಾಶಮಾನವಾದ ದೀಪಗಳನ್ನು ಹೊಂದಿರುವ  ತ್ರಿಕೋನ ಕ್ರಾಫ್ಟ್ ರೀತಿಯ ವಸ್ತುಗಳನ್ನು ಕಂಡರು. ಇದು ಹೆಚ್ಚಾದಾಗ ಅಲ್ಲಿನ ಸರ್ಕಾರ ರಾಡಾರ್ ಮೂಲಕ ಟ್ರ್ಯಾಕಿಂಗ್ ಮಾಡಿದರು. ಮಿಲಿಟರಿಗೆ ನಿಗಾ ವಹಿಸಲು ಸೂಚಿಸಿದರು. ಬೆಲ್ಜಿಯನ್ ವಾಯುಪಡೆಯು F-16 ಜೆಟ್‌ಗಳ ಬೆನ್ನು ಬಿದ್ದಾಗ ಆ ಕ್ರಾಫ್ಟ್ ರಾಡಾರ್‌ನಿಂದ ತಪ್ಪಿಸಿಕೊಂಡಿತು ಮತ್ತು ಪೈಲಟ್‌ಗಳಿಗೆ ಲಾಕ್ ಮಾಡಲು ಸಾಧ್ಯವಾಗಲಿಲ್ಲ. ಇಂದಿಗೂ, ಬೆಲ್ಜಿಯನ್ UFO ಘಟನೆ ಇಂದಿಗೂ ಯುರೋಪಿನ ಅತ್ಯಂತ ಉತ್ತಮವಾಗಿ ದಾಖಲಿಸಲ್ಪಟ್ಟ ನಿಗೂಢ ಘಟನೆಗಳಲ್ಲಿ ಒಂದಾಗಿದೆ.

ಇಂದಿಗೂ ನಮ್ಮ ಕಣ್ಣಿಗೆ ಆಕಸ್ಮತ್‌ ಆಗಿ ಇಂಥಾ ದೃಶ್ಯಗಳು ಕಾಣಿಸುತ್ತವೆ. ಭಾರತದಲ್ಲೂ ಸಾಕಷ್ಟು ufo ಗಳು ಕಂಡಿವೆ. ಅವುಗಳ ದಾಖಲೀಕರಣ ನಡೆದಿದೆ. ಆದರೆ ಈ ಅನ್ಯಲೋಕದ ಜೀವಿಗಳಿಗೂ ಅಮೆರಿಕಾ, ರಷ್ಯಾದಂಥಾ ಮಿಲಿಟರಿ ಬಲಾಢ್ಯ ರಾಷ್ಟ್ರಗಳ ಪ್ರಮುಖರು ಈ ನಿಗೂಢ ಲೋಕದ ಜೀವಿಗಳ ಜೊತೆ ಲಿಂಕ್‌ ಇರುವುದರಿಂದಲೇ ಅವುಗಳು ಜಗತ್ತಿಗೆ ಗೊತ್ತಾಗದಂತೆ ಮರೆಮಾಚುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ನಾನು ಹೇಳಿದ್ದು, ಎಲಿಯನ್‌ಗಳು ನಮ್ಮ ಜೊತೆಯೇ ಇದ್ದಾರೆ. ನಮ್ಮನ್ನು ಆಳುತ್ತಿದ್ದಾರೆ. ನಮ್ಮ ನಮ್ಮಲ್ಲಿಯೇ ಯುದ್ಧ ಮಾಡುವಂತೆ ಪ್ರೇರೇಪಿಸಿ ಈ ಜಗತ್ತಿನ ಜನಸಂಖ್ಯೆಯನ್ನು ನಿಯಂತ್ರಿಸುತ್ತಿದ್ದಾರೆ.
ಇಂಥಾ ಯೋಚನೆಗಳು ಇದೀಗ ಸಾರ್ವತ್ರಿಕವಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಎಲಿಯನ್‌ ಹಾಗೂ ಮನುಷ್ಯರು ಮುಖಾಮುಖಿಯಾಗುವ ದಿನ ದರೂವಿಲ್ಲ!

ವಿಶ್ವ UFO ದಿನದ ಶುಭಾಶಯಗಳು!

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!