ಸರ್ಕಾರಿ ನೌಕರಿ ಕೊಡಿಸುವುದಾಗಿ 200 ರೂ. ವಂಚನೆ: 30 ವರ್ಷಗಳ ನಂತರ ಆರೋಪಿ ಸೆರೆ

ಕಾರವಾರ: ಮೂವತ್ತು ವರ್ಷಗಳ ಮುಂಚೆ ಸರ್ಕಾರಿ ನೌಕರಿ ಕೊಡಿಸುವುದಾಗಿ 200 ರೂ. ಪಡೆದು ವಿದ್ಯಾರ್ಥಿಯೋರ್ವನನ್ನು ವಂಚಿಸಿದ್ದ ಆರೋಪಿಯನ್ನು ಶಿರಸಿ ಪೊಲೀಸರು ಇದೀಗ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬೈಂದೂರಿ ಮೂಲದ ಪ್ರಸ್ತುತ ಬೆಂಗಳೂರಿನ ಬಳೆಪೇಠೆಯಲ್ಲಿ ನಿವಾಸಿ ಬಿ.ಕೆ. ರಾಮಚಂದ್ರ ರಾವ್ ಬಂಧಿತ ಆರೋಪಿ.

ಈತನು 1990 ರಲ್ಲಿ ಶಿರಸಿಯಲ್ಲಿ ಬಿಳಿಗಿರಿ ಕೊಪ್ಪ ವೆಂಕಟೇಶ ವೈದ್ಯ ಎಂಬಾತನು ಪದವಿ ಓದುತ್ತಿರುವಾಗ ನೀಲಕಂಠ ಹೆಗಡೆ ಎಂಬವರ ಮೂಲಕ ಪರಿಚಯವಾಗಿತ್ತು. ವೆಂಕಟೇಶ್ ಎಂಬಾತನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ 200 ರೂ. ಗಳನ್ನು ಪಡೆದು ವಂಚಿಸಿ ಪರಾರಿಯಾಗಿದ್ದ. ಈ ಕುರಿತು ಶಿರಸಿ ಠಾಣೆಯಲ್ಲಿ ವೆಂಕಟೇಶ್ ವೈದ್ಯ ದೂರು ದಾಖಲಿಸಿದ್ದರು‌. ಆದರೆ, ಆರೋಪಿ ಪತ್ತೆಯಾಗಿರಲಿಲ್ಲ.

ಆದರೇ ಡಿವೈಎಸ್‌ಪಿ ಗೀತಾ ಪಾಟೀಲ್ ಹಾಗೂ ಶಿರಸಿ ಗ್ರಾಮೀಣ ಠಾಣೆಯ ಪಿಐ ಮಂಜುನಾಥ್ ಮಾರ್ಗದರ್ಶನ ಮತ್ತು ಪಿಎಸ್ಐ ಸಂತೋಷಕುಮಾರ್ ಹಾಗೂ ಅಶೋಕ್ ರಾಠೋಡ್ ಅವರ ತಂಡ 30 ವರ್ಷದ ನಂತರ ಆರೋಪಿಯನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿ ಬಂಧಿಸಿ ಶಿರಸಿಗೆ ಕರೆತಂದು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಆತನನ್ನು ಕಾರವಾರ ಜೈಲಿಗೆ ಅಟ್ಟಲಾಗಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!