ಮಂಗಳೂರು: ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು ತಾನು ಕೆಲಸ ನಿರ್ವಹಿಸಿದ್ದ ಬ್ಯಾಂಕಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಕೊಡಿಯಾಲ್‌ಬೈಲ್‌ನ ಕೆನರಾ ಬ್ಯಾಂಕಿನಲ್ಲಿ ನಡೆದಿದೆ. ಅಳಕೆ ನಿವಾಸಿ ಗಿರಿಧರ್ ಯಾದವ್(61) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಕೊಡಿಯಾಲ್‌ಬೈಲ್ ಕೆನರಾ ಬ್ಯಾಂಕ್‌ನಲ್ಲಿ ಸುಮಾರು 40 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಇವರು, ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಆದರೂ ಬ್ಯಾಂಕಿನ ಮೇಲಿನ ಪ್ರೀತಿಯಿಂದ ಬ್ಯಾಂಕ್‌ಗೆ ಹೋಗಿ ಬರುತ್ತಿದ್ದರು ಎಂದು ಹೇಳಲಾಗಿದೆ. ಅದೇ ರೀತಿ ನಿನ್ನೆ ಕೂಡಾ ಬ್ಯಾಂಕಿಗೆ ತೆರಳಿದವರು ಮತ್ತೆ ಮನೆಗೆ ಹಿಂದಿರುಗಿರಲ್ಲಿಲ್ಲ. ಈ ಹಿನ್ನಲೆ ಗಿರಿಧರ್ ಪತ್ನಿ ಮಂಗಳೂರಿನ ಬಂದರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಇಂದು ಅಂದರೆ ಜೂನ್ 26ರಂದು ಗುರುವಾರ ಬೆಳಿಗ್ಗೆ ಬ್ಯಾಂಕ್ ಬಾಗಿಲು ತೆರೆದಾಗ ಬ್ಯಾಂಕ್ ಸ್ಟೋರ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗಿರಿಧರ್ ಅವರ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಗಿರಿಧರ್ ಯಾದವ್ ಅವರು ರಾಜ್ಯಮಟ್ಟದ ಪವರ್ ಲಿಪ್ಟರ್ ಆಗಿದ್ದು, ಹಲವಾರು ಪದಕಗಳನ್ನು ಗಳಿಸಿದ್ದಾರೆ. ಅವರಿಗೆ ಆರೋಗ್ಯದ ಸಮಸ್ಯೆ ಇತ್ತು ಎಂದು ಹೇಳಲಾಗಿದೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝