ಡಮ್ಮಿ ಡೆತ್‌ನೋಟ್‌ ಬರೆದಿದ್ದು ನಾಪತ್ತೆಯಾಗಿದ್ದ ಮಹಿಳೆ ವಾಪಸ್:‌ ಯುವಕನೂ ಮನೆಗೆ ಹಾಜರ್

ಉಡುಪಿ: ಕುಂದಾಪುರದ ಕೋಡಿ ಸೇತುವೆ ಬಳಿ ಸ್ಕೂಟರ್‌ ನಿಲ್ಲಿಸಿ ಡಮ್ಮಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ವಿಠಲವಾಡಿ ನಿವಾಸಿ ಹೀನಾ ಕೌಸರ್ ಮರಳಿ ಮನೆಗೆ ಬಂದಿದ್ದಾರೆ. ಇದೇ ವೇಳೆ ನಾಪತ್ತೆಯಾಗಿದ್ದ ಸಾಹಿಲ್‌ ಕೂಡಾ ಮನೆಗೆ ವಾಪಸ್‌ ಆಗಿದ್ದು, ಇದು ಊರಲ್ಲಿ ಬಹುವಿಧ ಚರ್ಚೆಗೆ ಕಾರಣವಾಗಿದೆ.

ಪೊಲೀಸರ ಮುಂದೆ ಬಾಯ್ಬಿಟ್ಟ ಹೀನಾ, ಅಬಿದಾ ಎಂಬಾಕೆಯ ಚಿತ್ರಹಿಂಸೆಯಿಂದ ಖಿನ್ನತೆಗೊಳಗಾಗಿ ಕೋಡಿ ಸೇತುವೆ ಬಳಿ ಬಂದೆ. ಆದರೆ ಅಲ್ಲಿ ಮೀನುಗಾರರಿದ್ದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲಾಗದೆ ಉಳ್ಳಾಲ ದರ್ಗಾ ಸೇರಿಕೊಂಡೆ ಎಂದಿದ್ದಾರೆ. ಇದೇ ವೇಳೆ ಸಾಹಿಲ್‌ ಬಗ್ಗೆ ಪ್ರಶ್ನಿಸಿದಾಗ ಆತನ ಬಗ್ಗೆ ಏನೂ ಗೊತ್ತಿಲ್ಲ, ಅವನಿಗೂ ನನಗೂ ಸಂಬಂಧ ಇಲ್ಲ ಎಂದಿದ್ದರು. ಇದೀಗ ಸಾಹಿಲ್‌ ಕೂಡಾ ಮನೆಗೆ ಬಂದಿದ್ದಾರೆ.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!