10ನೇ ಕ್ಲಾಸಿನ ಮಗಳ ಪ್ರೇಮಕ್ಕೆ ತಾಯಿ ವಿರೋಧ: ಬಾಯ್‌ಫ್ರೆಂಡ್‌ ಜೊತೆ ಸೇರಿ ಅಮ್ಮನನ್ನೇ ಕೊಂದ ಬಾಲಕಿ

ತೆಲಂಗಾನ: ಪ್ರೀತಿ ಪ್ರೇಮದ ಸಂಬಂಧದ ಬಗ್ಗೆ ಬುದ್ಧಿ ಹೇಳಿದ ತಾಯಿಯನ್ನೇ ಹದಿನಾರರ ಹುಡುಗಿಯೊಬ್ಬಳು ತನ್ನ ಪ್ರಿಯಕರ ಹಾಗೂ ಸೋದರನ ಜೊತೆ ಸೇರಿ ಅಮಾನುಷವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ತೆಲಂಗಾಣದ ಮೆಡ್ಚಾಲ ಜಿಲ್ಲೆಗೆ ಸೇರುವ ಆದರೆ ಹೈದರಾಬಾದ್‌ನ ಉಪನಗರ ವ್ಯಾಪ್ತಿಗೆ ಸೇರುವ ಜೆಡ್ಡಿಮೆಟ್ಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.


ಅಂಜಲಿ(39) ಹತ್ಯೆಗೀಡಾದ ದುರ್ದೈವಿ ತಾಯಿ.

10ನೇ ತರಗತಿಯಲ್ಲಿ ಓದುತ್ತಿದ್ದ ಮಗಳ ಪ್ರೇಮ ಸಂಬಂಧವನ್ನು ನೋಡಿದ ತಾಯಿ ಅಂಜಲಿ ಮಗಳಿಗೆ ಬುದ್ಧಿ ಹೇಳಿ ಬೈದಿದ್ದಾಳೆ. ಇದರಿಂದ ಅಮ್ಮನ ಮೇಲೆ ಸಿಟ್ಟಾಗಿದ್ದ ಮಗಳು ಅಮ್ಮನಿಗೆ ಒಂದು ಗತಿ ಕಾಣಿಸುವ ನಿರ್ಧಾರಕ್ಕೆ ಬಂದಿದ್ದಾಳೆ. ತನ್ನ ಬಾಯ್‌ಫ್ರೆಂಡ್ 19 ವರ್ಷದ ಪಗಿಲ್ಲಾ ಶಿವ ಎಂಬಾತನ ಜೊತೆ ಅಮ್ಮ ಬೈದಿರುವ ವಿಚಾರವನ್ನು ಹೇಳಿದ್ದಳು. ಆತ ತಾಯಿಯ ಕೊಲೆ ಮಾಡುವ ರೂಪಿಸಿದ್ದಾನೆ.
ಬಾಲಕಿ ತನ್ನ 18 ವರ್ಷದ ಸೋದರ ಯಶ್ವಂತ್‌ ಹಾಗೂ ಬಾಯ್‌ಫ್ರೆಂಡ್ ಪಗಿಲ್ಲಾ ಶಿವ ಜೊತೆ ಸೇರಿಕೊಂಡು ಮೂವರು ಸೇರಿ ಅಂಜಲಿಯ ಕತ್ತು ಹಿಸುಕಿ, ಕಬ್ಬಿಣದ ರಾಡ್‌ಗಳಿಂದ ಆಕೆಯ ತಲೆಗೆ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಇದು ಪೂರ್ವ ನಿಯೋಜಿತ ಕೃತ್ಯ ಎಂದು ತನಿಖಾಧಿಕಾರಿಗಳು ಹೇಳಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ. ಅಪ್ರಾಪ್ತ ಬಾಲಕಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದಾರೆ. ಈ ಕೊಲೆಯ ಹಿಂದಿರುವ ನಿಜವಾದ ಕಾರಣ ಏನು ಎಂಬ ಬಗ್ಗೆ ತಿಳಿಯಲು ಪೊಲೀಸರು ಈ ಮೂವರು ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!