ಆಂಧ್ರಪ್ರದೇಶ: ತೆಲಂಗಾಣದ ಗದ್ವಾಲ್‌ನ ತೇಜೇಶ್ವರ್ ನಂದ್ಯಾಲ್(32) ಎಚ್‌ಎನ್‌ಎಸ್‌ಎಸ್ ಕಾಲುವೆಯ ಬಳಿ ಶವವಾಗಿ ಪತ್ತೆಯಾಗಿದ್ದು, ಕೊಲೆ ಹಿಂದೆ ಪತ್ನಿಯ ಕೈವಾಡವಿದೆ ಅನುಮಾನ ಶಂಕೆ ಮೂಡಿದೆ. ತೆಜೇಶ್ವರ್ ಐಶ್ವರ್ಯಾ ಎಂಬುವವರನ್ನು ಕಳೆದ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದು, ತೇಜೇಶ್ವರ್ ಜೂನ್ 17ರಿಂದ ಕಾಣೆಯಾಗಿದ್ದರು. ಅವರ ಸಹೋದರ ತೇಜವರ್ಧನ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವುದಾಗಿ ದೂರು ನೀಡಿದ್ದರು. ಮೊಬೈಲ್ ಟ್ರ್ಯಾಕ್ ಮಾಡಿ ಜೂನ್ 21ರಂದು ಕಾಲುವೆ ಬಳಿ ಶವವನ್ನು ಪತ್ತೆ ಮಾಡಿದ್ದರು. ಪತ್ನಿಯೇ ಪ್ರಿಯಕರನ ಜೊತೆ ಸೇರಿ ಸುಪಾರಿ ಕೊಟ್ಟು ಪತಿ ತೇಜಸ್ವರ್ ನ ಕೊಲೆ ಮಾಡಿಸಿದ್ದಾಳೆ ಎಂದು ತಿಳಿದುಬಂದಿದೆ.
ಮೇ 18ರಂದು ಐಶ್ವರ್ಯಾ ತೇಜೇಶ್ವರ್ ಪ್ರೇಮ ವಿವಾಹವಾಗಿದ್ದರು. ಐಶ್ವರ್ಯಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ಆಕೆ ಬ್ಯಾಂಕ್ ಮ್ಯಾನೇಜರ್ ಜತೆ ವಿವಾಹೇತರ ಸಂಬಂಧ ಹೊಂದಿದ್ದಳು. ತೇಜೇಶ್ವರ್ ತಮ್ಮ ಸಂಬಂಧಗಳಿಗೆ ಅಡ್ಡಿಯಾಗಬಹುದು ಎಂದು ಭಾವಿಸಿ ಆತನನ್ನು ಕೊಲ್ಲಲು ಸಂಚು ರೂಪಿಸಿದ್ದಳು ಎಂದು ತೇಜೇಶ್ವರ್ ಸಹೋದರ ಆರೋಪಿಸಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅರೆಸ್ಟ್ ಮಾಡಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj