ಪುತ್ತೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಈಗ ಎನ್‌ಐಎಗೆ ಹಸ್ತಾಂತರ ವಿಚಾರದಲ್ಲಿ ನಮ್ಮದೇನೂ ಅಭ್ಯಂತರವಿಲ್ಲ. ಅಬ್ದುಲ್ ರಹಿಮಾನ್ ಹತ್ಯೆಯನ್ನೂ ಎನ್ಐಎಗೆ ತನಿಖೆಗೆ ಕೊಡಲಿ ಎಂದು ಆರೋಗ್ಯ ಸಚಿವ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾತಾಡಿದ ಸಚಿವರು, ಬಿಜೆಪಿಯವರು ವಿನಾಕಾರಣ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಹಿಂದೂ ಸತ್ತರೆ ಮಾತ್ರ ನೋವಾಗುತ್ತದೆ. ಬೇರೆಯವರು ಸತ್ತರೆ ನೋವಾಗೋಲ್ಲಾ. ಅವರಿಗೆ ಮನುಷ್ಯತ್ವೇ ಇಲ್ಲ ಎಂದರು. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಬಿಜೆಪಿಯವರಿಗೆ ಯಾರಿಗೆ ಕೊಡಲು ಮನಸ್ಸಿದೆ ಅವರಿಗೆ ಕೊಡಲಿ. ಈ ವಿಚಾರದಲ್ಲಿ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಈ ವಿಚಾರದಲ್ಲಿ ಪರಿಶೀಲನೆ ಮಾಡುತ್ತೇವೆ ಎಂದು ಗೃಹ ಸಚಿವರು ಈಗಾಗಲೇ ಹೇಳಿದ್ದಾರೆ. ಎನ್‌ಐಎ ಬರುವುದಿದ್ದರೆ ಬರಲಿ. ಆದರೆ ಬಿಜೆಪಿಯವರು ಎನ್‌ಐಎಯವರೇ ಬೇಕು ಎಂದು ಹೇಳುತ್ತಿದ್ದಾರೆ. ಈ ಪ್ರಕರಣದಲ್ಲಿ ನಮ್ಮ ಪೋಲಿಸರು ಸೂಕ್ತ ತನಿಖೆ ನಡೆಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದವರನ್ನು ಅರೆಸ್ಟ್ ಮಾಡಿದ್ದಾರೆ. ಯಾರೆಲ್ಲಾ ಈ ಘಟನೆಯ ಹಿಂದಿದ್ದಾರೆ ಅನ್ನೋದನ್ನ ತನಿಖೆ ಮಾಡಿದ್ದಾರೆ ಎಂದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj