ಆನ್‌ಲೈನ್‌ನಲ್ಲಿ ತರಿಸಿ ಕೇಕ್‌ ತಿಂದು ಮಗು ಸಾವು, ತಂದೆ – ತಾಯಿ ಅಸ್ವಸ್ಥ?

ಬೆಂಗಳೂರು: ನಗರದ ಕೆ.ಪಿ. ಅಗ್ರಹಾರದಲ್ಲಿ ತಂದೆ, ತಾಯಿ ಅಸ್ವಸ್ಥರಾಗಿದ್ದು, ಆರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮಂಗಳವಾರ ಸಂಜೆ ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು ಈ ಸ್ಥಿತಿಗೆ ಕಾರಣವಾಯ್ತಾ ಎಂಬ ಶಂಕೆ ವ್ಯಕ್ತವಾಗಿದೆ.

Cake Child Death

ಕುಟುಂಬದಲ್ಲಿ ನಾಲ್ವರು ಇದ್ದು, ಹೆಣ್ಣು ಮಗು ಸಂಬಂಧಿಕರ ಮನೆಗೆ ಹೋಗಿತ್ತು. ಮನೆಯಲ್ಲಿ ಮೂವರೇ ಇದ್ದ ಕಾರಣ ಮಂಗಳವಾರ ಸಂಜೆ ಆನ್‌ಲೈನ್‌ನಲ್ಲಿ ಕೇಕ್ ತರಿಸಿದ್ದರು. ಕೇಕ್ ತಿಂದ ಬಳಿಕ ಮಗು ತೀವ್ರವಾಗಿ ಅಸ್ವಸ್ಥಗೊಂಡು, ಬೆಳಿಗ್ಗೆ ಅಷ್ಟರಲ್ಲಿ ಸಾವನ್ನಪ್ಪಿತ್ತು. ಅದಾದ ಬಳಿಕ ತಂದೆ, ತಾಯಿ ಕೂಡ ಅಸ್ವಸ್ಥಗೊಂಡಿದ್ದರು. ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಬಳಿಕ ಎಫ್‌ಎಸ್‌ಎಲ್‌ಗೆ ರವಾನಿಸಲಿದ್ದಾರೆ. ಕಿಮ್ಸ್ ವೈದ್ಯರು ದೇಹದ ಇತರೆ ಭಾಗಗಳನ್ನು ಪರೀಕ್ಷೆಗೆ ಒಳಪಡಿಸಿ ಸಾವಿಗೆ ನಿಖರವಾದ ಕಾರಣವನ್ನು ಪತ್ತೆ ಹಚ್ಚಲಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!