ಲಕ್ನೋ: ಪೊಲೀಸ್ ಕಾನ್‍ಸ್ಟೇಬಲ್ ನಿಂದಲೇ ಹಲವು ತಿಂಗಳಿನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಸಂತ್ರಸ್ತೆ , ಪೊಲೀಸ್ ಪತ್ನಿಯ ಬಳಿ ಅಳಲು ತೋಡಿಕೊಂಡ ಕಾರಣಕ್ಕೆ ಕೋಪಗೊಂಡ ಪೊಲೀಸ್ ದಂಪತಿ ಬಾಲಕಿಯನ್ನು ಥಳಿಸಿ, ಮೇಲ್ಛಾವಣಿಯಿಂದ ಕೆಳಕ್ಕೆ ಎಸೆದ ಘಟನೆ ಬೆಳಕಿಗೆ ಬಂದಿದೆ.
ಹದಿನಾರು ವರ್ಷ ವಯಸ್ಸಿನ ಯುವತಿಗೆ ಗಾಯಗಳಾಗಿದ್ದು, ಕಾಲು ಮುರಿದಿದೆ. ಆಕೆಯನ್ನು ಆ ಕೂಡಲೇ ಆಸ್ಪತ್ರೆಗೆ ದಾಖಲಿಸಿ, ದಂಪತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯುವತಿಯ ತಂದೆಯ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಅವರೂ ಚಿಕಿತ್ಸೆ ಪಡೆಯುತ್ತಿದ್ದಾರೆ.