ಮಲ್ಪೆ: ಹೆಚ್ಚುವರಿ ಪಾನಿಪುರಿಗಾಗಿ ಬಡಿದಾಟ- ಹಲವರ ವಿರುದ್ಧ ಕೇಸ್

ಮಲ್ಪೆ: ‌ ಹೆಚ್ಚುವರಿ ಪಾನಿಪುರಿ ನೀಡುವ ವಿಚಾರದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯ ಪಾನಿಪೂರಿ ಅಂಗಡಿಯವರು ಪರಸ್ಪರ ಬಡಿದಾಡಿದ ಘಟನೆ ಘಟನೆ ಮಲ್ಪೆ ಬೀಚ್‌ನಲ್ಲಿ ನಡೆದಿದ್ದು, ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದೂರು – ಪ್ರತಿದೂರು ದಾಖಲಾಗಿದೆ.

ಮಲ್ಪೆ ಬೀಚ್‌ಗೆ ಬಂದಿದ್ದ ಮಂಡ್ಯ ಜಿಲ್ಲೆಯಿಂದ ಬಂದಿದ್ದ ಪ್ರವಾಸಿಗರು ಪಾನಿಪುರಿ ಅಂಗಡಿಯಲ್ಲಿ ಪಾನಿಪುರಿ ತಿನ್ನಲು ಹೋಗಿದ್ದಾರೆ. ಅಂಗಡಿಯವ ಕೊಟ್ಟ ಲೆಕ್ಕದ ಪಾನಿಪೂರಿ ತಿಂದ ಮೇಲೆ ಹೆಚ್ಚುವರಿ ಪಾನಿಪುರಿ ಕೇಳಿದ್ದಾರೆ. ಆಗ ಅಂಗಡಿಯವರು ನಾವು ಕೊಡೋದು ಇಷ್ಟೆ ಅಂತ ಹೇಳಿದ್ದಾರೆ. ಇದರಿಂದ ಸಿಟ್ಟು ಮಾಡಿಕೊಂಡ ಮಂಡ್ಯ ಪ್ರವಾಸಿಗರು ಪಾನಿಪುರಿ ಅಂಗಡಿಯವನ ಜೊತೆಗೆ ಕಿರಿಕ್ ಮಾಡಿದ್ದಾರೆ. ಇದೇ ವಿಚಾರವಾಗಿ ಉಂಟಾದ ಗಲಾಟೆ ಮುಂದುವರಿದು ಪಾನಿಪುರಿ ಅಂಗಡಿಯವರು ಹಾಗೂ ಮಂಡ್ಯ ಹುಡುಗರು ಪರಸ್ಪರ ಬಡಿದಾಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರುಗಳು ದಾಖಲಾಗಿದೆ.

error: Content is protected !!