ಖ್ಯಾತ ಗಾಯಕಿ ಮಂಗ್ಲಿ ಬರ್ತ್‌ ಡೇ ಪಾರ್ಟಿಯಲ್ಲಿ ಡ್ರಗ್ಸ್‌ ಬಳಕೆ! ಪೊಲೀಸ್‌ ದಾಳಿ!!

ಹೈದರಾಬಾದ್:‌ ಖ್ಯಾತ ಗಾಯಕಿ ಮಂಗ್ಲಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಚೆವೆಲ್ಲಾ ಹೊರವಲಯದ ಇರ್ಲಪಲ್ಲಿ ಬಳಿಯ ರೆಸಾರ್ಟ್‌ನಲ್ಲಿ ಪಾರ್ಟಿಯೊಂದನ್ನು ಆಯೋಜಿಸಿದ್ದರು. ಆದರೆ ಪೊಲೀಸರು ಪಾರ್ಟಿಗೆ ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ, ವಿದೇಶಿ ಮದ್ಯ ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಗಾಯಕಿ ಮಂಗ್ಲಿ ಮತ್ತು ರೆಸಾರ್ಟ್ ಆಡಳಿತ ಮಂಡಳಿಯ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ರೆಸಾರ್ಟ್‌ನಲ್ಲಿ ಗಾಂಜಾ ಸೇವನೆ ಮತ್ತು ಇತರ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಗುಪ್ತ ಮಾಹಿತಿಯ ಆಧಾರದ ಮೇಲೆ ಚೆವೆಲ್ಲಾ ಪೊಲೀಸರು ಕಾರ್ಯಾಚರಣೆಗೆ ಇಳಿದರು. ದಾಳಿಯ ಸಂದರ್ಭದಲ್ಲಿ, ಸ್ಥಳದಲ್ಲಿ ವಿದೇಶಿ ಮದ್ಯದ ಬಾಟಲಿಗಳು ಮತ್ತು ಗಾಂಜಾ ಪೊಟ್ಟಣಗಳು ಕಂಡುಬಂದಿವೆ. ಈ ಕಾರ್ಯಕ್ರಮದಲ್ಲಿ ಒಟ್ಟು 48 ಜನ ಭಾಗವಹಿಸಿದ್ದರು. ಇವರಲ್ಲಿ ಒಂಬತ್ತು ಮಂದಿ ಗಾಂಜಾ ಸೇವಿಸಿರುವುದು ತನಿಖಾತ್ಮಕವಾಗಿ ದೃಢಪಟ್ಟಿದೆ. ಗಾಯಕಿ ಮಂಗ್ಲಿ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಮಾರಂಗದಲ್ಲೂ ಹೆಸರು ಮಾಡಿದ್ದಾರೆ.

error: Content is protected !!