ಜೂ.10ರಂದು ವಿದ್ಯಾರತ್ನ ಶಾಲೆಯಲ್ಲಿ ಸಾಹಿತ್ಯ ಅಭಿರುಚಿ ಕಾರ್ಯಕ್ರಮ

ಮಂಗಳೂರು: ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಈ ಶೈಕ್ಷಣಿಕ ವರ್ಷದ 2025 ಸಾಲಿನ 105ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಜೂನ್ 10 ರಂದು 2:00 ಗಂಟೆಗೆ  ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ  ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಚೇರ್ಮೆನ್ ರವೀಂದ್ರ ಶೆಟ್ಟಿ ಉಳಿದೊಟ್ಟು ವಹಿಸುವರು. ಮುಖ್ಯ ಸಂಪನ್ಮೂಲ ಅತಿಥಿಯಾಗಿ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರಾದ ಲೇಖಕರಾದ ರವೀಂದ್ರ ರೈ ಕಲ್ಲೇಮಾರು ಹಾಗೂ  ನಮ್ಮ ಕುಡ್ಲ ಚಾನೆಲ್ ಕಾರ್ಯಕ್ರಮ ನಿರೂಪಕಿ ಡಾ. ಪ್ರಿಯ ಹರೀಶ್ , ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ನಯೀಮ್ ಹಮಿದ್, ಸಂಘಟಕ ಉಮೇಶ್ ರಾವ್ ಕುಂಬಳೆ ಗೌರವ ಉಪಸ್ಥಿತರಿರುವರು.
ವಿದ್ಯಾ ರತ್ನ ಎಜುಕೇಶನಲ್ ಟ್ರಸ್ಟ್  ಕಾರ್ಯದರ್ಶಿ ಸೌಮ್ಯ ಆರ್. ಶೆಟ್ಟಿ , ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು , ಲೇಖಕಿ, ಶಿಕ್ಷಕಿ ಸುರೇಖಾ ಯಾಲವಾರ ಉಪಸ್ಥಿತರಿರುವರು ಎಂದು ಪತ್ರಿಕೆ ಪ್ರಕಟಣೆ ತಿಳಿಸಿದ್ದಾರೆ.
error: Content is protected !!