ಜೂ.7-8ರಂದು ಮಂಗಳೂರಿನ ಅವತಾರ್ ಹೋಟೆಲ್‌ನಲ್ಲಿ ರೋಟಾರೆಕ್ಟ್ ಕಾರ್ಯಕ್ರಮ

ಮಂಗಳೂರು: ರೋಟಾರೆಕ್ಟ್ ಎಂಬುದು ರೋಟರಿ ಇಂಟರ್‌ನ್ಯಾಷನಲ್‌ನ ಅಧೀನದಲ್ಲಿ ಕಾರ್ಯನಿರ್ವಹಿಸುವ, ನಾಯಕತ್ವ, ಸೇವೆ ಮತ್ತು ಸ್ನೇಹಸಂಭಂಧಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲಿರುವ ಯುವ ನಾಯಕರ ಜಾಗತಿಕ ಚಲನೆಯಾಗಿದೆ. ದಕ್ಷಿಣ ಏಷ್ಯಾದ ರೋಟಾರೆಕ್ಟ್ ಚಟುವಟಿಕೆಗಳ ಕೇಂದ್ರಬಿಂದು RSAMDIO – ರೋಟಾರೆಕ್ಟ್ ಸೌತ್ ಏಷಿಯಾ ಮಲ್ಟಿ-ಡಿಸ್ಟ್ರಿಕ್ಟ್ ಇನ್ಫರ್ಮೇಶನ್ ಆರ್ಗನೈಸೇಷನ್, ಇದು 8 ದೇಶಗಳು ಮತ್ತು 44 ಸದಸ್ಯ ಜಿಲ್ಲೆಗಳನ್ನು ಒಳಗೊಂಡಿದೆ, ಹಾಗೂ 79,000 ಕ್ಕೂ ಹೆಚ್ಚು ರೋಟಾರೆಕ್ಟರ್‌ಗಳು ಇದರ ಭಾಗವಾಗಿದ್ದಾರೆ ಎಂದು ಎಂ.ವಿ. ಮಲ್ಯ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

ಈ ಸಂಭ್ರಮದಲ್ಲಿ, 2025–26ನೇ ಸಾಲಿನ RSAMDIO ಇನ್‌ಸ್ಟಾಲೇಶನ್ ಸಮಾರಂಭ – ITTEHAD ಹಾಗೂ ROAR (RSAMDIO ಉತ್ತಮ ಪ್ರಶಸ್ತಿ ಪ್ರಧಾನ) ಜೂನ್ 7 ಮತ್ತು 8, 2025 ರಂದು ಸಂಜೆ 3:30 ಗಂಟೆಯಿಂದ ಆರಂಭವಾಗಿ ಮಂಗಳೂರಿನ ಆವತಾರ್ ಹೋಟೆಲ್‌ನಲ್ಲಿ ಜರುಗಲಿದೆ. ಈ ಸಮಾರಂಭ ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ನಡೆಯುತ್ತಿರುವುದು ವಿಶೇಷ. ಇನ್ನೊಂದು ಹೆಮ್ಮೆಯ ಸಂಗತಿ ಎಂದರೆ, RSAMDIO ಗೆ ಅಧ್ಯಕ್ಷರಾಗಿ ಕರ್ನಾಟಕದಿಂದ ಆಯ್ಕೆ ಆದವರಲ್ಲಿ ಡೇರಲ್ ಎರಡನೆಯವರು., ಹಾಗೂ ಅವರು ಈ ಸಂಸ್ಥೆಯ 16ನೇ ಅಧ್ಯಕ್ಷರಾಗಲಿದ್ದಾರೆ ಎಂದವರು ಹೇಳಿದರು.

ಮೂರು ದೇಶಗಳು ಮತ್ತು 23 ರಾಜ್ಯಗಳಿಂದ 250 ಕ್ಕೂ ಹೆಚ್ಚು ರೋಟಾರೆಕ್ಟ್ ಪ್ರತಿನಿಧಿಗಳು ಭಾಗವಹಿಸಲಿರುವ ಈ 2 ದಿನಗಳ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೋಟರಿ ಇಂಟರ್‌ನ್ಯಾಷನಲ್ ಡೈರೆಕ್ಟರ್ ಅನಿರುದ್ಧ ರಾಯ್ ಚೌಧುರಿ ಅವರು ಭಾಗವಹಿಸಿ ಪ್ರಧಾನ ಭಾಷಣ ನೀಡಲಿದ್ದಾರೆ. ಗೌರವಾನ್ವಿತ ಅತಿಥಿಯಾಗಿ RI ಜಿಲ್ಲೆ 3181 ರ ಜಿಲ್ಲಾ ಗವರ್ನರ್ Rtn. ವಿಕ್ರಮದತ್ತ ಅವರು ಭಾಗವಹಿಸಲಿದ್ದಾರೆ. ITTEHAD 2025 ಕಾರ್ಯಕ್ರಮವು ನಾಯಕತ್ವ, ಸಂಸ್ಕೃತಿ ಮತ್ತು ಸೇವೆಯ ಮಹತ್ವದ ಉತ್ಸವವಾಗಲಿದೆ. ಕರಾವಳಿಯ ಹೃದಯ ಮಂಗಳೂರು ನಗರವು ಈ ಪ್ರತಿಷ್ಟಿತ ಕಾರ್ಯಕ್ರಮದ ಆತಿಥ್ಯ ವಹಿಸಲಿದ್ದು ಇತಿಹಾಸ ನಿರ್ಮಾಣದ ಕ್ಷಣವನ್ನು ಎದುರಿಸುತ್ತಿದೆ“ ಎಂದು ರೋಟರಾಕ್ಟ್ ದಕ್ಷಿಣ ಏಷ್ಯಾ ಎಂಡಿಐಒದ ಚುನಾಯಿತ ಅಧ್ಯಕ್ಷ ಡ್ಯಾರಿಲ್ ಸ್ಟೀವನ್ ಡಿʼಸೋಜಾ ಹೇಳಿದರು.
ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್‌ನ ಚುನಾಯಿತ ಅಧ್ಯಕ್ಷ ಭಾಸ್ಕರ್ ರೈ, ಪಿಡಿಜಿ ಎಂಡಿ ಡಾ.ಬಿ.ದೇವದಾಸ್ ರೈ ಮತ್ತಿತರರು ಉಪಸ್ಥಿತರಿದ್ದರು.

error: Content is protected !!