ಸೌರಮಂಡಲದ ಅಂಚಿನಲ್ಲಿ ಹೊಸತೊಂದು ಗ್ರಹ ಪತ್ತೆ: ಹೊಸ ಅತಿಥಿ ಬರ ಮಾಡಿಕೊಳ್ಳಲು ಸಿದ್ಧತೆ

ನವದೆಹಲಿ: ಸೌರಮಂಡಲದ ಅಂಚಿನಲ್ಲಿರುವ ಕೈಪರ್‌ ಬೆಲ್ಟ್‌ ಆಬ್ಜೆಕ್ಟ್‌ ನ ಊರ್ಟ್‌ ಕ್ಲೌಡ್‌ ಬಳಿ, ಖಗೋಳಶಾಸ್ತ್ರಜ್ಞರು ಹೊಸ ಕುಬ್ಜಗ್ರಹವೊಂದನ್ನು ಪತ್ತೆಹಚ್ಚಿದ್ದಾರೆ. 2017 OF201 ಎಂದು ಹೆಸರಿಸಲಾದ ಈ ಹೊಸ ಕುಬ್ಜಗ್ರಹ ಗಾತ್ರದಲ್ಲಿ ಪುಟ್ಲೋಗಿಂತ ಮೂರು ಪಟ್ಟು ಚಿಕ್ಕದಾಗಿದ್ದು, ಸೂರ್ಯನನ್ನು ಸುಮಾರು 25,000 ಸಾವಿರ ವರ್ಷಗಳಿಗೊಮ್ಮೆ ಒಂದು ಸುತ್ತು ಸುತ್ತುತ್ತದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.

Astronomers have just discovered 'incredible' new body in the solar system that could challenge major space theory

ಖಗೋಳಶಾಸ್ತ್ರಜ್ಞರು ನೆಪ್ಚೂನ್‌ನ ಆಚೆಗಿನ ಹಿಮಾವೃತ ಬಂಡೆಗಳ ವಿಚಿತ್ರವಾದ ಸಮೂಹ ಕಕ್ಷೆಯಲ್ಲಿ ಪ್ಯಾನೆಟ್‌ ಎಕ್ಸ್‌ನ ಶೋಧಕಾರ್ಯ ಮುಂದುವರೆಸಿದ್ದು, ಒಂದು ವೇಳೆ ಅಸ್ತಿತ್ವದಲ್ಲಿದೆ ಎನ್ನಲಾದ ಈ ಗ್ರಹ ಪತ್ತೆಯಾಗಿದ್ದೇ ನಿಜವಾದಲ್ಲಿ, ಸೌರಮಂಡಲಕ್ಕೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳಲು ನಾವೆಲ್ಲಾ ಸಿದ್ಧವಾಗಬೇಕಾಗುತ್ತದೆ.

ಪ್ಯಾನೆಟ್‌ 9 ಹುಡುಕಾಟದಲ್ಲಿ ನಿರತವಾಗಿರುವ ಖಗೋಳಶಾಸ್ತ್ರಜ್ಞರು ಇದೀಗ, ಸೌರಮಂಡಲದ ಅಂಚಿನಲ್ಲಿರುವ ಕೈಪರ್‌ ಬೆಲ್ಟ್‌ ಪ್ರದೇಶದಲ್ಲಿ ಹೊಸದೊದು ಕುಬ್ಜಗ್ರಹ(Dwarf Planet)ವನ್ನು ಪತ್ತೆಮಾಡಿದ್ದಾರೆ. ಈ ಹೊಸ ಸಂಶೋಧನೆ ಪ್ಯಾನೆಟ್‌ ಎಕ್ಸ್‌ ಅಸ್ತಿತ್ವದ ಸಿದ್ಧಾಂತವನ್ನು ಪ್ರಶ್ನಿಸಬಹುದು ಎಂದು ಖಗೋಳಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

2017 OF201 ಎಂದು ಹೆಸರಿಸಲಾದ ಈ ಹೊಸ ಕುಬ್ಜಗ್ರಹವು, ಸುಮಾರು 700 ಕಿಲೋಮೀಟರ್ (430 ಮೈಲುಗಳು) ಅಗಲವಿದೆ. ಕೈಪರ್‌ ಬೆಲ್ಟ್‌ ಆಬ್ಜೆಕ್ಟ್‌(KBO) ಪಟ್ಟಿಯಲ್ಲೇ ಅತಿದೊಡ್ಡ ಕುಬ್ಜಗ್ರಹವಾದ ಪ್ಲುಟೋಗಿಂತ ಈ ಹೊಸ ಕುಬ್ಜಗ್ರಹ ಗಾತ್ರದಲ್ಲಿ ಮೂರು ಪಟ್ಟು ಚಿಕ್ಕದಾಗಿದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ನ್ಯೂಜೆರ್ಸಿಯ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿ ಸಂಸ್ಥೆಯ ಪ್ರಮುಖ ಅಧ್ಯಯನ ಲೇಖಕ ಸಿಹಾವೊ ಚೆಂಗ್, “ಕೈಪರ್‌ ಬೆಲ್ಟ್‌ ಪ್ರದೇಶದಲ್ಲಿ ಪತ್ತೆಯಾಗಿರುವ ಹೊಸ ಕುಬ್ಜ ಗ್ರಹ ಸೌರಮಂಡಲದ ಈ ಭಾಗದ ಅನ್ವೇಷಣೆಯಲ್ಲಿ ನಿರತವಾಗಿರುವ ಖಗೋಳ ವಿಜ್ಞಾನಿಗಳಲ್ಲಿ ಸಂಚಲನವನ್ನುಂಟು ಮಾಡಿದೆ” ಎಂದು ಹೇಳಿದ್ದಾರೆ.

ದೂರ:
2017 OF201 ಕುಬ್ಜಗ್ರಹವು ಪ್ರಸ್ತುತ ಭೂಮಿಯಿಂದ ನೆಪ್ಚೂನ್‌ ಇರುವ ದೂರಕ್ಕಿಂತ ಮೂರು ಪಟ್ಟು ದೂರದಲ್ಲಿದೆ. ಇದರ ಅತ್ಯಂತ ಉದ್ದವಾದ ಕಕ್ಷೆಯು, ಭೂಮಿ ಮತ್ತು ಸೂರ್ಯನ ನಡುವಿನ ಅಂತರಕ್ಕಿಂತ 1,600 ಪಟ್ಟು ಹೆಚ್ಚು ದೂರಕ್ಕೆ ತಿರುಗುತ್ತದೆ. ಇದು “ಊರ್ಟ್ ಕ್ಲೌಡ್‌” ಎಂದು ಕರೆಯಲ್ಪಡುವ ಸೌರವ್ಯೂಹದ ಸುತ್ತಲಿನ ಹಿಮಾವೃತ ಬಂಡೆಗಳ ನಡುವೆ ತನ್ನ ಅಸ್ತಿತ್ವ ಕಂಡುಕೊಂಡಿದೆ ಎಂದು ಸಂಶೋಧಕರು ಮಾಹಿತಿ ನೀಡಲಾಗಿದೆ.

ಒಂದು ವೇಳೆ 2017 OF201 ಕುಬ್ಜಗ್ರಹದ ಕಕ್ಷೆಯಲ್ಲಿ ಸ್ವಲ್ಪವೇ ವ್ಯತ್ಯಾಸವಾಗಿದ್ದರೂ, ಇದು ಸೂರ್ಯನ ಗುರುತ್ವ ಬಲದಿಂದ ತಪ್ಪಿಸಿಕೊಂಡು ಬೇರೊಂದು ನಕ್ಷತ್ರದ ಗುರುತ್ವ ಪರೀಧಿಗೆ ಸೇರುವ ಸಾಧ್ಯತೆ ಇತ್ತು ಎಂದು ಇದರ ಅನ್ವೇಷಕರು ಅಂದಾಜಿಸಿದ್ದಾರೆ. ಈ ಕುಬ್ಜಗ್ರಹ ಸೂರ್ಯನನ್ನು ಒಂದು ಸುತ್ತು ಸುತ್ತಲೂ ಬರೋಬ್ಬರಿ 25,000 ಭೂ ವರ್ಷಗಳನ್ನು ತೆಗೆದುಕೊಳ್ಳುತ್ತದೆ.

ನೆಪ್ಚೂನ್‌ನ ಆಚೆಗಿನ ಕೈಪರ್ ಬೆಲ್ಟ್‌ನಲ್ಲಿ “ಇದೇ ರೀತಿಯ ನೂರಾರು ಕುಬ್ಜಗ್ರಹಗಳು ಮನೆ ಮಾಡಿದ್ದು, ಅವುಗಳ ಅಧ್ಯಯನ ಅಂತಿಮವಾಗಿ ಪ್ಲ್ಯಾನೆಟ್‌ ಎಕ್ಸ್‌ನ ಅನ್ವೇಷಣೆಗೆ ದಾರಿ ಮಾಡಿಕೊಡಲಿದೆ ಎಂದು ಖಗೋಳಶಾಸ್ತ್ರಜ್ಞರು ಬಲವಾಗಿ ನಂಬುತ್ತಾರೆ. ಪ್ಲ್ಯಾನೆಟ್‌ 9ರ ಅಸ್ತಿತ್ವವನ್ನು ದೃಢಪಡಿಸಲು, ಜೇಮ್ಸ್ ವೆಬ್, ಹಬಲ್ ಬಾಹ್ಯಾಕಾಶ ದೂರದರ್ಶಕ ಯಂತ್ರಗಳ ನೆರವನ್ನು ಪಡೆಯಲಾಗುತ್ತಿದೆ.

ಕ್ಯಾಲಿಫೋರ್ನಿಯಾದ 23 ವರ್ಷದ ಹವ್ಯಾಸಿ ಖಗೋಳಶಾಸ್ತ್ರಜ್ಞ ಸ್ಯಾಮ್ ಡೀನ್, ಹಳೆಯ ದತ್ತಾಂಶಗಳ ಆಧಾರದ ಮೇಲೆ 2017 OF201 ಕುಬ್ಜಗ್ರಹದ ಅಸ್ತಿತ್ವವನ್ನು ದೃಢಪಡಿಸಿದ್ದಾರೆ.

error: Content is protected !!