ಕಾರ್ಕಳ ಮೆಸ್ಕಾಮ್ ಅಧಿಕಾರಿ ಮನೆಗೆ ಲೋಕಾಯುಕ್ತ ದಾಳಿ!

ಕಾರ್ಕಳ: ಇಲ್ಲಿನ ಮೆಸ್ಕಾಂ ಹಿರಿಯ ಅಧಿಕಾರಿ ಗಿರೀಶ್ ರಾವ್ ಮನೆ, ಮೆಸ್ಕಾಂ ಕಚೇರಿ ಹಾಗೂ ಕಾರ್ಕಳ ಬೈಪಾಸ್ ನಲ್ಲಿರುವ‌ ಅವರ ಒಡೆತನದ ಕಾರ್ಕಳ ಇನ್ ಲಾರ್ಡ್ಜ್‌ ಮತ್ತು ಬೈಪಾಸ್‌ ನವೋದಯ ಸರ್ಕಲ್‌ ಬಳಿಯಿರುವ ಸಂಬಂಧಿಕರ ಮನೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.


ಬೆಳ್ಳಂಬೆಳಗ್ಗೆ ದಾಳಿ ನಡೆದಿದ್ದು ಅಪಾರ ಪ್ರಮಾಣದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿರುವುದಾಗಿ ಮೂಲಗಳು ಹೇಳಿವೆ. ಮನೆಯಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

error: Content is protected !!