ಗಟಾರದ ನೀರಿನಲ್ಲಿ ಮುಳುಗೆದ್ದ ಅಪಾರ್ಟ್‌ಮೆಂಟ್‌! ಮಹಾಬಲೇಶ್ವರ ನೀನೇ ಕಾಪಾಡು!!

ಮಂಗಳೂರು: ನಗರದ ಬಿಕರ್ನಕಟ್ಟೆ ಎಂಬಲ್ಲಿ ಮಸೀದಿ ವಿರುದ್ಧ ದಿಕ್ಕಿನಲ್ಲಿರುವ ʻಮಹಾಬಲೇಶ್ವರ ಬಿಲ್ಡರ್ಸ್‌ ಆಂಡ್‌ ಪ್ರಮೋಟರ್ಸ್‌ʼ ಕ್ಲಾಸಿಕ್ ಪ್ರೈಡ್ ಫ್ಲ್ಯಾಟ್‌ನಲ್ಲಿರುವ ಜನರು ಗಟಾರದ ನೀರಲ್ಲೇ ಸ್ನಾನ ಮಾಡುವಂತ ಪರಿಸ್ಥಿತಿ ಎದುರಾಗಿದೆ. ಯಾಕೆಂದರೆ ಭಾರೀ ಮಳೆಯಿಂದಾಗಿ ಫ್ಲ್ಯಾಟ್‌ ನ ಪಾರ್ಕಿಂಗ್, ಗ್ರೌಂಡ್ ಫ್ಲೋರ್ ನಲ್ಲಿ ಗಟಾರದ ನೀರು ಮೇಲೆ ಬಂದಿದ್ದು, ಫ್ಯಾಟ್‌ ನ ಸುತ್ತಮುತ್ತ ಆವರಿಸಿ ಕೆಟ್ಟ ವಾಸನೆ ಬೀರಲಾರಂಭಿಸಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.


ʻಮಹಾಬಲೇಶ್ವರ ಬಿಲ್ಡರ್ಸ್‌ ಆಂಡ್‌ ಪ್ರಮೋಟರ್ಸ್‌ʼ ಕ್ಲಾಸಿಕ್ಸ್‌ ಪ್ರೈಡ್‌ ಅಪಾರ್ಟ್‌ಮೆಂಟ್ಸ್‌ ಬಹು ಅಂತಸ್ತಿನ ಕಟ್ಡಡವಾಗಿದ್ದು, ಹಲವಾರು ಕುಟುಂಬಗಳು ಇಲ್ಲಿ ವಾಸಿಸಿವೆ. ಗ್ರೌಂಡ್‌ ಫ್ಲೂರ್‌ ಹಾಗೂ ಫಸ್ಟ್‌ ಫ್ಲೂರ್‌ನಲ್ಲಿ ಮೋರ್‌ನಂತಹ ವಾಣಿಜ್ಯ ಸಂಕೀರ್ಣಗಳಿವೆ.

ಇದೀಗ ಭಾರೀ ಮಳೆಯಾಗುತ್ತಿರುವುದರಿಂದ ಇಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಕಲ್ಲಿಸಿಲ್ಲವಾಗಿರುವುದರಿಂದ ಮಳೆ ನೀರಿನೊಂದಿಗೆ ಚರಂಡಿ ನೀರು ಕೂಡಾ ಮಿಶ್ರವಾಗಿ ಅಪಾರ್ಟ್‌ ಸುತ್ತಮುತ್ತ ಆವರಿಸಿ ಕೆಟ್ಟ ವಾಸನೆ ಬೀರಲಾರಂಭಿಸಿದೆ.

ಗಟಾರದ ನೀರು ಮೇಲೆ ಬಂದಿದ್ದು, ನೀರಿನೊಂದಿಗೆ ಮಿಶ್ರಣವಾಗಿ ಹೋಗುತ್ತಿದೆ. ಇದು ಪೈಪ್‌ನೀರಿನೊಂದಿಗೂ ಮಿಶ್ರಣವಾಗಿ ಅಪಾರ್ಟ್‌ಮೆಂಟ್‌ ನಿವಾಸಿಗಳೆಲ್ಲಾ ಗಟಾರದ ನೀರಲ್ಲೇ ಸ್ನಾನ ಮಾಡುವಂತಾಗಿದೆ. ಇಲ್ಲಿನ ವಾಣಿಜ್ಯ ಸಂಕೀರ್ಣಕ್ಕೆ ಬರಲು ಗ್ರಾಹಕರೂ ಹಿಂದೇಟು ಹಾಕುತ್ತಿದ್ದಾರೆ.


ಅಪಾರ್ಟ್‌ಮೆಂಟ್‌ನವರು ಇಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಕಲ್ಪಿಸದೇ ಇರುವುದರು ಹಾಗೂ ಗಟಾರದ ನೀರು ಮೇಲೆ ಬರದಂತೆ ಸರಿಯಾದ ವ್ಯವಸ್ಥೆ ಮಾಡಿಲ್ಲ, ಹಾಗಾಗಿಯೇ ಗಟಾರದ ನೀರು ಮೇಲೆ ಬರುತ್ತಿದೆ ಎಂದು ಅಪಾರ್ಟ್‌ಮೆಂಟ್‌ ನಿವಾಸಿಗಳು ಆರೋಪಿಸಿದ್ದಾರೆ. ಲಕ್ಷಾಂತರ ಹಣ ಕೊಟ್ಟು ಇಲ್ಲಿ ಅಪಾರ್ಟ್‌ಮೆಂಟ್‌ ಯಾಕೆ ಖರೀದಿಸಿದೆವೋ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದು, ಕೂಡಲೇ ಈ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿದ್ದಾರೆ.

error: Content is protected !!