ಪ್ರೇಮಿಯೊಂದಿಗೆ ಸೇರಿ ಗಂಡನನ್ನೇ ಮುಗಿಸಿದ ಕಿರಾತಕಿ!

ಚಿಕ್ಕಮಗಳೂರು: ಲವ್‌ ಮ್ಯಾರೇಜ್‌ ಆಗಿದ್ದ ಗಂಡನನ್ನೇ ಪ್ರೇಮಿಯ ಜೊತೆ ಸೇರಿಕೊಂಡು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಎನ್.ಆರ್.ಪುರ ಪೊಲೀಸರು ಕಮಲಾ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಇಬ್ಬರು ಮಕ್ಕಳ ತಾಯಿ ಕಮಲಾ ತನ್ನ 35 ವರ್ಷದ ಪತಿ ಸುದರ್ಶನ್‌ನನ್ನು ಕೊಲೆಗೈದಿದ್ದಾಳೆ. ಈ ಕೃತ್ಯಕ್ಕೆ ತನ್ನ ಪ್ರೇಮಿಯಾದ ಶಿವರಾಜ್‌ಗೆ ಸುಪಾರಿ ನೀಡಿದ್ದಾಳೆ ಎನ್ನಲಾಗಿದೆ.

ಕಮಲಾ ಮತ್ತು ಸುದರ್ಶನ್‌ 10 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಕೆಲವು ವರ್ಷಗಳಿಂದ ಕಮಲಾ ಶಿವರಾಜ್‌ ಎಂಬಾತನ ಜೊತೆ ಪ್ರೇಮ ಸಂಬಂಧದಲ್ಲಿದ್ದಳು. ತನ್ನ ಪ್ರೇಮಿಯೊಂದಿಗೆ ಜೀವನ ನಡೆಸುವ ಸಲುವಾಗಿ ಗಂಡನನ್ನು ಕೊಲ್ಲುವಂತೆ ಶಿವರಾಜ್‌ಗೆ ಸುಪಾರಿ ನೀಡಿದ್ದಾಳೆ. ಕೊಲೆಯನ್ನು ಯೋಜಿತವಾಗಿ ನಡೆಸಲಾಗಿದ್ದು, ಸುದರ್ಶನ್‌ಗೆ ಮದ್ಯದಲ್ಲಿ ನಿದ್ದೆ ಮಾತ್ರೆ ಹಾಕಿ, ನಂತರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಕೊಲೆಯಾದ ಸುದರ್ಶನ್‌ನ ಶವವನ್ನು ಕರಗುಂದ ಬಸ್‌ ನಿಲ್ದಾಣದಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.
ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಮಲಾ ಸ್ವತಃ ಠಾಣೆಗೆ ಹೋಗಿ ತನ್ನ ಗಂಡನ ಸಾವಿನ ಬಗ್ಗೆ ದೂರು ನೀಡಿದ್ದಳು. ಆದರೆ ಪೊಲೀಸ್‌ ತನಿಖೆಯಲ್ಲಿ ಕಮಲಾಳೇ ಕೊಲೆಯ ಮಾಸ್ಟರ್‌ಮೈಂಡ್ ಎಂಬ ಸತ್ಯ ಬಯಲಿಗೆ ಬಂದಿದ್ದು ಜೈಲು ಸೇರಿದ್ದಾಳೆ.

error: Content is protected !!