ರಿಕ್ಷಾ ಪಾರ್ಕ್ ಗೆ ನುಗ್ಗಿದ ಟೆಂಪೋ, 2 ಅಂಗಡಿಗಳಿಗೆ ಹಾನಿ

ಹಳೆಯಂಗಡಿ: ಗೂಡ್ಸ್ ಟೆಂಪೋವೊಂದು ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಇಲ್ಲಿನ ರಿಕ್ಷಾ ಪಾರ್ಕ್ ನೊಳಗೆ ನುಗ್ಗಿದ ಪರಿಣಾಮ ಪಾರ್ಕ್ ನ ಶೆಲ್ಟರ್ ಮತ್ತು ಎರಡು ಅಂಗಡಿಗಳಿಗೆ ಹಾನಿ ಉಂಟಾದ ಘಟನೆ ತಡರಾತ್ರಿ ನಡೆದಿದೆ.

 

ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾದ ವರದಿಯಾಗಿಲ್ಲ. ತಡರಾತ್ರಿ ಜೋರಾಗಿ ಮಳೆ ಬರುತ್ತಿದ್ದ ಸಂದರ್ಭದಲ್ಲಿ ಟೆಂಪೋ ಹೆದ್ದಾರಿಯ ಪಕ್ಕದ ರಿಕ್ಷಾ ಪಾರ್ಕ್ ಹಿಂಭಾಗಕ್ಕೆ ನುಗ್ಗಿದೆ. ಈ ಸಂದರ್ಭದಲ್ಲಿ ಯಾರೂ ಇಲ್ಲದ ಕಾರಣ ಅಪಾಯ ಸಂಭವಿಸಿಲ್ಲ. ಹಗಲು ಹೊತ್ತಾಗಿದ್ದಾರೆ ದೊಡ್ಡ ಅನಾಹುತವೇ ನಡೆದುಹೋಗುತ್ತಿತ್ತು. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

error: Content is protected !!