ಉಸಿರಾಟದಲ್ಲಿ ಸೀಟಿ ಕೇಳಿದ ವೈದ್ಯರು – ಅಪರೂಪದ ಚಿಕಿತ್ಸೆ ನೀಡಿ ಬದುಕು ಉಳಿಸಿದರು 

ವೈಟ್‌ ಫಿಲ್ದ್‌ , ಬೆಂಗಳೂರು : ಪಶ್ವಿಮ ಬಂಗಾಳದಲ್ಲಿದ್ದ ಬಾಲಕ ಆಟವಾಡುವಾಗ ತಪ್ಪಿ ಸೀಟಿಯನ್ನು ನುಂಗಿದ ಕಾರಣ, ಅದಕ್ಕೆ ಕೂಡಲೇ ಸರಿಯಾದ ಚಿಕಿತ್ಸೆ ಸಿಗದ ಹಿನ್ನಲೆ, ನ್ಯುಮೋನೀಯಾ ಶುರುವಾಗಿ ಬಾಲಕನ ಜೀವಕ್ಕೆ ಕಂಟಕ್ಕೆ ಎದುರಾಗಿತ್ತು. ಬಳಿಕ ಬೆಂಗಳೂರಿನಲ್ಲಿರುವ ಮೆಡಿಕವರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಬಾಲಕ ಸಂಪೂರ್ಣವಾಗಿ ಗುಣಮುಖವಾಗಿ ಮರಳಿ ತಮ್ಮೂರಿಗೆ ತೆರಳಿದ.
7 ವರ್ಷದ ಬಾಲಕ ಮಾತಾನಾಡುವಾಗ ,ಕಿರಿಚಾಡುವಾಗ ಸೀಟಿ ಸೌಂಡ್‌ ಬರುತ್ತಾ ಇತ್ತು. ಏನಕ್ಕೆ ಹೀಗಾಗುತ್ತಾ ಇದೆ ಎಂದು ಹೆತ್ತವರು ಬಾಲಕನಲ್ಲಿ ಕೇಳಿದಾಗ,  ಬಾಲಕ ಆಟವಾಡುತ್ತಾ ಇರುವಾಗ ಸೀಟಿಯನ್ನು ನುಂಗಿರೋದು ತಿಳಿದು ಬಂದಿದೆ. ಸುಮಾರು 2 ಸೆಂಟಿ ಮೀಟರ್‌ ಉದ್ದದ ಸೀಟಿಯನ್ನು ಬಾಲಕ ನುಂಗಿದ್ದ .  ಹಾಗಾಗೀ ಆತನ ಹೆತ್ತವರು ಸ್ವಲ್ಪನೂ ತಡಮಾಡದೇ , ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತೆರಳಿದರು .ಅಲ್ಲಿ ಸಿಟಿ ಸ್ಕಾನ್‌ ಮಾಡಿಸಿ,  ಬ್ರಾಂಕೋಸ್ಕೊಪಿ ಮೂಲಕ ಸೀಟಿಯನ್ನು ತೆಗೆಯುವ ಪ್ರಯತ್ನ ಮಾಡಿದಾಗ,  ಅದು ಶ್ವಾಸನಾಳದಲ್ಲಿ ಗಟ್ಟಿಯಾಗಿ ಸಿಕ್ಕಿ ಹಾಕಿಕೊಂಡಿತ್ತು. ಇದರಿಂದ ಬಾಲಕನಿಗೆ ನ್ಯುಮೋನಿಯಾ ಕೂಡ ಶುರುವಾಗಿತ್ತು
ಸುಮಾರು ಹತ್ತು ದಿನಗಳ ಬಳಿಕ ಬೆಂಗಳೂರಿನಲ್ಲಿರುವ ಮೆಡಿಕವರ್‌ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ನ್ಯುಮೋನಿಯಾ ಹೆಚ್ಚಾಗಿತ್ತು , ಹಾಗಾಗೀ ಕೂಡಲೇ ಶ್ವಾಸಕೋಶತಜ್ಞ ಡಾ ಮಂಜುನಾಥ್‌ ಬಿಜಿ ಯವರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದರು .  ನ್ಯುಮೋನಿಯಾ ಹೆಚ್ಚಾಗಿದ್ದ ಕಾರಣ ಬ್ರಾಂಕೋಸ್ಕೊಪಿ ಮೂಲಕ ಸೀಟಿಯನ್ನು ತೆಗೆಯುವ ಬದಲು ಆಧುನಿಕ ತಂತ್ರಜ್ಞಾನವಾದ 1.1 mm ಕ್ರಯೋಪ್ರೋಬ್ ಮೂಲಕ ಬಾಲಕ ನುಂಗಿರುವ ಸೀಟಿಯನ್ನು ಹೊರತೆಗೆಯಲಾಯಿತು.ಶಸ್ತ್ರಚಿಕಿತ್ಸೆ ಬಳಿಕ ಬಲ ಕೆಳಗಿನ ಶ್ವಾಸನಾಳದಲ್ಲಿ ರಕ್ತಸ್ರಾವ ಸ್ವಲ್ಪ ಉಂಟಾಗಿತ್ತು, ಹೆಪ್ಪು ಗಟ್ಟಿದ ರಕ್ತವನ್ನು  ಕ್ರಯೋ ಬಳಸಿ ತೆಗೆದುಹಾಕಲಾಯಿತು. ಜತೆಗೆ  ನ್ಯುಮೋನಿಯಾಗೂ ಕೂಡ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿತ್ತು .
ಸಮಯೋಚಿತ ಮತ್ತು ಆಧುನಿಕ ಚಿಕಿತ್ಸೆಯಿಂದ ಗಂಭೀರ ಸಮಸ್ಯೆಗಳನ್ನು ತಪ್ಪಿಸಲಾಗುತ್ತದೆ ಮತ್ತು ರೋಗಿಯು ಸುರಕ್ಷಿವಾಗಿ  ಚೇತರಿಕಯಾಗಲು ಅನುಕೂಲವಾಗುತ್ತದೆ. ಕ್ರಯೋಯಂಥ ಆಧುನಿಕ ತಂತ್ರಜ್ಞಾನದ ಮೂಲಕ ಈಗ ಇಂತಹ ಸಮಸ್ಯೆಗಳಿಗೆ ಬೇಗ ಪರಿಹಾರ ಹುಡುಕೋದಕ್ಕೆ ಅನುಕೂಲವಾಗುತ್ತದೆ  ಎಂದು ಶ್ವಾಸಕೋಶತಜ್ಞ ಡಾ. ಮಂಜುನಾಥ್‌ ಬಿಜಿ ಅಭಿಪ್ರಾಯ ಪಟ್ಟಿದ್ದಾರೆ .
error: Content is protected !!