ಉಡುಪಿ: ಕಾರ್ಕಳ ಜ್ಞಾನ ಸುಧಾದ ವಿದ್ಯಾರ್ಥಿನಿ ಸ್ವಸ್ತಿ ಕಾಮತ್ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಕಾರ್ಕಳ ತಾಲೂಕಿನ ಕಣಂಜಾರು ನಿವಾಸಿ ಜನಾರ್ದನ್ ಕಾಮತ್ ಮತ್ತು ಶಾಂತಿ ಕಾಮತ್ ದಂಪತಿಯ ಪುತ್ರಿಯಾಗಿರುವ ಸ್ವಸ್ತಿ ಕಾಮತ್ 625 ಕ್ಕೆ 625 ಅಂಕ ಪಡೆದು ಜಿಲ್ಲೆಗೆ, ಹೆತ್ತವರು ಮತ್ತು ಶಾಲೆಗೆ ಕೀರ್ತಿ ತಂದಿದ್ದಾಳೆ.
ಪುತ್ರಿಯಾಗಿದ್ದಾಳೆ.
ವಿಶೇಷವೆಂದರೆ ಇವಳ ತಂದೆಯ ಹುಟ್ಟು ಹಬ್ಬವೂ ಇಂದೇ ಆಗಿದ್ದು, ತಂದೆಗೆ ಪೂರ್ಣ ಅಂಕಗಳ ಉಡುಗೊರೆ ನೀಡಿದ್ದಾಳೆ.
ರಾಜ್ಯದಲ್ಲಿ 22 ಮಂದಿ 625ಕ್ಕೆ 625 ಅಂಕ ಪಡೆದಿದ್ದು, ಈ ಪೈಕಿ ಸ್ವಸ್ತಿ ಕಾಮತ್ ಕೂಡಾ ಒಬ್ಬಳು. ವಿಶೇಷವೆಂದರೆ ತುಳುನಾಡು ಜಿಲ್ಲೆಗಳಾದ ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದ ಏಕೈಕ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆಯ ಸಾಧನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆಕೆ ಕಲಿತ ಸಂಸ್ಥೆಯಿಂದ 2 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಘೋಷಿಸಿದ್ದಾರೆ.