ಜಮ್ಮು: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ)ನ ಉನ್ನತ ಕಮಾಂಡರ್ ಅಲ್ತಾಫ್ ಲಲ್ಲಿಯನ್ನು ಭದ್ರತಾ ಪಡೆಗಳು ಎನ್‌ಕೌಂಟರ್ ಮಾಡಿ ಬಿಸಾಡಿದ್ದಾರೆ. ಅದಕ್ಕಿಂತ ಕೆಲವು ಗಂಟೆಗಳ ಮುಂಚೆ ಪಹಲ್ಗಾಂನಲ್ಲಿ ಪ್ರವಾಸಿಗರ ನರಮೇಧ ನಡೆಸಿದ್ದ ಇಬ್ಬರು ಉಗ್ರರ ಮನೆಯನ್ನು ಸೇನೆ ಪುಡಿಗಟ್ಟಿದೆ. ಬಂಡಿಪೋರಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕ ಲಷ್ಕರ್-ಎ-ತೈಬಾ (ಎಲ್‌ಇಟಿ)ನ ಉನ್ನತ ಕಮಾಂಡರ್ ಅಲ್ತಾಫ್ ಲಲ್ಲಿಯ ಕಥೆಯನ್ನು ಮಗಿಸಲಾಗಿದ್ದರೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಜಮ್ಮು ಜಮ್ಮು ಕಾಶ್ಮೀರದ ವಿವಿಧೆಡೆ ಭಾರತೀಯ ಸೇನೆ ಉಗ್ರರ ಬೇಟೆಗೆ ಇಳಿದಿದ್ದು, ಹಲವು ಕಡೆ ಗುಂಡಿನ ದಾಳಿಗಳು ನಡೆದಿವೆ. ಈ ಸಂದರ್ಭದಲ್ಲಿ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಬಲಿ ಪಡೆದ ಮಾರಕ ಭಯೋತ್ಪಾದಕ ದಾಳಿಗೆ ಕಾರಣೀಕರ್ತರಾದ ಇಬ್ಬರು ಉಗ್ರರ ಕಾಶ್ಮೀರದಲ್ಲಿರುವ ಮನೆಯನ್ನು ಸೇನೆ ಧ್ವಂಸಗೊಳಿಸಿದೆ. ಲಷ್ಕರ್ ಟೆರರಿಸ್ಟ್ ಅಸಿಫ್ ಶೇಕ್‌ನ ಕಾಶ್ಮೀರದಲ್ಲಿರುವ ನಿವಾಸವನ್ನು ಹೊಡೆದುರುಳಿಸಲಾಗಿದೆ. ಕಾಶ್ಮೀರದ ವಿವಿಧೆಡೆ ಭಾರತೀಯ ಸೇನೆ ಉಗ್ರರ ಬೇಟೆಗೆ ಇಳಿದಿದ್ದು, ಹಲವು ಕಡೆ ಗುಂಡಿನ ದಾಳಿಗಳು ನಡೆದಿವೆ. ಪ್ರವಾಸಿಗರು ಹತ್ಯೆಯಲ್ಲಿ ಭಾಗಿಯಾಗಿರುವ ಪಾಕಿಸ್ತಾನಿ ಮತ್ತು ಸ್ಥಳೀಯ ಭಯೋತ್ಪಾದಕರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಪ್ರಯತ್ನಗಳನ್ನು ತೀವ್ರಗೊಳಿಸುತ್ತಿರುವಾಗ ಈ ಕಾರ್ಯಾಚರಣೆ ನಡೆದಿದೆ.
ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಶುಕ್ರವಾರ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಡಿಪೋರಾದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಭಯೋತ್ಪಾದಕರನ್ನು ತಡೆಹಿಡಿಯಲಾಯಿತು, ಇದು ಭೀಕರ ಗುಂಡಿನ ಚಕಮಕಿಗೆ ಕಾರಣವಾಯಿತು. ಇದಕ್ಕೂ ಮೊದಲು, ಭದ್ರತಾ ಪಡೆಗಳು ಬೆನ್ನಟ್ಟುತ್ತಿದ್ದ ಭಯೋತ್ಪಾದಕರಲ್ಲಿ ಒಬ್ಬರು ಆರಂಭಿಕ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದೇ ಎನ್‌ಕೌಂಟರ್‌ನಲ್ಲಿ, ಹಿರಿಯ ಅಧಿಕಾರಿಯ ಭದ್ರತಾ ತಂಡದ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.