ಮಂಗಳೂರು: ಒಣ ಕಸ, ಹಸಿ ಕಸ ಮತ್ತು ಸ್ಯಾನಿಟರಿ ಪ್ಯಾಡ್ ಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡ ಬೇಕೆಂಬ ನಿಯಮವನ್ನು ಉಲ್ಲಂಘನೆ ಮಾಡುತ್ತಿರುವ ಸಂಸ್ಥೆಗಳಿಗೆ ಮನಪಾ ತಲಾ 5000 ರೂ. ದಂಡ ವಿಧಿಸಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಟೇಲ್ ಮತ್ತು ವ್ಯಾಪಾರ ಸಂಸ್ಥೆಗಳ ಮೇಲೆ ಎರಡನೇ ದಿನ ನಡೆದ ದಾಳಿ ಕಾರ್ಯಾಚರಣೆಯಲ್ಲಿ ನಯಮ ಉಲ್ಲಂಘಿಸುತ್ತಿರುವ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಯಿತು.
ಇಂದು ಉರ್ವ ಸ್ಟೋರ್, ಕೊಟ್ಟಾರ ಮತ್ತು ಚೌಕಿ ಪರಿಸರದ ಹೊಟೇಲ್‌ಗಳ ಮೇಲೆ ಪಾಲಿಕೆ ಆಯುಕ್ತ ರವಿಚಂದ್ರ ನಾಯ್ಕ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿತು. ತ್ಯಾಜ್ಯ ಉತ್ಪತ್ತಿ ಸ್ಥಳದಿಂದಲೇ ಕಸ ವಿಂಗಡನೆ ಮಾಡದೆ ನಿಯಮ ಉಲ್ಲಂಘಿಸಿ ಕಸವನ್ನು ಪೌರ ಕಾರ್ಮಿಕರಿಗೆ ನೀಡಿದ ಹೊಟೇಲ್‌ಗಳಿಗೆ ತಲಾ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದ್ದು, ಮೊದಲ ಬಾರಿಗೆ ಎಚ್ಚರಿಕೆ ಕ್ರಮವಾಗಿ 5000 ರೂ. ಬಳಿಕ 25000 ರೂ. ಅದರ ಬಳಿಕವೂ ತ್ಯಾಜ್ಯ ವಿಂಗಡನೆಗೆ ಸಂಬಂಧಪಟ್ಟವರು ಕ್ರಮ ವಹಿಸದಿದ್ದರೆ, ಪರವಾನಿಗೆ ರದ್ದುಗೊಳಿಸುವಂತಹ ಕ್ರಮ ಕೈಗೊಳ್ಳುವುದಾಗಿ ಮಹಾ ನಗರ ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.