ಗಣೇಶಪುರ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ
ಸುರತ್ಕಲ್: ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ ಹಿನ್ನೆಲೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಸೋಮವಾರ ಸಂಜೆ ನಡೆಯಿತು.
ಉಡುಪಿ ಅದಮಾರು ಮಠದ ಪರಮ ಪೂಜ್ಯ ಈಶಪ್ರಿಯ ತೀರ್ಥ ಶ್ರೀ ಪಾದಂಗಳವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಆಶೀರ್ವಚನದ ನುಡಿಗಳನ್ನಾಡಿದ ಅವರು, ಸನಾತನ ಧರ್ಮಿಯರಿಗೆ ದೇವರ ಅನುಗ್ರಹ ಬೇಕು. ಮನಮನಗಳಲ್ಲಿ ಗಣಪತಿಯ ಪ್ರತಿಷ್ಠೆಯಾಗ ಬೇಕು. ಆ ಕುರಿತು ಚಿಂತನೆ ಅಗತ್ಯ. ಕ್ರಿಯೆಯೊಟ್ಟಿಗೆ ಚಿಂತನೆ ಸೇರಿದಾಗ ಅದು ಉಳಿಯುತ್ತದೆ. ಅಲ್ಲಲ್ಲಿ ಧಾರ್ಮಿಕ ಶಿಬಿರಗಳನ್ನು ನಡೆಸಿ ಮಕ್ಕಳನ್ನು ತೊಡಗಿಸಿ ಕೊಳ್ಳೋಣ, ಆ ಮೂಲಕ ದೇಶವನ್ನು ಕಟ್ಟುವಲ್ಲಿ ಎಲ್ಲರ ಪ್ರಯತ್ನ ಇರಲಿ ಎಂದರು.
ಕಮಲಾದೇವಿ ಪ್ರಸಾದ ಅಸ್ರಣ್ಣರು ಶುಭಾಶಂಸನೆ ಮಾಡಿದರು.
ಅಧ್ಯಕ್ಷತೆಯನ್ನು ಶಾಸಕ ಡಾ ವೈ ಭರತ್ ಶೆಟ್ಟಿ ವಹಿಸಿದ್ದರು. ಬ್ರಹ್ಮಶ್ರೀ ಡಾ ದೇರೆಬೈಲ್ ಶಿವಪ್ರಸಾದ್ ತಂತ್ರಿವರೇಣ್ಯರು ದೇವಸ್ಥಾನಗಳಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಾಮುಖ್ಯತೆ ಕುರಿತು ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಕೆ.ವಾಸುದೇವ ಶೆಟ್ಟಿ, ಅಧ್ಯಕ್ಷರು, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಅಭಿವೃದ್ಧಿ ಸಮಿತಿ, ಕಾಪು , ಗಿರೀಶ್ ಎಸ್, ಮುಖ್ಯ ಉತ್ಪಾದನಾ ಅಧಿಕಾರಿಗಳು, ಎಮ್.ಸಿ.ಎಫ್, ಪಣಂಬೂರು, ಕೆ.ಸಿ.ನಾಗೇಂದ್ರ ಭಾರಧ್ವಜ್, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಶ್ರೀ ವಿಶ್ವನಾಥ ದೇವಸ್ಥಾನ ಕೃಷ್ಣಾಪುರ , ಕೃಷ್ಣ ಹೆಗಡೆ ಎಂಆರ್ ಪಿಎಲ್ , ಕುಶಾಲ್ ಭಂಡಾರಿ, ಉದ್ಯಮಿ ಮುಂಬಯಿ, ಸುರೇಶ್ ಶೆಟ್ಟಿ, ಮಾಲಕರು, ವೈಷ್ಣವಿ ಟ್ರಾನ್ಸ್‌ಪೋರ್ಟ್, ಮಂಗಳೂರು, ಕು. ರಶ್ಮಿ ಸಾಮಂತ್, ಕಾರ್ಯ ನಿರ್ವಾಹಕ ನಿರ್ದೇಶಕರು, ಪುನರ್ನವ ಗ್ರೂಪ್ , ಮೋಹನ್ ಚೌಟ ಮದ್ಯ, ಉದ್ಯಮಿ ಮಂಬಯಿ , ಯಾದವ ಕೋಟ್ಯಾನ್, ಅಧ್ಯಕ್ಷರು, ಬ್ರಹ್ಮಕಲಶೋತ್ಸವ . ಧರ್ಮೇಂದ್ರ ಗಣೇಶಪುರ, ಅಧ್ಯಕ್ಕರು, ವ್ಯವಸ್ಥಾಪನಾ ಸಮಿತಿ, ಶ್ರೀ ಮಹಾಗಣಪತಿ ದೇವಸ್ಥಾನ, ಗಣೇಶಪುರ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಅತಿಥಿಗಳನ್ನು ಸ್ವಾಗತಿಸಿದರು. ಆರ್ ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.