ಮುಂಬೈ: ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ವೆಡ್ಡಿಂಗ್ ಅನಿವರ್ಸರಿ ಆಚರಿಸಿಕೊಳ್ಳುವ ಮೂಲಕ ತಾವಿಬ್ಬರೂ ಪರಸ್ಪರ ಡೈವೋರ್ಸ್ ಪಡೆಯುತ್ತೇವೆ ಎಂದು ಸುದ್ದಿ ಹಬ್ಬಿಸಿದ ಕುಹಕಿಗಳ ಬಾಯಿ ಮುಚ್ಚಿಸಿದ್ದಾರೆ. ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ 18ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ಐಶ್ವರ್ಯ ರೈ ತಮ್ಮ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ.
ಫೋಟೊದಲ್ಲಿ ಐಶ್ವರ್ಯಾ ಪತಿ ಅಭಿಷೇಕ್ ಮತ್ತು ಮಗಳು ಆರಾಧ್ಯ ಜೊತೆ ಪೋಸ್ ನೀಡಿದ್ದಾರೆ. ಅಭಿಷೇಕ್ ಬಚ್ಚನ್ ತಮ್ಮ ಪತ್ನಿ ಹಾಗೂ ಮಗಳನ್ನು ಹಿಡಿದಿಟ್ಟುಕೊಂಡು ಫೋಸ್ ನೀಡಿದ್ದಾರೆ. ಮಗಳು ಆರಾಧ್ಯ, ಐಶ್ವರ್ಯಾ ಜೊತೆಗೆ ನಗೆ ಬೀರಿದ್ದಾರೆ. ಮೂವರು ಬಿಳಿ ಬಣ್ಣದ ಉಡುಪು ಧರಿಸಿದ್ದು ಬಿಳಿ ಎಮೋಜಿ ಜೊತೆಗೆ ನಟಿ ಫೋಟೊ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ.
ಐಶ್ಚರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಹಲವು ಹಿಟ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದರು. ಆ ಬಳಿಕ ಅವರ ನಡುವೆ ಸ್ನೇಹ ಬೆಳೆದು ನಂತರ ಈ ಜೋಡಿ 2007ರಲ್ಲಿ ಹಸೆಮಣೆ ಏರಿದರು. 2011ರಲ್ಲಿ ಐಶ್ವರ್ಯಾ ರೈ ಅವರು ಹೆಣ್ಣು ಮಗು ಆರಾಧ್ಯಾಗೆ ಜನ್ಮ ನೀಡಿದರು. ಅಭಿಷೇಕ್ ಇತ್ತೀಚೆಗೆ ರೆಮೊ ಡಿಸೂಜಾ ನಿರ್ದೇಶನದ ಬಿ ಹ್ಯಾಪಿ ಚಿತ್ರದಲ್ಲಿ ಕಾಣಿಸಿ ಕೊಂಡಿದ್ದರು. ಅಭಿಷೇಕ್ ಮುಂದಿನ ಚಿತ್ರ ಹೌಸ್ ಫುಲ್ 5 ಮೂಲಕ ಕಾಣಿಸಿ ಕೊಳ್ಳಲಿದ್ದಾರೆ. ಈ ಹಾಸ್ಯ ಚಲನಚಿತ್ರದಲ್ಲಿ ಅಕ್ಷಯ್ ಕುಮಾರ್, ರಿತೇಶ್ ದೇಶ್ಮುಕ್, ಫರ್ದೀನ್ ಖಾನ್, ಜಾಕ್ಲಿನ್ ಫೆರ್ನಾಂಡಿಸ್, ನರ್ಗಿಸ್ ಫಖ್ರಿ, ಸಂಜಯ್ ದತ್ ಸೇರಿದಂತೆ ಹಲವಾರು ಪ್ರಮುಖ ನಟರು ಇದ್ದಾರೆ. ತರುಣ್ ಮಂಸುಖಾನಿ ನಿರ್ದೇಶನದ ಈ ಚಿತ್ರ ಜೂನ್ 6ರಂದು ತೆರೆಕಾಣಲಿದೆ.