ಮೈಲಾರಿಯ ಟಾರ್ಚರ್:‌ ಮದುವೆಗೆ 8 ದಿನ ಇರುವಾಗಲೇ ಸೈರಾಬಾನು ಆ*ತ್ಮಹ*ತ್ಯೆ

ಗದಗ: ಪ್ರಿಯಕರನ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ದೈಹಿಕ ಶಿಕ್ಷಕಿಯೋರ್ವರು ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆಗೆ ಶರಣಾಗಿರುವ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಶಿಕ್ಷಕಿಯನ್ನು ಅಸುಂಡಿ ಗ್ರಾಮದ ಸೈರಾಬಾನು ನದಾಫ್‌ (29) ಎಂದು ಗುರುತಿಸಲಾಗಿದೆ.

ಮದುವೆಗೆ 8 ದಿನ ಬಾಕಿ ಇರುವಾಗಲೇ ಯುವತಿ ಪೋಷಕರು ಮದುವೆ ಸಾಮಾಗ್ರಿಗಳನ್ನು ತರಲು ಹೋಗಿದ್ದರು. ಪೋಷಕರು ಮರಳಿ ಬರುವಷ್ಟರಲ್ಲಿ ಡೆತ್ ನೋಟ್ ಬರೆದಿಟ್ಟು ಭಾನುವಾರ ತಡರಾತ್ರಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಕಳೆದ 5 ವರ್ಷಗಳಿಂದ ಮೈಲಾರಿ ಎಂಬಾತನನ್ನು ಸೈರಾಬಾನು ಪ್ರೀತಿ ಮಾಡುತಿದ್ದಳು. ಆದರೆ, ಕೆಲ ದಿನಗಳ ಹಿಂದೆ ಇವರಿಬ್ಬರ ಪ್ರೀತಿ ಮುರಿದು ಬಿದ್ದಿತು. ಅದಾದ ಬಳಿಕ ಪೋಷಕರ ಒತ್ತಾಯ ಮೇರೆಗೆ ಬೇರೆ ಮದುವೆಗೆ ಒಪ್ಪಿಕೊಂಡಿದ್ದಳು.

ಆದರೆ, ಶಿಕ್ಷಕಿಯ ಮದುವೆ ತಯಾರಿ ನೋಡಿ ಪ್ರಿಯಕರ ಮೈಲಾರಿಯಿಂದ ಮತ್ತೆ ಕಿರುಕುಳ ಶುರುವಾಗಿದೆ. ಬೇರೆ ಮದುವೆ ಆದರೆ ಇಬ್ಬರ ಪೋಟೋ, ವೀಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕ್ತಿದ್ದಾನೆ. ಇದರಿಂದ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಕಿರುಕುಳ ನೀಡಿರುವ ಯುವಕನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

error: Content is protected !!