ದೇಗುಲದಲ್ಲಿ ಮಗುವಿಗೆ ಜನ್ಮ ನೀಡಿದ ನೂರ್‌ ಜಹಾನ್‌! ಮಗುವಿನ ಹೆಸರು ಗಣೇಶ

ಮುಂಬೈ: ಮುಸ್ಲಿಂ ಮಹಿಳೆಯೊಬ್ಬಳು ಗಣೇಶನದ ದೇಗುಲದಲ್ಲಿ ಮಗುವಿಗೆ ಜನ್ಮ ನೀಡಿ, ಮಗನಿಗೆ ʻಗಣೇಶʼ ಎಂದು ಹೆಸರಿಟ್ಟ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ಫೋಟೋಗಳು ವೈರಲ್‌ ಆಗಿದೆ. ಈ ಘಟನೆ 10 ವರ್ಷಗಳ ಹಿಂದೆ ನಡೆದಿದ್ದು, ಮತೀಯವಾದ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದೀಗ ಮತ್ತೊಮ್ಮೆ ವೈರಲಾಗುತ್ತಿದೆ.

ತುಂಬು ಗರ್ಭಿಣಿ. ನೂರ್ ಜಹಾನ್ ಗೆ ಮಧ್ಯರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅವರ ಪತಿ ಇಲ್ಯಾಜ್ ಶೇಖ್ ಪತ್ನಿಯನ್ನು ಸಿಯಾನ್ ಆಸ್ಪತ್ರೆಗೆ ತಲುಪಲು ಟ್ಯಾಕ್ಸಿ ಪಡೆದುಕೊಂಡರು. ಆದರೆ ಅವರ ನಸೀಬು ಕೆಟ್ಟಿತ್ತು. ವಿಜಯನಗರದ ಬಳಿ ರಸ್ತೆ ತುಂಬಾ ಕಿರಿದಾಗಿರುವುದ್ದರಿಂದ ಟ್ಯಾಕ್ಸಿ ಚಾಲಕನಿಗೆ ಗಂಟೆಗೆ 30 ಕಿಮೀ ವೇಗದಲ್ಲಿ ಓಡಿಸಲು ಸಹ ಸಾಧ್ಯವಾಗಲಿಲ್ಲ. ಆದರೆ ಹೆರಿಗೆ ನೋವಿನಿಂದ ನೂರ್ ಜಹಾನ್ ಬಳಲುತ್ತಿದ್ದರು. ಆಸ್ಪತ್ರೆಗೆ ತಲುಪಲು ಕನಿಷ್ಠ ಒಂದು ಗಂಟೆ ತೆಗೆದುಕೊಳ್ಳುತ್ತದೆ ಎಂದು ಚಾಲಕ ಹೇಳಿದಾಗ ಅವರಿಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಪದೇ ಪದೇ ಚಾಲಕನಿಗೆ ಬೇಗ ತಲುಪುವುಂತೆ ಒತ್ತಾಯ ಮಾಡಿದಾಗ ಕೋಪಗೊಂಡ ಟ್ಯಾಕ್ಸಿ ಚಾಲಕ ಗರ್ಭಿಣಿಯನ್ನು ಅಲ್ಲಿಯೇ ಇಳಿಸಿ ಹೋಗಿದ್ದ.

ಇಲ್ಯಾಜ್‌ ಟ್ಯಾಕ್ಸಿಗಾಗಿ ಹುಡುಕಾಡಿದರೂ ಸಿಗಲಿಲ್ಲ. ಕೊನೆಗೆ ಅಲ್ಲಿಯೇ ಸಮೀಪವಿದ್ದ ಗಣೇಶನ ದೇವಸ್ಥಾನದ ಎದುರಿಗೆ ಆಕೆಯನ್ನು ಮಲಗಿಸಿದ್ದಾರೆ. ನೂರ್‌ ಅವ ಹೆರಿಗೆ ನೋವಿನಿಂದ ಕಿರುಚಾಡುತ್ತಿದ್ದರು. ಆಗ ದೇಗುಲದ ಒಳಗಡೆ ಭಜನೆ ನಡೆಯುತ್ತಿತ್ತು. ಅಳುವುದನ್ನು ಕೇಳಿದ, ಭಜಕರು ಆಕೆಯನ್ನು ದೇಗುಲದ ಒಳಗಡೆ ಕರೆದುಕೊಂಡು ವೃದ್ಧೆ ಸೂಲಗಿತ್ತಿಯ ಸಹಾಯದಿಂದ ಹೆರಿಗೆ ಮಾಡಿದ್ದಾರೆ. ಇತ್ತ ಟ್ಯಾಕ್ಸಿ ತರಲು ಹೋದ ಇಲ್ಯಾಜ್ ಶೇಖ್ ಟ್ಯಾಕ್ಸಿ ಸಿಗದೆ ದುಃಖದಿಂದ ಬರುತ್ತಿದ್ದಾಗ ಮಗುವಿಗೆ ಜನ್ಮ ನೀಡಿರುವುದು ತಿಳಿಯಿತು. ಅಮ್ಮ-ಮಗು ಇಬ್ಬರೂ ಸುರಕ್ಷಿತವಾಗಿರುವುದನ್ನು ಕಂಡು ಗಣೇಶನಿಗೆ ಶಿರಬಾಗಿಸಿ ಕೈಮುಗಿದಿದ್ದಾರೆ.

“ನಾನು ರಸ್ತೆಯ ಮಧ್ಯದಲ್ಲಿ ಹೆರಿಗೆಯ ನೋವಿನಿಂದ ಅಳುತ್ತಿದ್ದಾಗ ಗಣೇಶ ದೇವರು ಸ್ವತಃ ನಮ್ಮನ್ನು ನೋಡುತ್ತಿದ್ದು, ಇಲ್ಲಿಗೆ ಬಾ ಎಂದು ಕರೆದಂತೆ ಭಾಸವಾಯಿತು ಎಂದು ನೂರ್‌ ಜಹಾನ್‌ ಹೇಳಿದ್ದಾರೆ. ನೂರ್‌ ಜಹಾನ್‌ ತನ್ನ ಮಗುವಿಗೆ ʻಗಣೇಶʼ ಎಂದು ಹೆಸರಿಟ್ಟಿದ್ದು, ಇದೀಗ ಆತ ಶಾಲೆಗೆ ಹೋಗುತ್ತಿದ್ದಾನಂತೆ.

error: Content is protected !!