ಐಎಫ್‌ಬಿ ಮಹದೇವಪುರ ಘಟಕದಲ್ಲಿ 127ಕ್ಕೂ ಹೆಚ್ಚು ನೌಕರರ ಆರೋಗ್ಯ ತಪಾಸಣೆ


ಬೆಂಗಳೂರು, ವೈಟ್‌ ಫೀಲ್ದ್‌ :
ನೌಕರರ ಆರೋಗ್ಯ ಮತ್ತು ಕಲ್ಯಾಣವನ್ನು ಉತ್ತೇಜಿಸಲು, ಮೆಡಿಕವರ್ ಆಸ್ಪತ್ರೆ ಐಎಫ್‌ಬಿ ಮಹದೇವಪುರ ಘಟಕದಲ್ಲಿ ವಿಸ್ತೃತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಇದರಿಂದ 127ಕ್ಕೂ ಹೆಚ್ಚು ನೌಕರರು ಲಾಭ ಪಡೆದರು.
ಈ ಕಾರ್ಯಕ್ರಮವನ್ನು ಐಎಫ್‌ಬಿ ನ Occupational Health Center ಸಹಯೋಗದಲ್ಲಿ ಆಯೋಜಿಸಲಾಯಿತು. ಐಎಫ್‌ಬಿಯ HR ಪ್ರತಿನಿಧಿ ಶ್ರೀ ಸಂದೀಪ್ ಹಾಗೂ ನರ್ಸಿಂಗ್ ತಂಡದ ಶ್ರೀ ಸತೀಶ್ ಮತ್ತು ಶ್ರೀ ಮೆಹಬೂಬ್ ಶಿಬಿರದ ಯಶಸ್ಸಿಗೆ ಸಹಕಾರ ನೀಡಿದರು.
ಮೆಡಿಕವರ್ ಪರವಾಗಿ ಡಾ. ಕುಶ್ವಂತ್ ಮತ್ತು ನರ್ಸ್ ಹೃದಯ್ ಈ ಶಿಬಿರವನ್ನು ಮುಂಚೂಣಿಯಲ್ಲಿ ನಿಭಾಯಿಸಿದರು. ತಪಾಸಣೆಯಲ್ಲಿ ರಕ್ತದೊತ್ತಡ, ಶುಗರ್ ಟೆಸ್ಟ್, BMI, ಮತ್ತು ಸಾಮಾನ್ಯ ಆರೋಗ್ಯ ಸಲಹೆಗಳು ಒಳಗೊಂಡಿದ್ದವು.
ಮೆಡಿಕವರ್ ಆಸ್ಪತ್ರೆ ಭವಿಷ್ಯದಲ್ಲಿಯೂ ಇಂತಹ ಆರೋಗ್ಯ ಶಿಬಿರಗಳನ್ನು ನಡೆಸಲು ಮತ್ತು ನೌಕರರ ಆರೋಗ್ಯ ಸುಧಾರಣೆಗೆ ಸಹಕಾರ ನೀಡಲು ಐಎಫ್‌ಬಿಗೆ ಭರವಸೆ ನೀಡಿದೆ.

error: Content is protected !!