ಕೀವ್: ರಷ್ಯಾದಂತ ಬಲಾಢ್ಯ ದೇಶದ ಜೊತೆ ಕಾದಾಟಕ್ಕಿಳಿದು ಹೈರಾಣಾಗಿರುವ ಪುಟ್ಟ ರಾಷ್ಟ್ರ ಉಕ್ರೇನಿನ ಹಣಕಾಸು ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಸೇನೆಯ ಖರ್ಚುಗಳನ್ನು ಪೂರೈಸಲು ನೀಲಿ ಚಿತ್ರವನ್ನು ಕಾನೂನು ಬದ್ಧಗೊಳಿಸುವ ನೀಚ ಕೆಲಸಕ್ಕೆ ಮುಂದಾಗಿದೆ.
ನೀಲಿ ಚಿತ್ರ ಚಿತ್ರೀಕರಣ, ಪ್ರಸಾರ ಮತ್ತು ವೀಕ್ಷಣೆಗೆ ಕಾನೂನು ಮಾನ್ಯತೆ ನೀಡಲಿರುವ ಉಕ್ರೇನ್ ಇದಕ್ಕಾಗಿ ಕಾನೂನು ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ ಬರುವ ದುಡ್ಡನ್ನು ಉಕ್ರೇನ್ ಸೇನೆಗೆ ಬಳಸಲಿದೆ.
ರಷ್ಯಾದ ಆಕ್ರಮಣದ ವಿರುದ್ಧ ಉಕ್ರೇನ್ ಹೋರಾಡುತ್ತಿರುವಾಗ, ಯುದ್ಧಕಾಲದ ತೆರಿಗೆ ಆದಾಯವನ್ನು ಹೆಚ್ಚಿಸಲು ಪೋರ್ನೋಗ್ರಫಿಯನ್ನು ಅಪರಾಧ ಮುಕ್ತಗೊಳಿಸಲು ವಿವಾದಾತ್ಮಕ ಮಸೂದೆಯನ್ನು ರಚಿಸಲಾಗಿದೆ.
ಉಕ್ರೇನ್ ಈಗಾಗಲೇ ಪೋರ್ನೋಗ್ರಫಿ ಉದ್ಯಮದಲ್ಲಿ ಟಾಪ್‌ನಲ್ಲಿದ್ದು, ಇಲ್ಲಿ ಪೋರ್ನ್ ಸ್ಟಾರ್‌ಗಳಿಗೆ ದೊಡ್ಡ ಹೆಸರಿದೆ. ಲಿಂಡಾ ಲವ್ ಲಾಕ್, ಗ್ರೆಗೋರಿ ಮೆಂಡೋನ್ಸಾ, ಟೀನಾ ಟೆಲ್ವಿನ್ಸಾ ಇವರೆಲ್ಲಾ ಉಕ್ರೇನ್‌ನವರಾಗಿದ್ದು, ಇವರಿಗೆ ವಿಶ್ವದಲ್ಲಿಯೇ ಕೋಟ್ಯಂತರ ಮಂದಿ ಫ್ಯಾನ್ಸ್ ಇದ್ದಾರೆ. ಇದೀಗ ಪೋರ್ನೋಗ್ರಫಿಗೆ ಉಕ್ರೇನ್ ಫುಲ್ ಪರ್ಮಿಷನ್ ಕೊಟ್ಟಿರುವುದರಿಂದ ಹೊಸ ಹೊಸ ಕಲಾವಿದರು ಇಲ್ಲಿಂದಲೇ ಹುಟ್ಟಿ ಬರುವ ಸಾಧ್ಯತೆ ಇದೆ.