ಮೆಡಿಕವರ್ ಆಸ್ಪತ್ರೆ ಪರಿಚಯಿಸಿದೆ ವಿಶ್ವಮಟ್ಟದ ರೊಬೋಟಿಕ್ ಮೂಳೆ ಶಸ್ತ್ರಚಿಕಿತ್ಸೆ


ಬೆಂಗಳೂರು, ವೈಟ್‌ಫೀಲ್ಡ್ – ಮೆಡಿಕವರ್ ಆಸ್ಪತ್ರೆ ತನ್ನ ಆರ್ಥೋಪೆಡಿಕ್ ವಿಭಾಗವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ, ಅತ್ಯಾಧುನಿಕ ಆರ್ಥೊ ರೊಬೋಟಿಕ್ ಶಸ್ತ್ರಚಿಕಿತ್ಸಾ ತಂತ್ರಜ್ಞಾನವನ್ನು ಯಶಸ್ವಿಯಾಗಿ ಆರಂಭಿಸಿದೆ. ಈ ತಂತ್ರಜ್ಞಾನದ ಮೂಲಕ ರೋಗಿಗಳಿಗೆ ಹೆಚ್ಚು ನಿಖರ ಹಾಗೂ ಅನುಕೂಲಕರ ಶಸ್ತ್ರಚಿಕಿತ್ಸೆಯನ್ನು ನೀಡುವುದು ಸಾಧ್ಯವಾಗಲಿದೆ.
ಈ ಹೊಸ ಉಪಕ್ರಮದಿಂದ ಮೂಳೆ ಮತ್ತು ಜೋಡಣೆ ಸಂಬಂಧಿತ ಜಟಿಲ ಸಮಸ್ಯೆಗಳಿಗೆ ಹೆಚ್ಚು ನಿಖರವಾದ ಮತ್ತು ಪರಿಣಾಮಕಾರಿ ಚಿಕಿತ್ಸೆ ದೊರೆಯಲಿದ್ದು, ವಿಶೇಷವಾಗಿ ಮಂಡಿ ಮತ್ತು ಹಿಪ್ ಜೋಡಣೆಯ ಬದಲಾವಣಾ ಶಸ್ತ್ರಚಿಕಿತ್ಸೆಗಳಲ್ಲಿ ರೊಬೋಟಿಕ್ ತಂತ್ರಜ್ಞಾನವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಈ ತಂತ್ರಜ್ಞಾನದ ಅನುಷ್ಠಾನದಲ್ಲಿ ಮೆಡಿಕವರ್‌ ಆಸ್ಪತ್ರೆಯ ಹಿರಿಯ ಮೂಳೆ ತಜ್ಞರು –ಡಾ. ಆರ್. ಡಿ. ಚಕ್ರವರ್ತಿ, ಡಾ. ರವೀಂದ್ರ ಪುಟ್ಟಸ್ವಾಮಯ್ಯ, ಡಾ. ಸಂಜಯ್ ಹೆಗಡೆ, ಡಾ. ಕೃಷ್ಣಕುಮಾರ್ ಮತ್ತು ಡಾ. ರಾಘವೇಂದ್ರ ರವರು ಪ್ರಮುಖ ಪಾತ್ರವಹಿಸಿದ್ದಾರೆ. ಈ ತಜ್ಞರು ರೊಬೋಟಿಕ್ ತಂತ್ರಜ್ಞಾನದಲ್ಲಿ ಪರಿಣಿತರಾಗಿದ್ದು, ವಿಶ್ವಮಟ್ಟದ ಚಿಕಿತ್ಸೆ ನೀಡಲು ಸದಾ ಸಿದ್ಧರಾಗಿದ್ದಾರೆ.
ಈ ಶಸ್ತ್ರಚಿಕಿತ್ಸಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಗೋಪಾಲ್ ಹಾಗೂ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಶೃತಿ ಕೊಯ್ಲಿ ಅವರು ಭಾಗವಹಿಸಿದ್ದರು

error: Content is protected !!