ಪೊಲೀಸರ ಎಚ್ಚರಿಕೆಗೆ ಹೆದರಿ ಮಚ್ಚು ಲಾಂಗು ವಿಡಿಯೋ ಕೊನೆಗೂ ಡಿಲೀಟ್‌ ಮಾಡಿದ ಬುಜ್ಜಿ!?

ಬೆಂಗಳೂರು: ಮಚ್ಚು, ಲಾಂಗು ಹಿಡಿದು ರೀಲ್ಸ್‌ ಮಾಡಿ, ಧಿಮಾಕು ತೋರಿಸಿ ಜೈಲಿಗೆ ಹೋಗಿ ಬಂದಿದ್ದ ನಟ ರಜತ್ ಅಲಿಯಾಸ್ ಬುಜ್ಜಿಗೆ ಇನ್ನೂ ಬುದ್ಧಿ ಬಂದಿಲ್ಲ, ವಿವಾದದ ಕೇಂದ್ರಬಿಂದುವಾಗಿದ್ದ ಆ ವಿಡಿಯೋ ಇನ್ನೂ ಇನ್ಸ್ಟಾಗ್ರಾಂನಲ್ಲಿ ಓಡುತ್ತಾ ಇದ್ದು, ರಜತ್‌ ಅದನ್ನು ಡಿಲೀಟ್‌ ಮಾಡದೆ ಬೇಜವಾಬ್ದಾರಿತನ ತೋರಿಸಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದ ಬೆನ್ನಲ್ಲೇ ಇನ್ಸ್ಟಾಗ್ರಾಂನಲ್ಲಿ ಡಿಲೀಟ್‌ ಆಗಿದೆ. ವಿವಾದಾತ್ಮಕ ವಿಡಿಯೋ ಡಿಲೀಟ್‌ ಆಗಿಲ್ಲ ಎಂದು ನೆಟ್ಟಿಗರ ಕಮೆಂಟ್‌ ವೈರಲ್‌ ಆಗುತ್ತಿದ್ದಂತೆ ಪೊಲೀಸರು ಬುಜ್ಜಿಗೆ ಎಚ್ಚರಿಕೆ ನೀಡಿದ್ದು, ಇದರಿಂದ ಹೆದರಿ ಕಂಗಾಲಾದ ಬುಜ್ಜಿ ವಿಜಿಯೋವನ್ನು ಡಿಲೀಟ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ.

file photo

ಈ ವಿಡಿಯೋ ಟ್ರೆಂಡಿಂಗ್‌ನಲ್ಲಿರುವುದರಿಂದ ಪೊಲೀಸರೂ ಸಹ ಈ ವಿಡಿಯೋ ಡಿಲಿಟ್ ಮಾಡಿಸಿಲ್ಲವೇ? ಅಥವಾ ರಜತ್‌ ನ್ಯಾಯಾಲಯದ ಆದೇಶವನ್ನು ಗಾಳಿಯಲ್ಲಿ ತೂರಿದ್ದಾರೆಯೇ ಎಂದು ನೆಟ್ಟಿಗರು ಪ್ರಶ್ನಿಸಲಾರಂಭಿಸಿದ್ದರು. ಸುಮಾರು 10 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿರುವ ವಿವಾದಾತ್ಮಕ ವಿಡಿಯೋ ಇನ್ನೂ ಓಡುತ್ತಲೇ ಇದ್ದು, ಈಗಲೂ ಅದು ಟ್ರೆಂಡಿಂಗ್‌ನಲ್ಲಿಯೇ ಇತ್ತು.
ಸ್ವಘೋಷಿತ ಡಿ ಬಾಸ್‌, ಕೊಲೆ ಆರೋಪಿ, ನಟ ದರ್ಶನ್‌ನನ್ನು ಮೆಚ್ಚಿಸಲೆಂದು‌ ಬಿಗ್‌ಬಾಸ್ ರಜತ್‌ ಹಾಗೂ ಬಿಗ್‌ಬಾಸ್‌ ವಿನಯ್ ಆತನ ಚಿತ್ರಗಳನ್ನು ಪ್ಯಾಂಟ್‌, ಶರ್ಟ್‌ನಲ್ಲಿ ಬರೆಸಿ ಮಚ್ಚು ಲಾಂಗು ಹಿಡಿದು, ಪೋಸ್‌ ಕೊಟ್ಟು, ಅದರ ವಿಡಿಯೋ ಮಾಡಿಸಿ, ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದರು. ಇದು ವೈರಲ್‌ ಆಗುತ್ತಿದ್ದಂತೆ ಬಸವೇಶ್ವರ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಿ ರಜತ್ ಸೇರಿದಂತೆ ಆರೋಪಿಗಳನ್ನು ಜೈಲಿಗಟ್ಟಿದ್ದರು. ಸುಮಾರು ದಿನಗಳ ಕಾಲ ಜೈಲಿನಲ್ಲೇ ಇದ್ದು, ಪೆಚ್ಚಾಗಿದ್ದ ಈ ಇಬ್ಬರು ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಆದರೆ ಇಷ್ಟಾದರೂ ವಿವಾದ ಸೃಷ್ಟಿಸಿದ್ದ ವಿಡಿಯೋ ಇನ್ನೂ ಡಿಲೀಟ್‌ ಆಗಿಲ್ಲ ಎಂದು ಆರೋಪಿಸಲಾಗಿದೆ. ಇದು ಪೊಲೀಸರ ಬೇಜವಾಬ್ದಾರಿತನವೋ ಅಥವಾ ಪೊಲೀಸರ ಎಚ್ಚರಿಕೆಗೆ ಸೊಪ್ಪು ಹಾಕದೆ ರಜತ್ ಇನ್ನೂ ವಿಡಿಯೋ ಉಳಿಸಿಕೊಂಡಿದ್ದಾರಾ? ಹಾಗಾದರೆ ಪೊಲೀಸರು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಜನ ಪ್ರಶ್ನಿಸಲಾರಂಭಿಸುತ್ತಿದ್ದಾರೆ.

error: Content is protected !!