ಸುರತ್ಕಲ್: ಮೇ14ರಂದು ಖಂಡಿಗೆ ಮೀನು ಹಿಡಿಯುವ ಜಾತ್ರೆಯೊಂದಿಗೆ ಕಂಡೇವುದ ಆಯನ ಪ್ರಾರಂಭಗೊಳ್ಳಲಿದ್ದು ಎರಡು ದಿನಗಳ ಕಾಲ ನಡೆಯಲಿರುವ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಚೇಳಾಯರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳ ವಾರ್ಷಿಕ ಜಾತ್ರೆ ನಡೆಯಲಿದೆ ಎಂದು ತೋಕೂರು ಗುತ್ತು ಉದಯ್ ಕುಮಾರ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಮೇ 14ರಂದು ಬೆಳಿಗ್ಗೆ ಗಂಟೆ 9ಕ್ಕೆ ಮೂಲಸ್ಥಾನದಲ್ಲಿ ಶುದ್ಧಕಲಶ, ಗಣಹೋಮ, ಬೆಳಿಗ್ಗೆ ಗಂಟೆ 11ಕ್ಕೆ ಸಂಕ್ರಮಣ ಪೂಜೆ, 12 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 8ಕ್ಕೆ ಮಹಾ ಅನ್ನಸಂತರ್ಪಣೆ, ರಾತ್ರಿ 9 ಗಂಟೆಗೆ ಬ್ರಹ್ಮಸ್ಥಾನದಲ್ಲಿ ಬ್ರಹ್ಮರಿಗೆ ತಂಬಿಲ, ಕುಮಾರ ಸಿರಿಗಳ ದರ್ಶನ, ಧರ್ಮದ ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳ ಭಂಡಾರ ಮೂಲಸ್ಥಾನ ಹೋಗುವುದು. ಸಿಡಿಮದ್ದು ಪ್ರದರ್ಶನ ನಂತರ ಧ್ವಜಾರೋಹಣ ನಡೆಯಲಿದೆ.
ಮೇ 15 ಗುರುವಾರದಂದು ಬೆಳಿಗ್ಗೆ ಗಂಟೆ 5-00ಕ್ಕೆ ಧರ್ಮರಸು ಶ್ರೀ ಉಳ್ಳಾಯ, ಇಷ್ಟದೇವತೆ, ಬಬ್ಬರ್ಯ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನಂತರ ನಂದಿಗೋಣ ಕುಮಾರ ಸಿರಿಗಳ ಭೇಟಿ
ಬೆಳಿಗ್ಗೆ ಗಂಟೆ 7ಕ್ಕೆ ನಾಗದೇವರಿಗೆ ಭಕ್ತಾದಿಗಳಿಂದ ತಂಬಿಲ ಸೇವೆ
ಸಂಜೆ ಗಂಟೆ 4-30ಕ್ಕೆ ಬಾಕಿಮಾರು ಗದ್ದೆಯಲ್ಲಿ ಚೆಂಡು, ಸಂಜೆ ಗಂಟೆ 6ಕ್ಕೆ ಜಾರಂದಾಯ, ಬಂಟ, ಕೊಡಮಣಿತ್ತಾಯ ದೈವಗಳಿಗೆ ಜೋಡಿ ನೇಮೋತ್ಸವ ಬಾಕಿಲ್ ದಾಂತಿ ಶ್ರೀ ಕೋರ್ದಬ್ಬು ದೈವಸ್ಥಾನದ ಕೋರಬ್ಬು ಮತ್ತು ಧೂಮಾವತಿ ದೈವದ ಭೇಟಿ ನಡೆಯಲಿದೆ.
ರಾತ್ರಿ ಗಂಟೆ 7ಕ್ಕೆ ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳಿಗೆ ಸಾಮೂಹಿಕ ಹೂವಿನ ಪೂಜೆ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ. ರಾತ್ರಿ ಗಂಟೆ 8ಕ್ಕೆ ಧ್ವಜಾವರೋಹಣ ನಡೆದು ಖಂಡಿಗೆ ಬೀಡಿಗೆ ಭಂಡಾರ ನಿರ್ಗಮನವಾಗಲಿದೆ.
ಮೇ14ರ ಸಂಜೆ ಗಂಟೆ 5ಕ್ಕೆ ಸರಿಯಾಗಿ ಯಕ್ಷಮಣಿ ಕಲಾ ತಂಡ ಚೇಳಾಯರು ಇವರಿಂದ ಸುದರ್ಶನ ಗರ್ವ ಭಂಗ ಭಾರ್ಗವ ವಿಜಯ ಯಕ್ಷಗಾನ ಬಯಲಾಟ ನಡೆಯಲಿದೆ.
ಮೇ 15ರಂದು ಗುರುವಾರ ರಾತ್ರಿ 8ಕ್ಕೆ ಚೈತನ್ಯ ಕಲಾವಿದರು ಬೈಲೂರು ಇವರಿಂದ ಅಷ್ಟೆಮಿ ತುಳು ನಾಟಕ ಜರುಗಲಿದೆ.
ಮೇ 24ನೇ ಶನಿವಾರ ರಾತ್ರಿ ಗಂಟೆ 9ಕ್ಕೆ ಕಲ್ಕುಡ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ಇದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ದಿವಾಕರ್ ಸಾಮಾನಿ ಚೇಳಾಯರು, ನಾಗರಾಜ್ ಭಟ್, ದಯಾನಂದ ಶೆಟ್ಟಿ ಖಂಡಿಗೆ ಬೀಡು, ಆಶಿಕ್ ಭಟ್, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ದೈವಸ್ಥಾನದ ಕಾರ್ಯದರ್ಶಿ ಚರಣ್ ಕುಮಾರ್, ಕೋಶಾಧಿಕಾರಿ ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.