ಎ.11ರಂದು ಪುರಭವನದಲ್ಲಿ ಮೀನುಗಾರ ಮಹಿಳೆಯರ ಸಮಾವೇಶ. 12ರಂದು ಶನಿ, ಸತ್ಯನಾರಾಯಣ ಪೂಜೆ

ಮಂಗಳೂರು: ಮೀನುಗಾರ ಮಹಿಳೆಯರ ಮೀನು ಮಾರಾಟ ಮಂಡಳಿಗೆ 25 ವರ್ಷಗಳನ್ನು ಪೂರೈಸುತ್ತಿದ್ದು, ಈ ನಿಟ್ಟಿನಲ್ಲಿ ಎಪ್ರಿಲ್ 11 ಶುಕ್ರವಾರದಂದು ಮಂಗಳೂರಿನ ಪುರಭವನದಲ್ಲಿ ಮೀನುಗಾರ ಮಹಿಳೆಯರ ಸಮಾವೇಶವನ್ನು ಬೆಳಿಗ್ಗೆ 9ಕ್ಕೆ ಹಮ್ಮಿಕೊಂಡಿದ್ದೇವೆ. ಎಪ್ರಿಲ್ 12ರಂದು ಸ್ಟೇಟ್‌ ಬ್ಯಾಂಕ್ ಮೀನು ಮಾರುಕಟ್ಟೆಯ ಅಶ್ವಥಕಟ್ಟೆಯಲ್ಲಿ ಶನಿಪೂಜೆ ಇದೆ. ಮೀನುಗಾರ ಮಹಿಳೆಯರ ವ್ಯಾಪಾರಕ್ಕೆ ಭದ್ರತೆ, ಸಾಮಾಜಿಕ ಸೌಲಭ್ಯಕ್ಕಾಗಿ, ಸ್ವಾಭಿಮಾನದ ಬದುಕಿಗಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತೃಪ್ತಿ ಸುವರ್ಣ ಹೇಳಿದರು.

ಮಂಗಳೂರು ಮೀನುಗಾರ ಮಹಿಳೆಯರ ಮೀನು ಮಾರಾಟ ಮಂಡಳಿ (ರಿ) ವತಿಯಿಂದ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 100 ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಸ್ಟೇಟ್‌ ಬ್ಯಾಂಕ್ ಮೀನು ಮಾರ್ಕೆಟನ್ನು 1998ರ ಸಮಯದಲ್ಲಿ ಸ್ಟೇಟ್‌ ಬ್ಯಾಂಕ್ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸುವ ಪ್ರಕ್ರಿಯೆಗಳು ಮಂಗಳೂರು ಮಹಾನಗರ ಪಾಲಿಕೆಯಿಂದ ನಡೆದಾಗ, ಮೀನುಗಾರ ಮಹಿಳೆಯರು ಒಟ್ಟಾಗಿ ಹೋರಾಟವನ್ನು ನಡೆಸಿ, ಮೀನು ಮಾರ್ಕೆಟ್ ಉಳಿಸಿ ಅಭಿಯಾನಕ್ಕೆ ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಜೊತೆ ಸೇರಿ ಹೋರಾಟಕ್ಕೆ ಬೆಂಬಲ ನೀಡಿದ ಪರಿಣಾಮ 2000ನೇ ಇಸವಿಯಲ್ಲಿ ಹೋರಾಟಕ್ಕೆ ಬೆಂಬಲ ದೊರೆತು ಸ್ಥಳಾಂತರಿಸುವ ಆದೇಶವನ್ನು ಮ.ನಾ.ಪ. ಹಿಂಪಡೆಯಿತು.

ಆ ಬಳಿಕ ಹಿಂದೂ ಯುವಸೇನೆ ಮೀನುಗಾರ ಮಹಿಳೆಯರ ಮೀನು ಮಾರಾಟ ಮಂಡಳಿ (ರಿ) ಎಂದು ನೊಂದಾವಣೆಗೊಂಡು ವ್ಯಾಪಾರದ ಜೊತೆಯಲ್ಲಿ ಧಾರ್ಮಿಕ ಹಾಗೂ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ದೇವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮ ಕಲಶೋತ್ಸವಕ್ಕೆ ಹೊರೆಕಾಣಿಕೆ, ಆರ್ಥಿಕ ಸಹಕಾರ ನೀಡುತ್ತಾ ಬಂದಿರುತ್ತೇವೆ. ಹಾಗೆಯೇ ಸಮಾಜದಲ್ಲಿ ತೀರ ಸಂಕಷ್ಟಕ್ಕೊಳಗಾದವರಿಗೆ, ಅನಾರೋಗ್ಯ ಪೀಡಿತರಿಗೆ, ಶೈಕ್ಷಣಿಕ ವಿದ್ಯಾರ್ಜನೆಗೆ ಆರ್ಥಿಕ ಸಹಕಾರವನ್ನು ನೀಡುವುದರ ಮೂಲಕ ಸಮಾಜದ ಚಿಂತನೆಯಲ್ಲಿ ಕಾರ್ಯಪ್ರವೃತ್ತವಾಗಿದೆ ನಮ್ಮ ಸಂಸ್ಥೆ ಎಂದರು.

ಸರಿಸುಮಾರು 250ಕ್ಕೂ ಅಧಿಕ ವ್ಯಾಪಾರಿಗಳು ಇರುವ ಮೀನು ಮಾರುಕಟ್ಟೆಯಲ್ಲಿ ಅಶ್ವಥಕಟ್ಟೆಯನ್ನು ನಿರ್ಮಿಸಿ ಪ್ರತೀ ವರ್ಷ ಶನಿ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಮಾಡುತ್ತಾ ಬಂದಿದ್ದೇವೆ. ಪ್ರಸ್ತುತ ನಮ್ಮ ಮೀನುಗಾರ ಮಹಿಳೆಯರ ಮೀನು ಮಾರಾಟ ಮಂಡಳಿಗೆ 25 ವರ್ಷಗಳನ್ನು ಪೂರೈಸುತ್ತಿದ್ದು, ಈ ನಿಟ್ಟಿನಲ್ಲಿ ಎಪ್ರಿಲ್ 11 ಶುಕ್ರವಾರದಂದು ಮಂಗಳೂರಿನ ಪುರಭವನದಲ್ಲಿ ಮೀನುಗಾರ ಮಹಿಳೆಯರ ಸಮಾವೇಶವನ್ನು ಬೆಳಿಗ್ಗೆ 9ಕ್ಕೆ ಹಮ್ಮಿಕೊಂಡಿದ್ದೇವೆ. ಮೀನುಗಾರ ಮಹಿಳೆಯರ ವ್ಯಾಪಾರಕ್ಕೆ ಭದ್ರತೆ, ಸಾಮಾಜಿಕ ಸೌಲಭ್ಯಕ್ಕಾಗಿ, ಸ್ವಾಭಿಮಾನದ ಬದುಕಿಗಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದ ಉದ್ಘಾಟನೆಯನ್ನು ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್‌ರವರು ನೆರವೇರಿಸಲಿದ್ದು, ಕರ್ನಾಟಕ ಸರಕಾರದ ಸಭಾಪತಿ ಯು. ಟಿ.ಖಾದ‌ರ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಯಶ್‌ಪಾಲ್ ಸುವರ್ಣ, ಉಡುಪಿ ಹಾಗೂ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಿದ್ದೇವೆ. ಹಾಗೆಯೇ ಎಪ್ರಿಲ್ 12ರಂದು ಸ್ಟೇಟ್‌ ಬ್ಯಾಂಕ್ ಮೀನು ಮಾರುಕಟ್ಟೆಯ ಅಶ್ವಥಕಟ್ಟೆಯಲ್ಲಿ ಶನಿಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ, ಅನ್ನದಾನ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವೇದಿಕೆಯಲ್ಲಿ ಬೇಬಿ ಎಸ್. ಕುಂದರ್, ಭಾಸ್ಕರ್‌ಚಂದ್ರ ಶೆಟ್ಟಿ, ಎಂ. ಮೋಹನ್ ಕುಲಾಲ್, ವಿಶಾಲಿನಿ ವಿ. ಸಾಲಿಯಾನ್ ಉಪಸ್ಥಿತರಿದ್ದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

 

  • Beta

Beta feature

error: Content is protected !!