ಪಪುವಾ: ನ್ಯೂಗಿನಿಯಾ ದೇಶದ ನ್ಯೂ ಬ್ರಿಟೈನ್ ದ್ವೀಪದ ಕರಾವಳಿಯಲ್ಲಿ ಶನಿವಾರ ಮುಂಜಾನೆ 6.9 ತೀವ್ರತೆಯ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸ್ಥಳೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 6.04 ಗಂಟೆ ವೇಳೆಗೆ 10 ಕಿಲೋಮೀಟರ್ ಆಳದಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೊಲಾಜಿಕಲ್ ಸರ್ವೇ ಹೇಳಿದೆ. ರಾಜಧಾನಿ ಕಿಂಬೆಯ ಆಗ್ನೇಯಕ್ಕೆ 194 ಕಿಲೋಮೀಟರ್ ದೂರದಲ್ಲಿ ಕಂಪನ ಸಂಭವಿಸಿದೆ.
ಭೂಕಂಪದ ಹಿನ್ನೆಲೆಯಲ್ಲಿ 1 ಮೀಟರ್ ಎತ್ತರದಿಂದ ಮೂರು ಮೀಟರ್ ಎತ್ತರದವರೆಗಿನ ದೈತ್ಯ ಅಲೆಗಳು ಸೋಲೊಮನ್ ದ್ವೀಪದ ಭಾಗದಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಯುಎಸ್ ಫೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಹೇಳಿದೆ.