ಮಂಗಳೂರು: ನಂದಿ ರಥಯಾತ್ರೆ ಸ್ವಾಗತ ಸಮಿತಿ ಮಂಗಳೂರು, ಗೋಸೇವಾ ಗತಿವಿಧಿ ಕರ್ನಾಟಕ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ (ರಿ), ಪುದು ಬಂಟ್ವಾಳ ಇದರ ಆಶ್ರಯದಲ್ಲಿ 95 ದಿನಗಳ ಕಾಲ, ಕರ್ನಾಟಕ ರಾಜ್ಯದಾದ್ಯಂತ ನಂದಿ ರಥಯಾತ್ರೆ ಸಂಚರಿಸಿ, ಮಂಗಳೂರಿನಲ್ಲಿ ಏಪ್ರಿಲ್ 5 ಶನಿವಾರದಂದು, ರಾಜ್ಯಮಟ್ಟದ ಬೃಹತ್ ಸಮಾರೋಪ ಸಮಾರಂಭ ಸಂಜೆ 5.30 ಗಂಟೆಗೆ ಕದ್ರಿ ಮೈದಾನದಲ್ಲಿ ನಡೆಯಲಿರುವುದು. ಆ ಪ್ರಯುಕ್ತ ಮಧ್ಯಾಹ್ನ 3.30 ಗಂಟೆಗೆ ಡಾ| ಬಿ.ಆರ್. ಅಂಬೇಡ್ಕರ್ ಜ್ಯೋತಿ ವೃತ್ತದಿಂದ ಕದ್ರಿ ಮೈದಾನದವರೆಗೆ ನಂದಿ ರಥಯಾತ್ರೆಯ ಭವ್ಯ ಶೋಭಾಯಾತ್ರೆ ನಡೆಯಲಿರುವುದು ಎಂದು ಗೋಸೇವಾ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರಾದ ಪ್ರವೀಣ್ ಸರಳಾಯ ತಿಳಿಸಿದರು.
ಮಂಗಳೂರಿನ ಕದ್ರಿಯ ನಂದಿಯಾತ್ರೆ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕರಾವಳಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಎಸ್. ಗಣೇಶ್ ರಾವ್ ಶೋಭಾಯಾತ್ರೆ ಉದ್ಘಾಟನೆಗೊಳಿಸಲಿರುವರು. ವಿಶೇಷ ಆಕರ್ಷಣೆಯಾಗಿ ಜಿಲ್ಲೆಯ 108 ಕುಣಿತ ಭಜನಾ ತಂಡಗಳು ಭಾಗವಹಿಸವವು, ಮಾತೆಯರಿಂದ ಸಾಮೂಹಿಕ ವಿಷ್ಣು ಸಹಸ್ರ ನಾಮ ಪಠಣೆ, ಸ್ಯಾಕ್ರೋಫೋನ್, ಚೆಂಡೆ ವಾದನ, ಆಕರ್ಷಕ ಟ್ಯಾಬ್ಲೊಗಳು, ಜಾನಪದ ಗೊಂಬೆಗಳು ಪೂರ್ಣಕುಂಭ ಸ್ವಾಗತದೊಂದಿಗೆ ಭವ್ಯ ಶೋಭಾಯಾತ್ರೆ ಸಾಗಿ ಬರಲಿರುವುದು. ಬಳಿಕ ಸಂಜೆ 5:30 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪೂಜ್ಯ ಶ್ರೀ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ, ಕಾವೂರು, ಮಂಗಳೂರು ಇವರು ಉಪಸ್ಥಿತರಿರುವರು.
ಅಧ್ಯಕ್ಷತೆಯನ್ನು ಪೆಟ್ರೋಲಿಯಂ ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ವಹಿಸಲಿರುವರು. ಪ್ರಾಸ್ತಾವಿಕ ಭಾಷಣವನ್ನು ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರು, ಗೋಸೇವಾ ಗತಿವಿಧಿ ಪ್ರವೀಣ ಸರಳಾಯ ಮಾಡಲಿರುವರು.
ದಿಕ್ಕೂಚಿ ಭಾಷಣವನ್ನು ಅಖಿಲ ಭಾರತೀಯ ಸಂಯೋಜಕರು, ಗೋಸೇವಾ ಗತಿವಿಧಿ ಇದರ ಅಜಿತ್ ಪ್ರಸಾದ್ ಮಹಾಪಾತ್ರ ಮಾಡಲಿರುವರು. ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರುಗಳಾದ ಡಿ. ವೇದವ್ಯಾಸ ಕಾಮತ್, ಹಾಗೂ ಡಾ. ವೈ. ಭರತ್ ಶೆಟ್ಟಿ, ಗೋವಿಂದ ರೆಡ್ಡಿ ಶ್ರೀ ಸಾಯಿ ಸಂಸ್ಥೆ, ಮುದ್ದೇನಹಳ್ಳಿ, ಭಕ್ತಿಭೂಷಣ್ ದಾಸ್, ಅಧ್ಯಕ್ಷರು ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ (ರಿ). ಭಾಗವಹಿಸಲಿರುವರು.
ಸಭಾ ಕಾರ್ಯಕ್ರಮಕ್ಕೆ ಮುಂಚೆ ಸಂಜೆ 4.00 ಗಂಟೆಗೆ, ಕದ್ರಿ ಮೈದಾನದಲ್ಲಿ ಗೋಭಕ್ತಿ ಗಾನಸುಧಾ, ಶ್ರೀ ಶ್ರೀ ಕಾಳಿತನಯ ಉಮಾಮಹೇಶ್ವರ ಆಚಾರ್ಯರು, ಓಂಕಾರ ಜ್ಯೋತಿ ಆಶ್ರಮ ಚಿಕ್ಕಬಳ್ಳಾಪುರ ಇವರಿಂದ ನಡೆಯಲಿರುವುದು. ಈ ಸಂದರ್ಭ ಮಧ್ಯಾಹ್ನ 2.00 ಗಂಟೆಯಿಂದ ರಾತ್ರಿ ವರೆಗೆ ಕದ್ರಿ ಮೈದಾನದಲ್ಲಿ ದೇಶಿಯ ಗೋತಳಿಗಳ ಭರ್ಜರಿ ಪ್ರದರ್ಶನ- ಪುರಸ್ಕಾರ ಕಾರ್ಯಕ್ರಮ ಜರಗಲಿರುವುದು. ಗೋವುಗಳಲ್ಲಿ ಅಪರೂಪವಾಗಿರುವ ಗಜಗಾತ್ರದ ವಿಶೇಷ ತಳಿಗಳನ್ನು ಇಂದಿನ ಪೀಳಿಗೆ ಕಣ್ಣುಂಬಿಕೊಳ್ಳಲು ವಿಶೇಷ ಅವಕಾಶ, ಉತ್ತಮ ತಳಿಯ ದೇಶಿಯ ಗೋ ಪಾಲನೆ ಮಾಡುವವರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ತೀರ್ಪುಗಾರರ ಆಯ್ಕೆಯ ಗೋವುಗಳಿಗೆ ವಿಶೇಷ ಬಹುಮಾನಗಳ ಪುರಸ್ಕಾರ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಸುಮಾರು 10,000 ಕ್ಕೂ ಅಧಿಕ ಗೋ ಪ್ರೇಮಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್(ರಿ.) ಅಧ್ಯಕ್ಷರಾದ ಭಕ್ತಿಭೂಷಣ್ ದಾಸ್, ಅಧ್ಯಕ್ಷರಾದ ಗಿರಿಧರ್ ಶೆಟ್ಟಿ, ಎಚ್‌ಕೆ ಪುರಷೋತ್ತಮ, ವಿಹಿಂಪ ಮುಖಂಡ ಗೋಪಾಲ್ ಕುತ್ತಾರ್ ಮತ್ತಿತರರು ಉಪಸ್ಥಿತರಿದ್ದರು.
ಹಿನ್ನೆಲೆ:
ರಾಷ್ಟ್ರೀಯ, ಸಾಮಾಜಿಕ ಪರಿವರ್ತನೆಯ ಆರು ಗತಿ ವಿಧಿಗಳು (ಗೋಸೇವಾ, ಗ್ರಾಮ ವಿಕಾಸ, ಕುಟುಂಬ ಪ್ರಬೋಧನ್, ಸಾಮಾಜಿಕ ಸಾಮರಸ್ಯ, ಧರ್ಮ ಜಾಗರಣ, ಪರ್ಯಾವರಣ), ಆರು ವಿವಿಧ ಕ್ಷೇತ್ರಗಳು (ವಿಶ್ವ ಹಿಂದೂ ಪರಿಷತ್, ಸಹಕಾರ ಭಾರತೀ, ಭಾರತೀಯ ಕಿಸಾನ್ ಸಂಘ, ಸಂಸ್ಕಾರ ಭಾರತೀ, ಸ್ವದೇಶಿ ಜಾಗರಣ ಮಂಚ್, ಹಿಂದೂ ಜಾಗರಣ ವೇದಿಕೆ), ನಾಲ್ಕು ಸ್ವಯಂ ಸೇವಾ ಸಂಘಟನೆಗಳು/ ಸಜ್ಜನ ಶಕ್ತಿ(ಮಣ್ಣು ಉಳಿಸಿ ಸ್ವಯಂಸೇವಕರು, ಕೃಷಿ ಪ್ರಯೋಗ ಪರಿವಾರ, ಕೃಷಿ ಪದವೀಧರರ ಸಂಘಗಳು, ಜಿಜ್ಞಾಸ) ರಾಜ್ಯಮಟ್ಟದಲ್ಲಿ ಸೇರಿಕೊಂಡು, ಗೋಸೇವಾ ಗತಿವಿಧಿಯ ನೇತೃತ್ವದಲ್ಲಿ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ (ರಿ)ದ ಸಹಯೋಗದ ಜೊತೆ ಸರಣಿ ಬೈಠಕ್ ನಡೆಸಿ,ಯೋಜನೆ ರೂಪಿಸಿ, ಪರಿವಾರ ಸಂಘಟನೆಗಳ ಸಮಾಜದ ವಿವಿಧ ಸಜ್ಜನ ಶಕ್ತಿಗಳ ಸಹಕಾರದೊಂದಿಗೆ, ಸಂಪೂರ್ಣ ಸಮಾಜದ ಕೊಟ್ಟ ಕೊನೆಯ ವ್ಯಕ್ತಿಯನ್ನು ಒಳಗೊಂಡಂತೆ, ಭಾವನಾತ್ಮಕ ಭಾಗವಹಿಸುವಿಕೆ ಜೊತೆಗೆ ನಡೆಯುತ್ತಿರುವ ಯಾತ್ರೆ. 2024 ಡಿಸೆಂಬರ್ 31 ರಂದು ಬಂಟ್ವಾಳ ತಾಲೂಕಿನ, ಪುದು ಗ್ರಾಮದ ರಾಧಾ ಸುರಭೀ ಗೋ ಮಂದಿರದಲ್ಲಿ ನಂದಿ ರಥಯಾತ್ರೆಗೆ ಚಾಲನೆ.
ಈ ರಥಯಾತ್ರೆಯು ಗೋಸೇವಾ ಗತಿವಿಧಿ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಸಹಕಾರ ಭಾರತೀ, ಭಾರತೀಯ ಕಿಸಾನ್ ಸಂಘ, ಸಂಸ್ಕಾರ ಭಾರತೀ, ಸ್ವದೇಶಿ ಜಾಗರಣ ಮಂಚ್, ಮಣ್ಣು ಉಳಿಸಿ ಸ್ವಯಂಸೇವಕರು, ಗ್ರಾಮ ವಿಕಾಸ, ಕುಟುಂಬ ಪ್ರಬೋಧನ್, ಪರ್ಯಾವರಣ, ಸಾಮರಸ್ಯ, ಧರ್ಮ ಜಾಗರಣ ಗತಿವಿಧಿ ಕರ್ನಾಟಕ ಸಹಯೋಗದೊಂದಿಗೆ ಸಂಪನ್ನಗೊಂಡಿದೆ.
ನಂದಿ ರಥಯಾತ್ರೆಯ ಉದ್ದೇಶ
ವಿಷ ಮುಕ್ತ ಗಾಳಿ, ಮಣ್ಣು, ಆಹಾರ, ಪ್ರಕೃತಿ, ಪರಿಸರ ಸಂರಕ್ಷಣೆ, ಪಂಚಗವ್ಯ ಚಿಕಿತ್ಸೆ, ರೋಗಮುಕ್ತ ಭಾರತ, ಸಾಮೂಹಿಕ 1,11,108 ವಿಷ್ಣು ಸಹಸ್ರನಾಮ ಪಾರಾಯಣ, ಒಂದು ಕೋಟಿ ಗೋಮಯ ದೀಪ ಬೆಳಗಿಸುವುದು, ನಂದಿ ಪೂಜೆ, ಗೋಕಥೆ, ಮನೆ ಮನೆಯಲ್ಲಿ ಗೋವು, ದೇಶಿ ಗೋಮಾತೆಯ ಮಹಿಮೆ ಜನರಿಗೆ ತಿಳಿಸುವುದು, ದೇಶೀ ಗೋಮಾತೆ ಹಾಗೂ ಭೂಮಾತೆಗೆ ಇರುವ ಸಂಬಂಧ ಜನರಿಗೆ ತಿಳಿಸುವುದು, ಗೋಮಾತೆ ವಿಶ್ವ ಮಾತೆ-ಭಾರತ ವಿಶ್ವಗುರು, ಗೋಮಾತೆಗೆ ರಾಷ್ಟ್ರೀಯ ಮಾನ್ಯತೆ ದೊರೆಯುವಂತಾಗಲು, ಸಹಜ ಕೃಷಿ ವಿಸ್ತರಣೆ, ಸ್ವದೇಶಿ/ಗವ್ಯ ಉತ್ಪನ್ನ ಬಳಕೆಯ ಪ್ರಚಾರ. ಮಣ್ಣು ಉಳಿಸುವ ನಂದಿ ಕೃಷಿಕರ ಸಂಖ್ಯೆ ಹೆಚ್ಚಿಸುವುದು. ದೇಶಿಬೀಜ ಸಂರಕ್ಷಣೆ, ಧರ್ಮ ಜಾಗೃತಿ, ಸಾಮಾಜಿಕ ಸಾಮರಸ್ಯ, ಗ್ರಾಮ ವಿಕಾಸ, ಭಾರತೀಯ ಕುಟುಂಬ ಪದ್ಧತಿ ಸಂರಕ್ಷಣೆ, ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವುದು, ಉದ್ಯೋಗ ಸೃಷ್ಟಿ, ಋಣಮುಕ್ತ ಭಾರತ, ಸಮೃದ್ಧ ಭಾರತ, ವಿಶ್ವಗುರು ಭಾರತವನ್ನಾಗಿ ಮಾಡುವುದು.
ಯಾತ್ರೆ ಸಾಗಿ ಬಂದ ದಾರಿ
ಯಾತ್ರೆಯ ಅವಧಿ 95 ದಿನ. ಪ್ರಯಾಣದ ದಾರಿಯ ಉದ್ದ 9,000 ಕಿಲೋಮೀಟರಿಗೂ ಹೆಚ್ಚು. ಯಾತ್ರೆಯ ಉದ್ದಕ್ಕೂ ಸಹಸ್ರಾರು ಕಾರ್ಯಕರ್ತರು, ಲಕ್ಷಾಂತರ ಗೋ ಪ್ರೇಮಿ ಭಕ್ತರು ಸೇರಿಕೊಂಡು ಗೋ ಮಯ ಹಣತೆ ಉರಿಸುವುದು,ನಂದಿ ಪೂಜೆ ಮಾಡಿಸುವುದು, ವಿಷ್ಣು ಸಹಸ್ರನಾಮ ಪಠಣ, ಭಜನೆ ಪೂರ್ಣಕುಂಭದೊಂದಿಗೆ ರಥದ ಸ್ವಾಗತ ಕಾರ್ಯಕ್ರಮ, ಶಾಲಾ, ಕಾಲೇಜಿನ ಮಕ್ಕಳಲ್ಲಿ ಗೋವಿನ ಬಗ್ಗೆ ಜಾಗೃತಿ ಕಾರ್ಯಕ್ರಮ, ಧಾರ್ಮಿಕ, ಸಾಮಾಜಿಕ ನಾಯಕರ ಭಾಗವಹಿಸುವಿಕೆ, ಅಯೋಧ್ಯೆಯ ಪ್ರತಿಷ್ಠಾ ವರ್ಧಂತಿ ದಿನದಂದು ಎಲ್ಲಾ ಮನೆಯಲ್ಲಿ ಹಣತೆ ಉರಿಸಿ ರಾಮ ತಾರಕ ಮಂತ್ರ ಪಠಣ, ಶಿವರಾತ್ರಿ ದಿನದಂದು ಮುದ್ದೇನಹಳ್ಳಿ ಸದ್ಗುರು ಮಧುಸೂಧನ ಸಾಯಿ ಅವರ ಜಾಗತಿಕ ಮಾನವೀಯ ಸೇವಾ ಸಂಸ್ಥೆಯಲ್ಲಿ 2,000ಕ್ಕೂ ಅಧಿಕ ಮಂದಿ ಪ್ರತ್ಯಕ್ಷ ಭಾಗವಹಿಸುವಿಕೆಯ ಜೊತೆಗೆ, ಸಾಂಬ ಸದಾಶಿವ ಮಂತ್ರ ಪಠಣ, ಸಭಾ ಕಾರ್ಯಕ್ರಮ ವಿಶ್ವದ 82ಕ್ಕೂ ಅಧಿಕ ದೇಶಗಳಲ್ಲಿ ಪ್ರಸಾರ..ಬೆಂಗಳೂರಿನಲ್ಲಿ ರಾಜಭವನ ಪ್ರವೇಶಿಸಿ ರಾಜ್ಯಪಾಲರಿಂದ ನಂದಿ ಪೂಜೆ, ನಂದಿ ರಥಯಾತ್ರೆ ಬಗ್ಗೆ ಮಾಹಿತಿ ವಿನಿಮಯ. ಪ್ರತಿದಿನ ಸಂಜೆ ಸಂತರು, ಗಣ್ಯರ ಉಪಸ್ಥಿತಿಯಲ್ಲಿ ಗೋವಿನ ಮಹತ್ವವನ್ನು ಸಾರುವ ಸಭಾ ಕಾರ್ಯಕ್ರಮ, ಪಂಚಗವ್ಯ ಉತ್ಪನ್ನಗಳ ಪ್ರದರ್ಶನ, ಮಾಹಿತಿ, ಮಾರಾಟ 400 ರಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳು ಸಹಭಾಗಿ. ರಥ ಸಾಗಿದ ಪ್ರತಿ ಜಿಲ್ಲೆಯಲ್ಲಿ, ಅಲ್ಲಿನ ಎಸ್ಪಿ ಅವರಿಗೆ ರಥದ ಮಾಹಿತಿ ನೀಡಿ ಪರವಾನಿಗೆ ಪಡೆದಿರುವುದು ವಿಕೇಂದ್ರೀಕೃತ ವ್ಯವಸ್ಥೆ, ಕಾರ್ಯಕರ್ತರ ವಿಶ್ವಾಸ ಹೆಚ್ಚಿಸಿದ ಯೋಜನೆ ರೂಪಿಸಲಾಗಿದೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ